ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿಲ್ಲದೆ ಪರದಾಟ

Oplus_0
ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿ ವಿಭಾಗದಲ್ಲಿರುವ ಸಾರ್ವಜನಿಕ ಶೌಚಗೃಹ
Published on

ಯಳಂದೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿನ ಸೌಲಭ್ಯವಿಲ್ಲದೆ ಇಲ್ಲಿನ ರೋಗಿಗಳು, ಸಾರ್ವಜನಿಕರು, ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಶೌಚಗೃಹ, ಕುಡಿಯುವ ನೀರಿಗೂ ಆಸ್ಪತ್ರೆಯಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಇಲ್ಲಿಗೆ ನೀರು ಪೂರೈಸುವ ಕೊಳವೆ ಬಾವಿಯ ಮೋಟಾರ್ ಕೆಟ್ಟು ಹೋದ ಪರಿಣಾಮ ನೀರಿನ ತೊಂದರೆ ಉಂಟಾಗಿದೆ. ಪ್ರತಿನಿತ್ಯ ಈ ಆಸ್ಪತ್ರೆಗೆ ನೂರಾರು ಹೊರ ರೋಗಿಗಳು ಬರುತ್ತಾರೆ. ಇಲ್ಲಿ ಪ್ರತ್ಯೇಕ ಹೆರಿಗೆ ಆಸ್ಪತ್ರೆಯ ಕಟ್ಟಡವೂ ಇದೆ. ಇದರೊಂದಿಗೆ ಇದೀಗ ಡಯಾಲಿಸಿಸ್ ಕೇಂದ್ರವನ್ನೂ ತೆರೆಯಲಾಗಿದೆ. ಅಲ್ಲದೆ ಇದರ ಹಿಂಭಾಗದಲ್ಲಿ ವೈದ್ಯರ ಹಾಗೂ ದಾದಿಯರ ವಸತಿಗೃಹಗಳೂ ಇವೆ. ಹತ್ತಾರು ಒಳರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಗೆ ಇದುವರೆಗೂ ಪಟ್ಟಣ ಪಂಚಾಯಿತಿ ವತಿಯಿಂದ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇಲ್ಲಿರುವ ಎರಡು ಕೊಳವೆ ಬಾವಿಗಳಿಂದಲೇ ಇಲ್ಲಿಗೆ ನೀರು ಪೂರೈಕೆ ಮಾಡಬೇಕಿದೆ. ಆದರೆ ಒಂದು ಕೊಳವೆ ಬಾವಿ ಕೆಟ್ಟು ಹಲವು ದಿನಗಳಾಗಿದ್ದು ಇದು ದುರಸ್ತಿಯಾಗಿಲ್ಲ. ಗುರುವಾರ ಇದ್ದ ಮತ್ತೊಂದು ಕೊಳವೆ ಬಾವಿಯ ಮೋಟಾರ್ ಕೂಡ ಕೆಟ್ಟಿದ್ದು ನೀರಿಗೆ ತೊಂದರೆಯಾಗಿದೆ. ಇಲ್ಲಿರುವ ಒಳ ರೋಗಿಗಳು ಹೊರಗಿನಿಂದ ನೀರು ತಂದು ತಮ್ಮ ನಿತ್ಯ ಕರ್ಮ ಮುಗಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಮ್ಮ ಆಸ್ಪತ್ರೆಗೆ ಕಾವೇರಿ ಕುಡಿಯುವ ನೀರಿನ ಪೈಪ್‌ಲೈನ್ ಮಾಡಿಕೊಡಿ ಎಂದು ಪಟ್ಟಣ ಪಂಚಾಯಿತಿಗೆ ನಾವು ಅರ್ಜಿ ಸಲ್ಲಿಸಿದ್ದೇವೆ. ಆದರೆ ನಮಗೆ ನಲ್ಲಿ ಸಂಪರ್ಕ ಸಿಕ್ಕಿಲ್ಲ. ಪ್ರಸ್ತುತ 2 ಕೊಳವೆ ಬಾವಿಗಳಿದ್ದು ಮೋಟಾರ್ ಕೆಟ್ಟಿದ್ದು ನೀರಿಗೆ ತೊಂದರೆಯಾಗಿತ್ತು. ಇದನ್ನು ದುರಸ್ತಿ ಮಾಡಿಸಲು ಈಗಾಗಲೇ ಕ್ರಮ ವಹಿಸಲಾಗಿದ್ದು, ರೋಗಿಗಳಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಲಾಗಿದೆ.
ಡಾ. ಶ್ರೀಧರ್ವೈ ದ್ಯಾಧಿಕಾರಿ, ಸಾರ್ವಜನಿಕರ ಆಸ್ಪತ್ರೆ ಯಳಂದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net