

ಶ್ರೀನಿವಾಸಪುರ: ಅನ್ಯಾಯಕ್ಕೆ ಕಾಲವಿಲ್ಲ, ಯಾವತ್ತಾದರೂ ನ್ಯಾಯ, ನೀತಿ ಧರ್ಮಕ್ಕೆ ಜಯ ಎಂಬುವುದನ್ನು ರಾಮಾಯಣ, ಮಹಾಭಾರತ ಪುರಾಣ ಗ್ರಂಥಗಳು ನಮಗೆ ತಿಳಿಸಿಕೊಟ್ಟಿವೆ ಎಂದು ಉಪಲೋಕಾಯುಕ್ತ ವೀರಪ್ಪ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನನ್ನದೇ ತಾಲೂಕಿನ ಅಧಿಕಾರಿ ವರ್ಗದವರು ಸಾರ್ವಜನಿಕರ ಕೆಲಸಗಳನ್ನು ಸರಿಯಾಗಿ ಮಾಡಿ ಬೇರೆಯವರಿಗೆ ಮಾದರಿಯಾಗಬೇಕು. ಇಲ್ಲಿನ ತಪು$್ಪಗಳನ್ನು ತಿದ್ದದಿದ್ದರೆ ಹೋದ ಕಡೆಯೆಲ್ಲ ಜನ ನನ್ನತ್ತ ಬೆರಳು ತೋರಿಸುತ್ತಾರೆ, ಅದು ಆಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಲೋಕಾಯುಕ್ತ ಯಾವುದೇ ಸರ್ಕಾರದ ಅಧೀನದಲ್ಲಿ ಇಲ್ಲ. ದೇಶದಲ್ಲಿಯೇ ಒಂದು ಬಲಿಷ್ಠವಾದ ಸ್ವಾಯತ್ತ ತನಿಖಾ ಸಂಸ್ಥೆ. ಸಮಾಜದಲ್ಲಿ ಭ್ರಷ್ಟ, ದುರಾಡಳಿತನ್ನು ಹೋಗಲಾಡಿಸುವುದೇ ನಮ್ಮ ಉದ್ದೇಶ. ಅಧಿಕಾರಿಗಳಲ್ಲಿನ ಮಂದಗತಿ ಕೆಲಸಕ್ಕಾಗಿ ಜನರು ಬೇಸತ್ತಿದ್ದಾರೆ. ಅಧಿಕಾರಿಗಳು ಕಾನೂನು ಬದ್ಧವಾಗಿ ಕೆಲಸ ಮಾಡಿಕೊಡಿ. ಕಾನೂನು ವಿರುದ್ಧವಾಗಿ ಕೆಲಸ ಮಾಡಬೇಡಿ. ಸ್ವಾತಂತ್ರ$್ಯ ಬಂದು 78 ವರ್ಷ ಆಗಿದೆ. ಈಗಲೂ ನಮ್ಮ ಜನರಿಗೆ ನ್ಯಾಯ ಸಿಗುತ್ತಿಲ್ಲ ಎಂಬುದು ನನ್ನ ಭಾವನೆ. ಜನರಿಗೆ ನ್ಯಾಯ ದೊರಕಿಸುವುದಾಗಿದೆ ಎಂದರು.
ಆಸ್ಪತ್ರೆ ವ್ಯವಸ್ಥೆ ಸರಿಯಾಗಲಿ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳೆದ ಎರಡ್ಮೂರು ಬಾರಿ ಭೇಟಿ ನೀಡಿದಾಗ ರಾಜ್ಯದಲ್ಲಿಯೇ ಮಾದರಿ ಆರೋಗ್ಯ ಕೇಂದ್ರವಾಗಿತ್ತು. ಆದರೆ, ಇಂದು ಅವ್ಯವಸ್ಥೆಯ ಗೂಡಾಗಿದೆ. ಎಂಆರ್ಐ ಸ್ಕಾ$ನಿಂಗ್ ವ್ಯವಸ್ಥೆ ಇಲ್ಲ. ಒಂದು ತಿಂಗಳಲ್ಲಿ ಮತ್ತೆ ಸಭೆ ಮಾಡಲಾಗುವುದು, ಅದರ ಒಳಗೆ ಎಲ್ಲವನ್ನೂ ಸರಿಪಡಿಸಬೇಕು ಇಲ್ಲದಿದ್ದರೆ ಸ್ವಯಂ ಪ್ರಕರಣ ದಾಖಲಿಸುತ್ತೇನೆ ಎಂದು ಬಿ.ವೀರಪ್ಪ ಅವರು ಎಚ್ಚರಿಕೆ ನೀಡಿದರು.
