ಇಬ್ಬರ ಮಧ್ಯೆ ಜಗಳ, ಒಬ್ಬನಿಗೆ ಚಾಕು ಇರಿತ

stabbed
Published on

ಬಂಕಾಪುರ: ಕ್ಷುಲ್ಲಕ ಕಾರಣಕ್ಕೆ ಒಂದೇ ಗ್ರಾಮದ ಇಬ್ಬರು ಮಧ್ಯೆ ಜಗಳ ನಡೆದು ಒಬ್ಬನಿಗೆ ಚಾಕುವಿನಿಂದ ಇರಿದ ಘಟನೆ ಸಮೀಪದ ಸದಾಶಿವಪೇಟೆ ಗ್ರಾಮದ ಹತ್ತಿರ ಮಂಗಳವಾರ ನಡೆದಿದೆ.

ಗ್ರಾಮದ ಆಟೋ ಚಾಲಕ ಪ್ರವೀಣ ಮತ್ತಿಗಟ್ಟಿ ಚೂರಿ ಇರಿತಕ್ಕೊಳಗಾದ ಯುವಕ ಎಂದು ತಿಳಿದುಬಂದಿದೆ. ಸದಾಶಿವಪೇಟೆ ಗ್ರಾಮದಿಂದ ಬಂಕಾಪುರಕ್ಕೆ ಹೋಗುವ ಮಾರ್ಗದಲ್ಲಿ ಕುರಿಗಾಯಿ ಷಣ್ಮುಖಪ್ಪ ನರಗುಂದ ಕುರಿ ಮೇಯಿಸುತ್ತಿದ್ದಾಗ ಅದೇ ಗ್ರಾಮದ ಆಟೋ ಚಾಲಕ ಪ್ರವೀಣ ಮತ್ತಿಗಟ್ಟಿ ದಾರಿಗಾಗಿ ಜೋರಾಗಿ ಹಾರ್ನ್ ಮಾಡಿದ್ದಾನೆ. ಈ ವಿಷಯಕ್ಕಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಇಬ್ಬರು ಬಡಿದಾಡಿಕೊಂಡಿದ್ದಾರೆ. ಆಗ ಷಣ್ಮುಖಪ್ಪ ಆಟೋ ಚಾಲಕ ಪ್ರವೀಣಗೆ ಚೂರಿ ಇರಿದಿದ್ದಾನೆ.

ಗಾಯಗೊಂಡ ಇಬ್ಬರನ್ನು ಸ್ಥಳೀಯರು ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net