ಕುವೆಂಪು ಮಾತಿಗೂ ಕೃತಿಗೂ ಇರಲಿಲ್ಲ ಅಂತರ

30-ANP-P2 IRUVAKKI V V
ಇರುವಕ್ಕಿ ಕೃಷಿ ವಿವಿಯಲ್ಲಿ ಹಸೆ ಚಿತ್ತಾರ ಬಿಡಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಲಾಯಿತು. ಕೆ.ಸಿ.ಶಶಿಧರ, ಡಾ. ಶಶಿಕಲಾ ಇತರರಿದ್ದರು.
Published on

ಆನಂದಪುರ: ವಿಶ್ವ ಮಾನವ ಸಂದೇಶ ಸಾರಿದ ಮಹಾಕವಿ ಕುವೆಂಪು ಅವರು ತಮ್ಮ ಬದುಕು ಮತ್ತು ಬರಹದಲ್ಲಿ ಒಂದೇ ಆಗಿದ್ದರು ಎಂದು ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಷಯಗಳ ವಿಶ್ವವಿದ್ಯಾಲಯದ ಕುಲಸಚಿವ ಕೆ.ಸಿ.ಶಶಿಧರ ತಿಳಿಸಿದರು.

ವಿವಿ ಆವರಣದಲ್ಲಿ ಶುಕ್ರವಾರ ಕುವೆಂಪು ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಕುವೆಂಪು ಅವರ ಮಾತಿಗೂ ಕೃತಿಗೂ ಯಾವುದೇ ಅಂತರವಿರಲಿಲ್ಲ. ನಾವೂ ಆ ರೀತಿ ಬದುಕಿದರೆ ಇಡೀ ಜಗತ್ತು ಒಂದು ಕುಟುಂಬವಾಗಿ, ಎಲ್ಲರೂ ವಿಶ್ವ ಮಾನವರಾಗಿ ಬೆಳೆದು ನಿಲ್ಲಲು ಸಾಧ್ಯ ಎಂದರು. ಸೊಗಡು ಸಾಹಿತ್ಯ ವೇದಿಕೆ ಸಂಯೋಜಕಿ ಡಾ. ಶಶಿಕಲಾ, ಕುವೆಂಪು ಅವರ ಕನ್ನಡ ಪ್ರೇಮ, ಪ್ರಕೃತಿ ಪ್ರೀತಿ ಮತ್ತು ಮಾನವೀಯ ನಡವಳಿಕೆ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು. ಹಸೆ ಚಿತ್ತಾರ ಪರಿಷತ್‌ನ ರವಿರಾಜ್ ಅವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ತಾವು ಬಿಡಿಸಿದ ಹಸೆ ಚಿತ್ತಾರಗಳನ್ನು ಪ್ರದರ್ಶಿಸಿದರು. ಪ್ರಥಮ ವರ್ಷದ ಕೃಷಿ ವಿದ್ಯಾರ್ಥಿ ಚಂದನ ಬಿಡಿಸಿದ್ದ ಕುವೆಂಪು ಭಾವಚಿತ್ರಕ್ಕೆ ಪುಷ್ಪ ಅರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net