ಕಾರಿನ ಬಾನೆಟ್‌ನಲ್ಲಿತ್ತು ಹೆಬ್ಬಾವು!!

SNAKE in car
Published on

ಕಾರವಾರ:ಕಾರಿನ ಬಾನೆಟ್ ಒಳಗೆ ಕಂಡುಬಂದ ಹೆಬ್ಬಾವಿನ ಮರಿಯೊಂದು ಮಾಲೀಕನಲ್ಲಿ ಭಯ ಹುಟ್ಟಿಸಿದ ಘಟನೆ ನಡೆದಿದೆ. ನಗರದ ಓಂ ಡ್ರೈವಿಂಗ್‌ ಸ್ಕೂಲ್ ಮಾಲೀಕ ರಾಘು ನಾಯ್ಕ ಅವರು ಹಳೆಯ ಮಾರುತಿ ಅಲ್ಟೋ ಕಾರೊಂದನ್ನು ಖರೀದಿ ಮಾಡಿದ್ದರು. ಕಾರು ಖರೀದಿಸಿದ ಖುಷಿಯಲ್ಲಿ ಒಂದು ರೌಂಡ್ ಹೊಡೆದ ನಂತರ ರೇಡಿಯೇಟರ್‌ನಲ್ಲಿ ನೀರು ಕಡಿಮೆ ಇರುವ ಅನುಮಾನ ಬಂದು ಬಾನೆಟ್ ಓಪನ್ ಮಾಡಿದ್ದರು. ಅಲ್ಲಿ ನೋಡಿ ಅವರು ಹೌಹಾರಿದ್ದಾರೆ. ರೇಡಿಯೇಟರ್ ಮುಚ್ಚಳಕ್ಕೆ ಹೆಬ್ಬಾವಿನ ಮರಿಯೊಂದು ಸುತ್ತಿಕೊಂಡಿತ್ತು. ನಂತರ ಅರಣ್ಯ ಇಲಾಖೆಗೆ ಕರೆ ಮಾಡಿದ್ದು, ಅರಣ್ಯ ಇಲಾಖೆ ಅಽಕಾರಿಗಳು ಬಂದು ಹೆಬ್ಬಾವಿನ ಮರಿಯನ್ನು ರಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net