ಅಯೋಧ್ಯೆಯ ಚತುರ್ವೆದ ಸಂಹಿತಾಯಾಗದಲ್ಲಿ ಪಾಲ್ಗೊಳ್ಳುವ ಉತ್ತರ ಕನ್ನಡದ ವೈದಿಕರು ಇವರೇ….

gopalakrishna Bhat Handramane
Published on

ಯಲ್ಲಾಪುರ: ವಿಶ್ವ ಹಿಂದು ಪರಿಷತ್ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಅಯೋಧ್ಯೆ ಯಲ್ಲಿ ಜು. 21 ರಿಂದ 28 ರವರೆಗೆ ನಡೆಯುವ ಚತುರ್ವೆದ ಸಂಹಿತಾಯಾಗದಲ್ಲಿ ಸೇವಾರ್ಥವಾಗಿ ಪಾಲ್ಗೊಳ್ಳಲು ಯಲ್ಲಾಪುರ, ಹೊನ್ನಾವರ, ಸುತ್ತಮುತ್ತಲಿನಿಂದ 40 ವೈದಿಕರು ತೆರಳಲಿದ್ದಾರೆ ಎಂದು ಜ್ಯೋತಿಷಿ ವೇ. ಗೋಪಾಲಕೃಷ್ಣ ಭಟ್ ಹಂಡ್ರಮನೆ ಹೇಳಿದರು.

ಅವರು ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಋಗ್ವೇದ, ಯಜುರ್ವೆದ, ಸಾಮವೇದ, ಶುಕ್ಲ ಯಜುರ್ವೆದ ಸಂಹಿತಾಯಾಗ ನಡೆಯಲಿದೆ.

ರಾಮ ಜನ್ಮಭೂಮಿಯಲ್ಲಿ ನಡೆಯುವ ಈ ಯಾಗದಲ್ಲಿ ಋಗ್ವೇದದಲ್ಲಿ ಗುರುಪಾದ ಭಟ್, ಯಜುರ್ವೆದದಲ್ಲಿ ಚಿನ್ಮಯ ಜೋಷಿ, ಚನ್ನಕೇಶವ ಅವಧಾನಿ ನಿಟ್ಟೂರು, ಸಾಮವೇದದಲ್ಲಿ ವಿನಾಯಕ ಸಾಮಗ ಕವಲಕ್ಕಿ, ಗಜಾನನ ಭಟ್ಟ, ಶುಕ್ಲ ಯಜುರ್ವೆದದಲ್ಲಿ ಗಿರೀಶ ಭಟ್, ವಾಲ್ಮೀಕಿ ರಾಮಾಯಣದಲ್ಲಿ ವೆಂಕಟ್ರಮಣ ಭಟ್, ಭಾಗವತಕ್ಕೆ ಗಣಪತಿ ಭಟ್ ಕವಲಕ್ಕಿ ಅವರ ನೇತೃತ್ವದಲ್ಲಿ ವೈದಿಕರು ಭಾಗವಹಿಸಲಿದ್ದಾರೆ. ಯಾವುದೇ ಅಪೇಕ್ಷೆ ಇಲ್ಲದೇ ಸೇವಾ ಮನೋಭಾವದಿಂದ ಭಾಗವಹಿಸಲಿದ್ದಾರೆ ಎಂದರು.

ಅಖಿಲ ಹವ್ಯಕ ಮಹಾಸಭಾ ನಿರ್ದೇಶಕ ಪ್ರಶಾಂತ ಹೆಗಡೆ, ಎಲ್.ಎಸ್.ಎಂ.ಪಿ. ಸೊಸೈಟಿ ಉಪಾಧ್ಯಕ್ಷ ಟಿ.ಆರ್. ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net