ರೌಡಿಶೀಟರ್​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

tumkuru crime
Published on

ತುಮಕೂರು:  ರೌಡಿಶೀಟರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಶನಿವಾರ ತಡರಾತ್ರಿ ತುಮಕೂರಿನಲ್ಲಿ ನಡೆದಿದೆ.

ಮಾರುತಿ ಅಲಿಯಾಸ್​​ ಪೋಲಾರ್ಡ್ (34) ಕೊಲೆಯಾದ ರೌಡಿಶೀಟರ್. ತುಮಕೂರಿನ ಬಂಡಿಮನೆ ಕಲ್ಯಾಣ ಮಂಟಪದ ಬಳಿ ಪೊಲಾರ್ಡ್ ನನ್ನು ಕೊಲೆ ಮಾಡಲಾಗಿದೆ.

ತುಮಕೂರು ಜಿಲ್ಲೆ ಮಧುಗಿರಿ ಮೂಲದ ಮಾರುತಿ ಅಲಿಯಾಸ್​​ ಪೋಲಾರ್ಡ್ ಕ್ಯಾತಸಂದ್ರ ಬಳಿಯ ಮಂಚಲಕುಪ್ಪೆ ಬಳಿ ತನ್ನ ಪತ್ನಿ ಜತೆ ವಾಸವಾಗಿದ್ದನು. ತಡರಾತ್ರಿ ಬಂಡೆಮನೆ ಕಲ್ಯಾಣ ಮಂಟಪದ ಬಳಿ ತನ್ನ ಸ್ನೇಹಿತರ ಜತೆ ಎಣ್ಣೆ ಪಾರ್ಟಿ ಮಾಡುತ್ತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರುತಿಯನ್ನು ಅಟ್ಟಾಡಿಸಿ ಕೊಲೆಗೈದಿದ್ದಾರೆ.

ಕಳೆದ ಏಳೇಂಟು ವರ್ಷಗಳ ಹಿಂದೆ ನಡೆದಿದ್ದ ಹಟ್ಟಿ ಮಂಜ ಕೊಲೆ ಕೇಸ್ ಸೇರಿದಂತೆ. ಹಲವು ಕೇಸ್​​ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಮಾರುತಿ. ಇದೇ ದ್ಷೇಷಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಎಎಸ್ ಪಿ ಮರಿಯಪ್ಪ, ಡಿವೈಎಸ್ ಪಿ ಚಂದ್ರಶೇಖರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ತಿಲಕಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊಲೆ ಮಾಡಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net