

ಗುಳೇದಗುಡ್ಡ: ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಸತತ ಐದನೇ ಬಾರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಪುರಸಭೆ ಹತ್ತಿರ, ಸಾಲೇಶ್ವರ ದೇವಸ್ಥಾನ, ಚೌಬಜಾರ, ಸೇರಿ ವಿವಿಧೆಡೆ ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹಿಡಿದು ಜಯಘೋಷ ಕೂಗಿದರು.
ಪಟ್ಟಣದ ಪುರಸಭೆ ಎದುರು ನಡೆದ ವಿಜಯೋತ್ಸವದಲ್ಲಿ ಮಾತನಾಡಿದ ಮಾಜಿ ಶಾಸಕ ರಾಜಶೇಖರ ಶೀಲವಂತ, ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಅವರಿಗೆ ಗುಳೇದಗುಡ್ಡ ಪಟ್ಟಣದಲ್ಲೂ ಮುನ್ನಡೆ ಸಿಕ್ಕಿದೆ. ಗದ್ದಿಗೌಡರ ಗೆಲುವಿಗೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಶ್ರಮವಹಿಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಆಟ ನಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳು ಹಾಗೂ ಕ್ಷೇತ್ರದ ಅಭಿವದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ತಂದಿರುವ ಗದ್ದಿಗೌಡರ ಅವರಿಗೆ ಮತದಾರರು ಆಶೀರ್ವಾದ ಮಾಡಿದ್ದಾರೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಬಾಗಲಕೋಟೆ ಕ್ಷೇತ್ರದ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಗೆಲುವಿಗೆ ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಿದ್ದಾರೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಲು ಪಿ.ಸಿ. ಗದ್ದಿಗೌಡರ ಗೆಲುವು ಶಕ್ತಿ ತುಂಬಲಿದೆ ಎಂದರು.
ಬಿಜೆಪಿ ನಗರಾಧ್ಯಕ್ಷ ವಸಂತಸಾ ಧೋಂಗಡೆ, ರವೀಂದ್ರ ಪಟ್ಟಣಶೆಟ್ಟಿ, ಸಂಪತ್ತಕುಮಾರ ರಾಠಿ, ಸಂಜಯ ಕಾರಕೂನ, ಅನ್ವರಖಾನ ಪಠಾಣ, ತಮ್ಮಣ್ಣೆಪ್ಪ ಬೆನಕಟ್ಟಿ, ಮಹೇಶ ಬಿಜಾಪೂರ, ಭುವನೇಶ ಪೂಜಾರ, ಪ್ರಶಾಂತ ಜವಳಿ, ಭಾಗ್ಯಾ ಉದ್ನೂರ, ಸಾವಿತ್ರಿ ಜೋಗೂರ, ನಿಂಗಪ್ಪ ಯಣ್ಣಿ, ಬಾಳು ನಿರಂಜನ, ಶಿವಾನಂದ ಯಣ್ಣಿ, ಜಗದೀಶ ಹಿರೇಗೌಡರ, ಹನುಮಂತ ಚವ್ಹಾಣ, ಶಿವು ಬಾದವಾಡಗಿ, ಪ್ರಕಾಶ ರೋಜಿ, ಮುತ್ತು ಚಿಕ್ಕನರಗುಂದ, ಹನುಮಂತ ಗೌಡರ, ಸಚಿನ್ ರಾಂಪುರ, ರಾಘವೇಂದ್ರ ಗೋವಿನಕೊಪ್ಪ, ಕೇಮಣ್ಣ ರಾಂಪೂರ, ಈರಣ್ಣ ಚಿಂದಿ, ಹನುಮಂತ ದನದಮನಿ, ಸಿಂಧೂರ ತೋಳಮಟ್ಟಿ, ಈರಣ್ಣ ಶೇಖ ಮತ್ತಿತರರು ಇದ್ದರು.