ವ್ಯಾಮೋಹಕ್ಕೆ ಬಲಿಯಾಗದಿರಿ
ಲೋಕಾಯುಕ್ತ ಸಂಸ್ಥೆ ಎಷ್ಟು ಬಲಿಷ್ಠ ಎಂಬುದು ಎಲ್ಲರಿಗೂ ಗೊತ್ತಿದೆ. ಅಧಿಕಾರದಲ್ಲಿರುವ ಮುಖ್ಯಮಂತ್ರಿ, ಇತರ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿರುವ ಉದಾಹರಣೆ ಇದೆ. ದಾಳಿಗೂ ಒಂದು ತಿಂಗಳ ಮೊದಲೇ ಅಧಿಕಾರಿಗಳಿಗೆ ಪರಿಶೀಲನೆಗೆ ಬರುವುದಾಗಿ ತಿಳಿಸಲಾಗುತ್ತದೆ. ಆದರೂ ಅಧಿಕಾರಿಗಳಿಗೆ ಶಿಕ್ಷೆ ನೀಡಲಾಗುತ್ತದೆ. ನಮ್ಮ ಸೂಚನೆಯನ್ನು ದುರುಪಯೋಗ ಮಾಡಿಕೊಂಡು ಅಕ್ರಮ ಆಸ್ತಿ, ಹಣ ಸಂಪಾದನೆಯ ವ್ಯಾಮೋಹಕ್ಕೆ ಬಲಿಯಾಗದಿರಿ. ನೀವು ಸತ್ತ ಮೇಲೆ ಶವದ ಮುಂದೆಯೇ ಮಕ್ಕಳು ಭಾಗಕ್ಕೆ ಜಗಳವಾಡುತ್ತಾರೆ. ಜನರ ಸೇವೆ ಮಾಡಿ, ಅದು ನಿಮ್ಮ ಗೌರವ ಹೆಚ್ಚುಸುತ್ತದೆ ಎಂದರು.
ಗೈರಾದ ಪಿಡಿಒ ಅಮಾನತಿಗೆ ಸೂಚನೆ
ತಾಲೂಕಿನ ನಂಬಿಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ಉಪಲೋಕಾಯುಕ್ತ ವೀರಪ್ಪ ಅವರು ಪಿಡಿಒ ಮಂಜುನಾಥರೆಡ್ಡಿ ಗೈರಾಗಿದ್ದನ್ನು ಕಂಡು ಕೆಂಡಾಮಂಡಲರಾದರು. ಮಾಹಿತಿ ತಿಳಿದಿದ್ದರೂ ಗೈರಾಗಿದ್ದಕ್ಕೆ ತಕ್ಷಣವೇ ಅಮಾನತು ಮಾಡುವಂತೆ ಇಒಗೆ ಸೂಚಿಸಿದರು. ಕಚೇರಿಯ ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು, ಸಿಬ್ಬಂದಿ ಮೊಬೈಲ್ಗಳಲ್ಲಿ ಫೋನ್ ಪೇ ಪರಿಶೀಲನೆ ನಡೆಸಿದರು. ಸ್ಥಳದಲ್ಲಿಯೇ ಇದ್ದ ಇಒ ಅವರಿಗೆ ತಾಲೂಕಿನ 25 ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಲಾಗುವುದು ಎಂದು ತಿಳಿಸಿದರು. ಗ್ರಾಮಗಳಲ್ಲಿ ಚರಂಡಿ ಸ್ವಚ್ಛಗೊಳ್ಳಬೇಕು. ಗ್ರಾಪಂಗಳಲ್ಲಿ ಜಂಗಲ್ ಕ್ಲೀನಿಂಗ್ ಹೆಸರಿನಲ್ಲಿ ಹೆಚ್ಚು ದುಡ್ಡು ಪೋಲಾಗುತ್ತಿದ್ದು, ಇದನ್ನ ಎಲ್ಲ ಪಂಚಾಯಿತಿಗಳಿಗೂ ಭೇಟಿ ನೀಡಿ ಅವುಗಳನ್ನು ಸರಿಪಡಿಸಿ ಎಂದು ಇಒ ಎಸ್.