ಗುಮ್ಮಟ ನಗರಿಯಲ್ಲಿ ಮತ್ತೇ ಹರಿದ ನೆತ್ತರು

WEB LOGO
Published on

ವಿಜಯಪುರ : ನಾಲ್ಕೆದು ಜನರು ತಂಡವೊಂದು ಯುವಕನ ಮೇಲೆ ಹಾಡಹಗಲೇ ಮಾರಕಾಸಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಟನೆ ನಗರದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಇಲ್ಲಿನ ಗ್ಯಾಂಗ್​ ಬಾವಡಿ ನಿವಾಸಿ ಸುಶಿಲ್​ ಕಾಳೆ (34) ಮೃತ.

ಟನೆಯ ವಿವರ : ಬಿಎಲ್​ಡಿಇ ರಸ್ತೆಯ ಎಸ್​ಎಸ್​ ಕಾಂಪ್ಲೆಕ್ಸ್​ನಲ್ಲಿರುವ ಅಮೃತವರ್ಷಿಣಿ ವಿವಿಧ್ಧೋದೇಶಗಳ ಸೌಹಾರ್ದ ಸಹಕಾರಿ ಬ್ಯಾಂಕ್​ಗೆ ಸುಮಾರು ಮಧ್ಯಾಹ್ನ 12.30 ಆಗಮಿಸಿದ್ದ ಸುಶಿಲ್​ ಕಾಳೆ ಮೇಲೆ, ನಾಲ್ಕೆದು ಜನರ ತಂಡ ಏಕಾಏಕಿ ಮಾರಕಾಸಗಳಿಂದ ದಾಳಿ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಹಲ್ಲೆಯ ರಭಸಕ್ಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಶಿಲ್​ನನ್ನು ಸ್ಥಳಿಯರು ಪ್ಕಕದ ಬಿಎಲ್​ಡಿಇ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಚಿಕಿತ್ಸೆ ಫಲಕಾರಿಯಾಗದೇ ಸುಶಿಲ್​ ಅಸುನೀಗಿದ್ದಾನೆ.

ಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಗಾಂಧಿಚೌಕ ಠಾಣೆಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net