ಅಭಿವೃದ್ಧಿಗೆ ಅನುದಾನ ಕೊರತೆ ಆಗದು

19MKH1
Published on

ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಅಭಿವದ್ಧಿಗೆ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಶ್ರಮಿಸಬೇಕು. ಅಭಿವದ್ಧಿ ಕಾರ್ಯಗಳಿಗೆ ಅಗತ್ಯ ಅನುದಾನ ತಂದುಕೊಡುವೆ. ಮೂಲಸೌಕರ್ಯಗಳ ಕೊರತೆಯಾಗದಂತೆ ಅಧಿಕಾರಿಗಳೂ ನಿಗಾವಹಿಸಬೇಕು. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಪಟ್ಟಣದ ಸಮಗ್ರ ಅಭಿವದ್ಧಿ ಮಾಡಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಕೊಳಚೆ ನೀರು ಯಾವುದೇ ಕಾರಣಕ್ಕೂ ಕೆರೆಗೆ ಸೇರದಂತೆ ನೋಡಿಕೊಳ್ಳಬೇಕು. ಮುಲಾಜಿಲ್ಲದೆ ಅನಧಿಕತ ಮಳಿಗೆಗಳನ್ನು ತೆರವುಗೊಳಿಸಬೇಕು ಎಂದರು. ಅಗತ್ಯ ಜಾಗ ಒದಗಿಸಿದರೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಆದಷ್ಟು ಬೇಗ ಅನುದಾನ ತರಲಾಗುವುದು. ಶೀಘ್ರದಲ್ಲೇ ಸರ್ಕಾರದಿಂದ ಆಶ್ರಯ ಮನೆ ನೀಡಲಿದ್ದು, ಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು, ಸದಸ್ಯರು ನಿಗಾವಹಿಸಬೇಕೆಂದು ತಿಳಿಸಿದರು.

ನೂತನ ಬಡಾವಣೆಗಳಲ್ಲಿ ಮೂಲಸೌಕರ್ಯಗಳಿಲ್ಲದಿದ್ದರೂ ಪಪಂಗೆ ಹಸ್ತಾಂತರಿಸಿಕೊಂಡಿದ್ದು ಎಷ್ಟು ಸರಿ ಎಂದು ಸದಸ್ಯರೆಲ್ಲರೂ ಅಧಿಕಾರಿಗಳನ್ನು ಪ್ರಶ್ನಿಸಿದರು. ತಕ್ಷಣವೇ ಅವುಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಪಪಂ ಮುಖ್ಯಾಧಿಕಾರಿ ರವಿ ಮಾಸ್ತಿಹೊಳಿಮಠ, ಸಮುದಾಯ ಸಂಘಟನಾಧಿಕಾರಿ ಎ.ಎಸ್. ಶೆಟ್ಟರ್, ಪಪಂ ಅಧ್ಯಕ್ಷ ಪ್ರಕಾಶ ಕೊಡ್ಲಿ, ಸದಸ್ಯರಾದ ದೇಮಪ್ಪ ಬಸರಗಿ, ಗದಿಗೆವ್ವ ಜಂಗಳಿ, ದೊಡ್ಟಪ್ಪ ಗಣಾಚಾರಿ, ಪ್ರಕಾಶ ಗಿರಜಿಮನಿ, ಲಕ್ಷ್ಮೀ ನಾಗನೂರ, ಸುರೇಶ ಮುತ್ನಾಳ, ಸಾವಿತ್ರಿ ಹೊನ್ನಣ್ಣವರ, ಸುಶೀಲಾ ಗಣಾಚಾರಿ, ಸುಬಾನಿ ಅಗಸಿಬಾಗಿಲ, ಸಮೀರ್ ಪಟೇಲ್, ಮಂಗಳಾ ದೇಮಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net