

ಅಥಣಿ ಗ್ರಾಮೀಣ: ಅನ್ಯರಿಗೆ ಕೆಡಕು ಬಯಸದೆ ಜೀವನ ಸಾಗಿಸಬೇಕು. ಧರ್ಮಕಾರ್ಯ, ಕಾಯಕ, ಭಕ್ತಿ ಸೇವೆಯಲ್ಲಿ ಸಿಗುವ ನೆಮ್ಮದಿ, ಆತ್ಮತೃಪ್ತಿ ಬೇರೆಲ್ಲೂ ಸಿಗುವುದಿಲ್ಲ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಶನಿವಾರ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಲೋಕಾರ್ಪಣೆ, ಶಿವಲಿಂಗ, ನಂದಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನೇರವೇರಿಸಿ, ಬಳಿಕ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿದರು. ಧರ್ಮ, ಸಂಸತಿಗಳ ಮೇಲೆ ಅಗಾಧ ಪ್ರೀತಿ ಹೊಂದಬೇಕು. ಗಳಿಸಿದ ಹಣದಲ್ಲಿ ಸ್ವಲ್ಪ ಭಾಗ ಒಳ್ಳೆಯ ಕಾರ್ಯಕ್ಕೆ ಮೀಸಲಿಡಬೇಕು. ಧರ್ಮ, ದಾನ ಮಾಡುವುದನ್ನು ಬಿಡಬಾರದು ಎಂದರು.
ಅಥಣಿ ಗಚ್ಚಿನಮಠದ ಶಿವಬಸವಪ್ರಭು ಸ್ವಾಮೀಜಿ ಮಾತನಾಡಿ, ಬದುಕು ಹಸನಾಗಬೇಕಾದರೆ ನಿಸ್ವಾರ್ಥತೆ ಅಳವಡಿಸಿಕೊಳ್ಳಬೇಕು. ಹೊನ್ನು, ಮಣ್ಣು ಸಂಗ್ರಹಿಸಿಡುವ ಬದಲು ಜ್ಞಾನ ಸಂಗ್ರಹಿಸಬೇಕು ಎಂದರು. ಶಾಸಕ ಲಕ್ಷ$್ಮಣ ಸವದಿ ಮಾತನಾಡಿ, ಜನಪ್ರತಿನಿಧಿಗಳಿಗೆ ಸ್ವಾಮೀಜಿಗಳು ಮಾರ್ಗದರ್ಶನ ಮಾಡಬೇಕು. ೇತ್ರದ ಜನರ ಸಮಸ್ಯೆ ಪರಿಹರಿಸಲು ಶರಣರ ಸಂಗಡದಿಂದ ಸಾಧ್ಯ ಎಂದು ಹೇಳಿದರು.
ಇದಕ್ಕೂ ಮೊದಲು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಮೂಲಕ ಬರಮಾಡಿಕೊಂಡು, ಹಿರೇಮಠ, ಸೊನ್ನದ ಕುಟುಂಬಸ್ಥರು ಹಾಗೂ ನೂಲಿಚನ್ನಯ್ಯ ಸಮುದಾಯದವರು ಹಣದಿಂದ ತುಲಾಭಾರ ನೆರವೇರಿಸಿದರು.
ಹಿರೇಪಡಸಲಗಿಯ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಗುರುಸಿದ್ಧ ಸ್ವಾಮೀಜಿ, ಓಂಕಾರಯ್ಯ ಸ್ವಾಮೀಜಿ, ಮರುಳಸಿದ್ಧ ಸ್ವಾಮೀಜಿ, ಮಹಾದೇವ ಮಹಾರಾಜರು, ಸಂಗಮೇಶ್ವರ ಸ್ವಾಮೀಜಿ, ಬಸವರಾಜೇಂದ್ರ ಶರಣರು, ಸದಾಶಿವ ಬುಟಾಳಿ, ಶಿವು ಗುಡ್ಡಾಪುರ, ಶಿವಾನಂದ ದಿವಾನಮಳ, ಬಸಪ್ಪ ಮಗದುಮ್ಮ, ಗುರುಪಾದ ಸವದಿ, ಮಲ್ಲಪ್ಪ ಸೊನ್ನದ, ಅಶೋಕ ಮಗದುಮ್ಮ, ವಕೀಲ ಶ್ರೀಕಾಂತ ಪೂಜಾರಿ, ಅಣ್ಣಪ್ಪ ತಳವಾರ, ಪಿ.ಎಲ್.ಪೂಜಾರಿ ಇತರರಿದ್ದರು.