

ಮಂಗಳೂರು: ಮೆಸ್ಕಾಂ 33/11 ಕೆವಿ ಮಣ್ಣಗುಡ್ಡ ಉಪಕೇಂದ್ರದಿಂದ ಹೊರಡುವ 11ಕೆವಿ ಲಾಲ್‌ಭಾಗ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ನ.9ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಣ್ಣಗುಡ್ಡ, ಹಿಂದಿಪ್ರಚಾರ ಸಮಿತಿ, ನೆಹರೂ ಅವೆನ್ಯೂ ರೋಡ್, ಲಾಲ್‌ಭಾಗ್, ಪಬ್ಬಾಸ್, ಲೇಡಿಹಿಲ್ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 110/33/11ಕೆವಿ ಎಸ್.ಆರ್.ಎಸ್. ಕಾವೂರು ಉಪಕೇಂದ್ರದಿಂದ ಹೊರಡುವ 11ಕೆವಿ ವಾಮಂಜೂರು ಫೀಡರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಪಚ್ಚನಾಡಿ, ದೇವಿನಗರ, ವಾಮಂಜೂರು, ಮಂಗಳಾನಗರ, ಅಮೃತನಗರ, ಆರ್.ಟಿ.ಒ ಟೆಸ್ಟ್ ಯಾರ್ಡ್, ಸಂತೋಷನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.