ದೇಶಸೇವೆಗಿಂತ ಶ್ರೇಷ್ಠವಾದುದಿಲ್ಲ

patil col
Published on

ಹುಬ್ಬಳ್ಳಿ: ಇಲ್ಲಿಯ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್. ಪಾಟೀಲ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ 17ನೇ ವಾರ್ಷಿಕೋತ್ಸವ ಸಮಾರಂಭ ಏರ್ಪಡಿಸಲಾಗಿತ್ತು.

ಕಾರ್ಗಿಲ್ ಯೋಧ ಕ್ಯಾಪ್ಟನ್ ನವೀನ ನಾಗಪ್ಪ ಅತಿಥಿಗಳಾಗಿ ಮಾತನಾಡಿ, ದೇಶ ಸೇವೆಗಿಂತ ಮಿಗಿಲಾದದು ಬೇರೊಂದಿಲ್ಲ. ತಂದೆ-ತಾಯಿ ಸೇವೆ ಜತೆ ಜತೆಗೆ ದೇಶ ಸೇವೆಗೆ ಎಲ್ಲರೂ ಆದ್ಯತೆ ನೀಡಬೇಕು ಎಂದರು. ಅಲ್ಲದೇ ಕಾರ್ಗಿಲ್ ಯುದ್ಧದ ಸನ್ನಿವೇಶವನ್ನು ಸವಿಸ್ತಾರವಾಗಿ ವಿವರಿಸಿದರು.

ಹು-ಧಾ ಪೋಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ತಂದೆ-ತಾಯಿಗಳನ್ನು ಗೌರವಿಸುವುದರ ಜತೆಗೆ ವಿದ್ಯಾರ್ತಿಗಳು ಒಳ್ಳೆಯ ಸಂಸ್ಕೃತಿಯನ್ನು ರೂಡಿಸಿಕೊಳ್ಳಬೇಕು. ಕಠಿಣ ಪರಿಶ್ರಮವಹಿಸಿದರೆ ಯಾವುದೇ ಸನ್ನಿವೇಶವಾದರೂ ಸುಲಭವಾಗಿಸಿಕೊಳ್ಳಬಹುದು ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶ್ಯಾಮ ಮಲ್ಲನಗೌಡ್ರ ಮಾತನಾಡಿದರು.

ವೇಮನ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ಅಶೋಕ ಇಟಗಿ, ಉಪಾಧ್ಯಕ್ಷ ವಿ.ಕೆ. ರಡ್ಡೇರ, ನಿರ್ದೇಶಕರಾದ ವೈ.ಕೆ. ಪಾಟೀಲ, ದೀಪಕ ಪಾಟೀಲ, ಮೋಹನ ಹೊಸಮನಿ, ಎಚ್.ಎಚ್. ಕಿರೇಸೂರ. ಪ್ರಾಚಾರ್ಯ ಎಸ್.ಬಿ. ಸಣಗೌಡ್ರ, ಉಪನ್ಯಾಸಕರಾದ ಶಂಕರ ಕುಂಬಾರ ಇತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಶೈಲಾ ಇಟಗಿ ನಿರೂಪಿಸಿದರು. ಸಹ ಸಂಯೋಜಕ ಸಚಿನ ಮಾಚಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net