ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ

ಕುಷ್ಟಗಿಯ ಬಸವೇಶ್ವರ ವೃತ್ತದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಖಂಡಿಸಿ ತಾಲೂಕಿನ ಪಂಚಮಸಾಲಿ ಸಮುದಾಯದಿಂದ ಪ್ರತಿಭಟನೆ ನಡೆಯಿತು. ಸಮುದಾಯದ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಪ್ರಮುಖರಾದ ವೀರೇಶ ನಾಲತ್ವಾಡ, ಬಸವರಾಜ ಹೊರಪ್ಯಾಟಿ ಇತರರಿದ್ದರು.
ಕುಷ್ಟಗಿಯ ಬಸವೇಶ್ವರ ವೃತ್ತದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಖಂಡಿಸಿ ತಾಲೂಕಿನ ಪಂಚಮಸಾಲಿ ಸಮುದಾಯದಿಂದ ಪ್ರತಿಭಟನೆ ನಡೆಯಿತು. ಸಮುದಾಯದ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಪ್ರಮುಖರಾದ ವೀರೇಶ ನಾಲತ್ವಾಡ, ಬಸವರಾಜ ಹೊರಪ್ಯಾಟಿ ಇತರರಿದ್ದರು.
Published on

ಕುಷ್ಟಗಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಬಿಜೆಪಿ ಕ್ರಮ ಖಂಡಿಸಿ ತಾಲೂಕಿನ ಪಂಚಮಸಾಲಿ ಸಮುದಾಯದಿಂದ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ನಗರದ ವೀರಯೋಧ ಮಲ್ಲಯ್ಯ ವೃತ್ತದಿಂದ ಮೆರವಣಿಗೆ ಮೂಲಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಘೋಷಣೆ ಕೂಗುತ್ತ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಇದರಿಂದ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು.

ಸಮುದಾಯದ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ. ಇಲ್ಲಿ ಕುಟುಂಬ ರಾಜಕಾರಣ ನಡೆಸಿದವರು ನಿಷ್ಠಾವಂತರಾಗಿದ್ದಾರೆ. ಪಕ್ಷಕ್ಕಾಗಿ ಶ್ರಮಿಸಿದವರಿಗೆ ಅನ್ಯಾಯವಾಗುವುದನ್ನು ಖಂಡಿಸಿದ ಶಾಸಕ ಯತ್ನಾಳ್‌ರನ್ನು ಸಹಿಸಲಾರದೆ ಉಚ್ಚಾಟಿಸಿದ್ದಾರೆ. ಅವರಿಗೆ ನ್ಯಾಯ ಸಿಗುವವರೆಗೂ ಪಂಚಮಸಾಲಿ ಸಮುದಾಯ ಅವರ ಬೆಂಬಲಕ್ಕೆ ನಿಲ್ಲಲಿದೆ ಎಂದರು.

ಮುಖಂಡ ವೀರೇಶ ನಾಲತ್ವಾಡ್ ಮಾತನಾಡಿ, ಪಕ್ಷದ ಬಗ್ಗೆ ಅಭಿಮಾನ ಹಾಗೂ ಹಿಂದು ಪರ ಕಾಳಜಿ ಹೊಂದಿರುವ ನಾಯಕರನ್ನೇ ಗುರಿಯಾಗಿಸಿಕೊಂಡು ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಅವರಿಂದ ಪಕ್ಷದಿಂದ ಹೊರಹಾಕಲಾಗುತ್ತಿದೆ. ಶಾಸಕ ಬಸನಗೌಡ ಯತ್ನಾಳ್ ಅವರ ಉಚ್ಚಾಟನೆ ಆದೇಶವನ್ನು 10 ದಿನದೊಳಗೆ ಹಿಂಪಡೆಯದಿದ್ದರೇ ರಾಜ್ಯಾದ್ಯಂದ ಪ್ರತಿಭಟನೆ ತೀವ್ರವಾಗಲಿದೆ ಎಂದು ಎಚ್ಚರಿಸಿದರು.

ಪ್ರಮುಖರಾದ ಬಸವರಾಜ ಹೊರಪ್ಯಾಟಿ, ಮಹಾಂತೇಶ ಕುಷ್ಟಗಿ, ನಿಂಗಪ್ಪ ಮಂಗಳೂರು, ಶರಣಪ್ಪ ಜಿಗೇರಿ, ವೀರೇಶ ತುರಕಾಣಿ, ಶಂಕರಗೌಡ ಪಾಟೀಲ್, ಶೇಖರ್ ಹೊರಪ್ಯಾಟಿ, ಶರಣಪ್ಪ ಹವಾಲ್ದಾರ್, ರುದ್ರಗೌಡ ಪಾಟೀಲ್, ಶಿವಪ್ಪ ಗೆಜ್ಜಲಗಟ್ಟಿ, ಸಿದ್ದರಾಮಪ್ಪ ಕೌದಿ, ಚನ್ನಬಸಪ್ಪ ನಾಯಕವಾಡಿ, ಸಂಗನೌಡ ಪಾಟೀಲ್, ಪ್ರಭು ಸೂಡಿ, ಸಂಗಮೇಶ ಕಂದಗಲ್, ಸಂಗಮೇಶ ಕಂದಕೂರು, ಸುರೇಶ ಕೌದಿ, ಶಿವು ಸೂಡಿ, ಸತೀಶ ಬ್ಯಾಳಿ, ಶಿವು ನಂದಿಹಾಳ, ಸೋಮಶೇಖರ ಪುರದ್, ರವಿಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net