ವಿದ್ಯಾಸಂಸ್ಥೆಗಳ ನಡುವೆ ಬಾಂಧವ್ಯವಿರಲಿ

ಜಿಲ್ಲಾ ಮಟ್ಟದ ಆನ್ಸ್ ಫೆಸ್ಟ್ ಪ್ರಯುಕ್ತ ವಿರಾಜಪೇಟೆ ಸೇಂಟ್ ಆನ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಸಮಗ್ರ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡ ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಪಿ ಯು ಕಾಲೇಜು ತಂಡ.
ಜಿಲ್ಲಾ ಮಟ್ಟದ ಆನ್ಸ್ ಫೆಸ್ಟ್ ಪ್ರಯುಕ್ತ ವಿರಾಜಪೇಟೆ ಸೇಂಟ್ ಆನ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಸಮಗ್ರ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡ ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಪಿ ಯು ಕಾಲೇಜು ತಂಡ.
Published on

ವಿರಾಜಪೇಟೆ: ವಿದ್ಯಾ ಸಂಸ್ಥೆಗಳ ನಡುವೆ ಪರಸ್ಪರ ಬಾಂಧವ್ಯ ಮೂಡಿದಾಗ ಮಾತ್ರ ವಿದ್ಯಾರ್ಥಿಗಳ ಮಾತ್ರವಲ್ಲದೆ ಸಂಸ್ಥೆಯ ಸರ್ವತೋಮುಖ ಪ್ರಗತಿ ಸಾಧ್ಯ ಎಂದು ವಿರಾಜಪೇಟೆಯ ಸೇಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ಹಾಗೂ ಪಿಯು ಕಾಲೇಜು ಪ್ರಾಂಶುಪಾಲ ರೆ. ಫಾ. ಮದಲೈ ಮುತ್ತು ಅಭಿಪ್ರಾಯಪಟ್ಟರು.

ಪಟ್ಟಣದ ಸೇಂಟ್ ಆನ್ಸ್ ಕಾಲೇಜಿನಲ್ಲಿ ಮಂಗಳವಾರ ಜಿಲ್ಲೆಯ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಎಕೋಸ್ ಆಫ್ ದಿ ಅರ್ಥ್ ಧ್ಯೇಯವಾಕ್ಯದಡಿ ಆಯೋಜಿಸಿದ್ದ ಆನ್ಸ್ ಫೆಸ್ಟ್ 2025 ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾ ಸಂಸ್ಥೆಗಳು ಕಾರ್ಯಕ್ರಮ ಆಯೋಜಿಸಿ ಮತ್ತೊಂದು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಶೈಕ್ಷಣಿಕ ಕಾರ್ಯಕ್ರಮ ಆಯೋಜಿಸುವುದರಿಂದ ಸಂಸ್ಥೆಗಳ ನಡುವೆ ಪರಸ್ಪರ ಸಹಕಾರ, ಬಾಂಧವ್ಯ ವೃದ್ಧಿಸಲಿದೆ. ಅಲ್ಲದೆ ಪ್ರಸ್ತುತ ಶಿಕ್ಷಣವು ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ವಿದ್ಯಾಸಂಸ್ಥೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ ಎಂದರು.

ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನ್ಸ್ ಫೆಸ್ಟ್ ಆರಂಭವಾಗಿದೆ ಎಂದು ಘೋಷಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ನಿಗದಿಪಡಿಸಿದ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಅಲ್ಲದೆ ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಟಿ ಹಾಗೂ ಗಾಯಕಿ ಬಟ್ಟಿಯಂಡ ಲಿಖಿತಾ ಪಾಲ್ಗೊಂಡು ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ವೇದಿಕೆಯಲ್ಲಿ ಸಂತ ಅನ್ನಮ್ಮ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ಹಾಗೂ ಪ್ರಧಾನ ಗುರುಗಳಾದ ರೆ.ಫಾ.ಜೇಮ್ಸ್ ಡೊಮಿನಿಕ್, ಸಹಾಯಕ ಗುರುಗಳಾದ ಫಾ. ಅಭಿಲಾಶ್, ಕಾಲೇಜಿನ ಐಕ್ಯುಎಸಿ ಸಂಚಾಲಕಿ ಬಿ.ಡಿ.ಹೇಮಾ, ಪ್ರಾಧ್ಯಾಪಕ ಅರ್ಜುನ್, ವಿದ್ಯಾರ್ಥಿ ಸಂಘದ ನಾಯಕ ಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು.

