ಮೈಸೂರಿನ ಅನೇಕ ಬಡಾವಣೆಗಳಲ್ಲಿ ಮೇ 14 ರಂದು ವಿದ್ಯುತ್ ಇರಲ್ಲ

pngtree-light-bulb-vector-glowing-bright-light-bulb-icon-fluorescent-invention-3d-png-image_1788706
Published on

ಮೈಸೂರು: ಚಾಮುಂಡೇಶ್ವರಿ ವಿದ್ಯುತ್ ವಿತರಣ ನಿಗಮದ ದೇವನೂರು ಹಾಗೂ ರಾಜೀವ್ ನಗರದ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕಾರಣ ಮೇ 14 ರಂದು ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ನಗರದ ಕೆಲ ಭಾಗದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಬಿ.ಡಿ.ಕಾಲನಿ, ಅಜೀಜ್ ಸೇಠ್ ನಗರ, ಮಹದೇವಪುರ ಮುಖ್ಯ ರಸ್ತೆ, ಶಕ್ತಿನಗರ, ರಾಜ್‌ಕುಮಾರ್ ರಸ್ತೆ, ಕಲ್ಯಾಣಗಿರಿ, ಅಕ್ಷಯ ಭಂಡಾರ್, ರಮ್ಮನಹಳ್ಳಿ, ಕಾಳಿಸಿದ್ದನಹುಂಡಿ, ಹಂಚ್ಯ, ಸಾತಗಳ್ಳಿ, ಗಳಿಗರಹುಂಡಿ, ನೆಹರು ನಗರ, ಸಾತಗಳ್ಳಿ ಗ್ರಾಮ, ಡಿ.ಟಿ.ಎಸ್.ರಾವ್ ನಗರ, ವಿ.ಟಿ.ಯೂ. ಕಾಲೇಜು ಮತ್ತು ಎದುರು, ಸನ್ ಪ್ಯೂರ್ ಬಡಾವಣೆ, ಸಾತಗಳ್ಳಿ ಬಿ. ಜೋನ್, ಭಾರತ್ ನಗರ, ರಾಜೀವನಗರ 2ನೇ ಹಂತ, ಕ್ರಿಶ್ಚಿಯನ್ ಕಾಲನಿ, ಯಾಸಿನ್ ಮಸ್ಜಿದ್, ಸೂರ್ಯನಾರಾಯಣ ದೇವಸ್ಥಾನ ರಸ್ತೆ, ಆಲ್ ಬಜಾರ್ ಮಸ್ಜಿದ್ ವೃತ್ತ, ಅಂಬೇಡ್ಕರ್ ಭವನ ರಸ್ತೆ, ಕ್ಯೂಬಾ ಮಸ್ಜಿದ್ ವೃತ್ತ, ನಾರಾಯಾಣ ಹೃದಯಾಲದ ಆಸ್ಪತ್ರೆ, ಕಾಮನಕೆರೆಹುಂಡಿ, ಕೆ.ಎಚ್.ಬಿ. ಬಡಾವಣೆ, ಆರ್‌ಟಿಓ-55, ಆಸೀನಾ ಬಡಾವಣೆ, ರಾಜೀವನಗರ 3ನೇ ಹಂತ ಹಾಗೂ ಸುತ್ತ-ಮುತ್ತಲಿನ ಪ್ರದೇಶದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net