ಎಲ್ಲರ ಗಮನ ಸೆಳೆಯಿತ್ತು ದರ್ಶನ್​ ಟೀಶರ್ಟ್‌ ಮೇಲಿದ್ದ ಈ 4 ಸಂದೇಶ; ನೀವೂ ಗಮನಿಸಿದ್ರಾ?

darshan (2)
Published on

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಟ ದರ್ಶನ್​ಗೆ ರಾಜ್ಯಾತಿಥ್ಯ ಕೊಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ ದರ್ಶನ್​ ಮತ್ತು ಗ್ಯಾಂಗ್​ನ ಬೇರೆ ಜೈಲಿಗೆ ಶಿಫ್ಟ್​​ ಮಾಡಲಾಗಿದೆ.  ದರ್ಶನ್​​ ಬಳ್ಳಾರಿ ಜೈಲಿಗೆ ಶಿಫ್ಟ್​​ ಆಗುತ್ತಿದ್ದಂತೆ  ಅವರ ಕುರಿತಾಗಿ ಕೆಲವು ಇಂಟ್ರಸ್ಟಿಂಗ್​ ವಿಚಾರಗಳು ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ದರ್ಶನ್ ಜೈಲಿಗೆ ಬರುವವಾಗ ಕೈಯಲ್ಲಿ ಕೂಲಿಂಗ್​ ಗ್ಲಾಸ್​, ಬೆಡ್​ ಶಿಟ್​​, ನೀರಿನ ಬಾಟೆಲ್​ ಹಿಡಿದು ಪೂಮಾ ಬ್ರ್ಯಾಂಡೆಡ್​ ಟೀಶರ್ಟ್​ ಧರಿಸಿ ಜೈಲಿಗೆ ಎಂಟ್ರಿಯಾಗಿದ್ದಾರೆ.  ದರ್ಶನ್​​ ಅವರ ಈ ಲುಕ್​​ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. 

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಬಂದ ನಟ ದರ್ಶನ್‌  ಧರಿಸಿದ್ದ ಟೀಶರ್ಟ್‌ ವಿಶೇಷವಾಗಿತ್ತು. ಅದರ ಮೇಲೆ 4 ಪ್ರಮುಖ ಸಂದೇಶಗಳು ಬರೆದಿದ್ದು, ನಟ ದರ್ಶನ್‌ ಧರಿಸಿದ್ದ ಟೀ ಶರ್ಟ್‌ ಮೇಲೆ ಜಸ್ಟೀಸ್‌ (ನ್ಯಾಯ), ಡಿಗ್ನಿಟಿ (ಘನತೆ) ಇಕ್ವಾಲಿಟಿ (ಸಮಾನತೆ), ಪೀಸ್‌ (ಶಾಂತಿ) ಎಂಬ ನಾಲ್ಕು ಪದಗಳ ಸಂದೇಶಗಳು ಇದ್ದವು. ಈ ಟೀಶರ್ಟ್‌ ಅನ್ನೇ ನಟ ಧರಿಸುವ ಮೂಲಕ ಅಭಿಮಾನಿಗಳಿಗೆ ಉತ್ತಮ ಸಂದೇಶ ನೀಡಿದರೆ ಎಂಬ ಚರ್ಚೆಗಳು ಕೇಳಿಬಂದಿವೆ.

ದರ್ಶನ್ ನೋಡಲು ಬಳ್ಳಾರಿ ಜೈಲಿನ ಬಳಿ ಅಭಿಮಾನಿಗಳು ಜಮಾಯಿಸಿದ್ದರು. ದರ್ಶನ್​ ಇದ್ದ ವಾಹನ ಬರುತ್ತಿದ್ದಂತೆಯೇ ದರ್ಶನ್, ದರ್ಶನ್ ಎಂದು ಅಭಿಮಾನಿಗಳು ಕೂಗಿದ್ದಾರೆ.

ಹೊರ ಭದ್ರತಾ ವಿಭಾಗದಲ್ಲಿ ಒಟ್ಟು 11 ಸೆಲ್‌ಗಳಿದ್ದು, ಒಂದು ಸೆಲ್‌ನಲ್ಲಿ ಇಬ್ಬರು ಕೈದಿಗಳು ಇರುವ ವ್ಯವಸ್ಥೆ ಇದೆ. ಪ್ರತಿಯೊಂದು ಸೆಲ್ 10/10 ಅಡಿ ಅಗಲವನ್ನು ಹೊಂದಿದೆ. ಇಲ್ಲಿರುವ ಹನ್ನೊಂದು ಸೆಲ್‌ಗಳಿಗೆ ದಿನದ 24 ಗಂಟೆಯೂ ಭದ್ರತೆ ವ್ಯವಸ್ಥೆ ಮಾಡಲಾಗುತ್ತದೆ. ಸೆಲ್ ಮುಂಭಾಗ 20 ಅಡಿ ಅಗಲ 60 ಅಡಿ ಉದ್ದದ ಜಾಗದಲ್ಲಿ ವಾಕಿಂಗ್ ಮಾಡಬಹುದು. ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು 15 ನಿಮಿಷ ಅವಕಾಶವಿದೆ. ಈ ವೇಳೆ ಭದ್ರತೆ ಸಿಬ್ಬಂದಿ ಕೂಡ ಹಾಜರಿರುತ್ತಾರೆ.

ಸೆಲ್‌ನ ಒಳಗಡೆ ಬಾತ್ ರೂಂ, ಶೌಚಾಲಯದ ವ್ಯವಸ್ಥೆ ಇದ್ದು, ಸ್ನಾನ ಮಾಡಲು ತಣ್ಣೀರು ಮಾತ್ರ ಇರುತ್ತದೆ. ಈ ಸೆಲ್‌ಗೆ ಎರಡು ಗೇಟ್‌ಗಳಿರುತ್ತವೆ. ಇಲ್ಲಿರುವ ಹನ್ನೊಂದು ಸೆಲ್ ಗಳಲ್ಲಿ ಸದ್ಯ ಶಿವಮೊಗ್ಗ, ಹಾಸನ,ಬೆಂಗಳೂರು, ಮಂಗಳೂರು ಮೂಲದ ಕೈದಿಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net