ವಿಜೇತ ತಂಡಗಳ ವಿವರ : ಒಟ್ಟು 10 ಬಗೆಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅದರಲ್ಲಿ ಪೊನ್ನಂಪೇಟೆಯ ಕೂರ್ಗ್ ಇನ್‌ಸ್ಟಿಟ್ಯೂಟ್ ಪಿಯು ಕಾಲೇಜು ಚಾಂಪಿಯನ್‌ಷಿಪ್ ಟ್ರೋಫಿ ಜತೆಗೆ 15,555 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪಡೆದುಕೊಂಡಿತು. ಇನ್ನು ಮಡಿಕೇರಿಯ ಸಂತ ಮೈಕಲರ ಪಿಯು ಕಾಲೇಜು ರನ್ನರ್ಸ್ ಆಗಿ ಹೊರಹೊಮ್ಮಿ 11,111 ರೂ. ನಗದು, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ಪಡೆದುಕೊಂಡಿತು.

ಉಳಿದಂತೆ ವೈಯಕ್ತಿಕ ಸ್ಪರ್ಧೆಗಳ ಟ್ರೆಷರ್ ಹಂಟ್‌ನಲ್ಲಿ ಸಿದ್ದಾಪುರದ ಸೆಂಟ್ ಆನ್ಸ್ ಪಿಯು ಕಾಲೇಜು ಜಯ ಪಡೆಯಿತು. ಇನ್ನು ಪೆನ್ಸಿಲ್ ಸ್ಕೆಚ್‌ನಲ್ಲಿ ಕೂರ್ಗ್ ಇನ್‌ಸ್ಟಿಟ್ಯೂಟ್ ಕಾಲೇಜು (ಪ್ರಥಮ )ಕುಶಾಲನಗರ ವಿವೇಕಾನಂದ ಪಿಯು ಕಾಲೇಜು (ದ್ವಿತೀಯ), ರಾಂಪ್ ವಾಕ್‌ನಲ್ಲಿ ಕೂರ್ಗ್ ಇನ್‌ಸ್ಟಿಟ್ಯೂಟ್ ಕಾಲೇಜು (ಪ್ರ )ವಿರಾಜಪೇಟೆ ಸಂತ ಅನ್ನಮ್ಮ ಪಿಯು ಕಾಲೇಜು (ದ್ವಿ ), ಗೇಮಿಂಗ್ ನಲ್ಲಿ ಮಡಿಕೇರಿ ಸಂತ ಮೈಕಲರ ಕಾಲೇಜು (ಪ್ರ ), ಕಾವೇರಿ ಕಾಲೇಜು ವಿರಾಜಪೇಟೆ (ದ್ವಿ ), ಬೆಸ್ಟ್ ಔಟ್ ಓಫ್ ವೇಸ್ಟ್‌ನಲ್ಲಿ ಕೂರ್ಗ್ ಇನ್‌ಸ್ಟಿಟ್ಯೂಟ್ ಕಾಲೇಜು (ಪ್ರ ), ಮಡಿಕೇರಿ ಸಂತ ಮೈಕೆಲರ ಕಾಲೇಜು (ದ್ವಿ ), ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸಿದ್ದಾಪುರ ಸಂತ ಅನ್ನಮ್ಮ ಕಾಲೇಜು (ಪ್ರ ), ಸಂತ ಮೈಕೆಲರ ಕಾಲೇಜು (ದ್ವಿ ), ರೀಲ್ಸ್ ಮೇಕಿಂಗ್‌ನಲ್ಲಿ ವಿವೇಕಾನಂದ ಪಿಯು ಕಾಲೇಜು (ಪ್ರ ), ಕೂರ್ಗ್ ಇನ್‌ಸ್ಟಿಟ್ಯೂಟ್ ಕಾಲೇಜು (ದ್ವಿ ), ಕ್ವಿಜ್‌ನಲ್ಲಿ ಗೋಣಿಕೊಪ್ಪಲು ಕಾಲ್ಸ್ ಕಾಲೇಜು (ಪ್ರ), ಕೂರ್ಗ್ ಇನ್‌ಸ್ಟಿಟ್ಯೂಟ್ ಕಾಲೇಜು (ದ್ವಿ ), ಸ್ಪೆಲ್ ಬೀನಲ್ಲಿ ಕಾಲ್ಸ್ ಕಾಲೇಜು (ಪ್ರ ), ಕೂರ್ಗ್ ಇನ್‌ಸ್ಟಿಟ್ಯೂಟ್ ಕಾಲೇಜು (ದ್ವಿ ), ಫೇಸ್ ಪೇಂಟಿಂಗ್‌ನಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಪಿಯು ಕಾಲೇಜು (ಪ್ರ), ಕೂರ್ಗ್ ಇನ್‌ಸ್ಟಿಟ್ಯೂಟ್ ಕಾಲೇಜು (ದ್ವಿ )ಬಹುಮಾನ ಪಡೆದುಕೊಂಡವು. ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ, ಟ್ರೋಫಿಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net