ಹಾಗಲವಾಡಿ ಕೆರೆಗೆ ಹೇಮೆ ನೀರು

FotoJet (2)
Published on

 ಎಂ.ಎನ್​.ಕೋಟೆ: ಹಾಗಲವಾಡಿ ಕೆರೆಗೆ ಹೇಮಾವತಿ ನೀರನ್ನು ಹರಿಸಲು ಭೂಸ್ವಾದಿನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ನೀರನ್ನು ಹರಿಸಲಾಗುವುದು ಎಂದು ಶಾಸಕ ಶ್ರೀನಿವಾಸ್​ ತಿಳಿಸಿದರು.

ಗುಬ್ಬಿ ತಾಲೂಕು ಹಾಗಲವಾಡಿ ಹೋಬಳಿ ಹೊಸಕೆರೆ, ಯಕ್ಕಲಕಟ್ಟೆ, ಗಣೇಶಪುರ ಹಾಗೂ ಗಳಿಗೆಕೆರೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನರೆವೇರಿಸಿ ಮಾತನಾಡಿ, ಭೂಸ್ವಾದಿನ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಗುತ್ತಿಗೆದಾರ ಕಾಮಗಾರಿ ವಿಳಂಬ ಮಾಡಿರುವುದರಿಂದ ಮತ್ತೊಮ್ಮೆ ಟೆಂಡರ್​ ಕರೆದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಲಾಗುವುದು. ಕೆರೆಗೆ ಹೇಮಾವತಿ ನೀರನ್ನು ಹರಿಸಿ, ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಈ ವರ್ಷದಲ್ಲಿ ಹಾಗಲವಾಡಿ ಕೆರೆಗೆ ಹೇಮೆ ಹರಿಯಲಿದೆ ಎಂದರು.

ಹಾಗಲವಾಡಿ ಹೋಬಳಿಗೆ ಹೆಚ್ಚು ಅನುದಾನ ಹಾಕಿದ್ದು, ಬಹುತೇಕ ಎಲ್ಲ ರಸ್ತೆ ಅಭಿವೃದ್ಧಿ ಕೂಡ ಪೂರ್ಣಗೊಂಡಿದೆ. ಸಣ್ಣಪುಟ್ಟ ರಸ್ತೆಗಳನ್ನು ಶೀಘ್ರದಲ್ಲಿ ಮಾಡಲಾಗುತ್ತದೆ. ಈ ಭಾಗದಲ್ಲಿ ಸೇತುವೆಗಳು, ರಸ್ತೆಗಳು, ತೋಟದ ಮನೆಗಳ ರಸ್ತೆಗಳು ಮಾಡುತ್ತಿದ್ದು, ರೈತರು ಸಹಕಾರ ನೀಡಬೇಕೆಂದು ತಿಳಿಸಿದರು.

ಮುಖಂಡರಾದ ಗುರು ರೇಣುಕರಾಧ್ಯ, ಮೆಡಿಕಲ್​ ರಾಜು, ಕೃಷ್ಣಪ್ಪ, ಅಂಬರೀಷ್​, ಆರಾಧ್ಯ, ಮಂಜುನಾಥ್​, ಸಂಧೀಪ್​, ಸಣ್ಣರಂಗಯ್ಯ, ರಂಗಸ್ವಾಮಿ, ನರಸಿಂಹಮೂರ್ತಿ, ಗುತ್ತಿಗೆದಾರ ಶಿವಕುಮಾರ್​ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net