

ತಾಳಿಕೋಟೆ: ಶಿಕ್ಷಕ ವೃತ್ತಿಗಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ಹೇಳಿದರು.
ಸ್ಥಳೀಯ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಬಿಇಡಿ ಪ್ರಥಮ ವರ್ಷದ ಶಿಕ್ಷಕ ವಿದ್ಯಾರ್ಥಿಗಳ ಸ್ವಾಗತ ಹಾಗೂ 2024-25ನೇ ಸಾಲಿನ ಶಿಕ್ಷಕ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಾಧನೆ ಎಂಬುದು ಸಾಧಿಸಿದರೆ ಮಾತ್ರ ಒಲುಮೆಯಾಗಲಿದೆ. ಆ ಒಲುಮೆಯನ್ನು ಯಾವ ರೀತಿ ಪಡೆಯಬೇಕೆಂಬುದನ್ನು ಅರ್ಥೈಸಿ ಹೇಳುವ ಕಾರ್ಯವನ್ನು ಶಿಕ್ಷಕ ಆದವನು ಮಾಡುತ್ತಾನೆ ಎಂದರು.
ವಿಜಯಪುರದ ಸಹ ಶಿಕ್ಷಕ ಹಾಗೂ ಸಾಹಿತಿ ಡಾ. ಮಾದವ ಎಚ್. ಗುಡಿ ಮಾತನಾಡಿ, ಮನುಷ್ಯನಾಗಿ ಹುಟ್ಟಿದ ಮೇಲೆ ಯಾವುದಾದರೊಂದು ಸಾಧನೆ ಮಾಡಬೇಕು. ಎಲ್ಲ ಸಾಧನೆಗಳಲ್ಲೂ ಹೆಚ್ಚಿನ ಸಾಧನೆ ಶಿಕ್ಷಕ ವೃತ್ತಿ. ಶಿಕ್ಷಕರಿಗೆ ಸಿಗುವ ಗೌರವ ಮತ್ಯಾರಿಗೂ ಸಿಗಲ್ಲ. ಶಿಕ್ಷಕರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವ ಸಾಮರ್ಥ್ಯ ಹೊಂದಬೇಕು ಎಂದರು.
ಶಿಕ್ಷಕ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಂ. ಭಂಟನೂರ ಅಧ್ಯಕ್ಷತೆ ವಹಿಸಿ ಶಿಕ್ಷಕ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ವೀರಶೈವ ವಿದ್ಯಾವರ್ದಕ ಸಂಘದ ಅಧ್ಯಕ್ಷ ವಿ.ಸಿ. ಹಿರೇಮಠ(ಹಂಪಿಮುತ್ಯಾ) ಕಾರ್ಯಕ್ರಮ ಉದ್ಘಾಟಿಸಿದರು. ವಿ.ವಿ. ಸಂಘದ ಉಪಾಧ್ಯಕ್ಷ ಬಿ.ಎನ್. ಹಿಪ್ಪರಗಿ, ಕಾರ್ಯದರ್ಶಿ ಎಂ.ಎಸ್. ಸರಶೆಟ್ಟಿ, ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ, ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಎಸ್.ಬಿ. ಬಡಿಗೇರ, ಮಹಿಳಾ ಕಾರ್ಯದರ್ಶಿ ಎ.ಎಸ್. ಹಿರೇಮಠ, ಭಾಗ್ಯಶ್ರೀ ಕಡೆಕಲ್ಲ, ವೀರೇಶ ಹುನಗುಂದ ನಕ್ಷತ್ರಾ ಅಚನೂರ, ಮಯೂರ ಕೊಡಭಾಗಿ, ನಿರ್ದೇಶಕರಾದ ಎಂ.ಆರ್. ಕತ್ತಿ, ಅಣ್ಣು ಕತ್ತಿ, ಮಹಾಂತೇಶ ಕತ್ತಿ, ರಮೇಶ ಸಾಲಂಕಿ, ಆರ್.ಸಿ.ಪಾಟೀಲ ಇತರರಿದ್ದರು.
ಯು.ಎನ್. ಮಂಗೊಂಡ ಸ್ವಾಗತಿಸಿದರು. ಉಪನ್ಯಾಸಕರುಗಳಾದ ಎಸ್.ಬಿ. ಬಡಿಗೇರ, ವೈ.ಎಚ್. ಅಂಗಡಗೇರಿ, ಎಂ.ಎ.ಪೋದ್ದಾರ ನಿರೂಪಿಸಿದರು. ಎಸ್.ಬಿ. ಕುಲಕರ್ಣಿ ವಂದಿಸಿದರು.