ಶಿವಕುಮಾರಿಗೆ ಸೂಚಿಸಿದರು. ಪಿಡಿಒಗಳಿಗೆ ಪಂಚಾಯಿತಿ ಅಭಿವೃದ್ಧಿಪಡಿಸುವ ಅಧಿಕಾರ ಇದೆ. ಅಧಿಕಾರಿಗಳಿಗೆ ಯಾರಾದರೂ ದೌರ್ಜನ್ಯ ಮಾಡುತ್ತಿದ್ದರೆ ಅವರ ವಿರುದ್ಧ ದೂರು ನೀಡಿ, ಪೊಲೀಸರು ಸಮಾಜದಲ್ಲಿ ಯಾವ ರೀತಿ ಇರುಬೇಕು ಎಂದು ನಾನು 2017ರಲ್ಲಿ ಪುಸ್ತಕಬರೆದಿದ್ದೇನೆ. ಪೊಲೀಸರು ಸಮಾಜದಲ್ಲಿ ಕಾನೂನು ವ್ಯವಸ್ಥೆ ಸರಿಪಡಿಸಿ, ಜನರೊಂದಿಗೆ ಸ್ನೇಹಮಯದೊಂದಿಗೆ ವ್ಯವಹರಿಸಬೇಕು. ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲು ಬಿಡಬೇಡಿ ಎಂದು ಅರಣ್ಯ ಅಧಿಕಾರಿಗೆ ಸೂಚಿಸಿದರು. ಕಚೇರಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳು, ಸಭೆಗೆ ನಿಗದಿತ ಸಮಯಕ್ಕೆ ಹಾಜರಾಗದ ಬೇಜವ್ದಾರಿ ಅಧಿಕಾರಿ ವರ್ಗದ ವಿರುದ್ಧ ಗರಂ ಆದರು.
ಜನರೊಂದಿಗೆ ಸ್ನೇಹದಿಂದ ಇರಿ
ಗ್ರಾಮಗಳಲ್ಲಿ ಚರಂಡಿ ಸ್ವಚ್ಛಗೊಳ್ಳಬೇಕು. ಗ್ರಾಪಂಗಳಲ್ಲಿ ಜಂಗಲ್ ಕ್ಲೀನಿಂಗ್ ಹೆಸರಿನಲ್ಲಿ ಹೆಚ್ಚು ದುಡ್ಡು ಪೋಲಾಗುತ್ತಿದ್ದು, ಇದನ್ನ ಎಲ್ಲ ಪಂಚಾಯಿತಿಗಳಿಗೂ ಭೇಟಿ ನೀಡಿ ಅವುಗಳನ್ನು ಸರಿಪಡಿಸಿ ಎಂದು ಇಒ ಎಸ್.ಶಿವಕುಮಾರಿಗೆ ಸೂಚಿಸಿದರು. ಪಿಡಿಒಗಳಿಗೆ ಪಂಚಾಯಿತಿ ಅಭಿವೃದ್ಧಿಪಡಿಸುವ ಅಧಿಕಾರ ಇದೆ. ಅಧಿಕಾರಿಗಳಿಗೆ ಯಾರಾದರೂ ದೌರ್ಜನ್ಯ ಮಾಡುತ್ತಿದ್ದರೆ ಅವರ ವಿರುದ್ಧ ದೂರು ನೀಡಿ, ಪೊಲೀಸರು ಸಮಾಜದಲ್ಲಿ ಯಾವ ರೀತಿ ಇರುಬೇಕು ಎಂದು ನಾನು 2017ರಲ್ಲಿ ಪುಸ್ತಕಬರೆದಿದ್ದೇನೆ. ಪೊಲೀಸರು ಸಮಾಜದಲ್ಲಿ ಕಾನೂನು ವ್ಯವಸ್ಥೆ ಸರಿಪಡಿಸಿ, ಜನರೊಂದಿಗೆ ಸ್ನೇಹಮಯದೊಂದಿಗೆ ವ್ಯವಹರಿಸಬೇಕು. ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲು ಬಿಡಬೇಡಿ ಎಂದು ಅರಣ್ಯ ಅಧಿಕಾರಿಗೆ ಸೂಚಿಸಿದರು. ಕಚೇರಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳು, ಸಭೆಗೆ ನಿಗದಿತ ಸಮಯಕ್ಕೆ ಹಾಜರಾಗದ ಬೇಜವ್ದಾರಿ ಅಧಿಕಾರಿ ವರ್ಗದ ವಿರುದ್ಧ ಗರಂ ಆದರು.
ನನ್ನನ್ನು ಕೆಣಕಬೇಡಿ
ಸಿಡಿಪಿಒ ಕಚೇರಿಯಲ್ಲಿ ಯಾವ ಅಧಿಕಾರಿಗಳು ಇರಲಿಲ್ಲ. ಲೋಕಾಯುಕ್ತ ಬರುತ್ತಿದ್ದ ವೇಳೆ ಎಲ್ಲೂ ಹೋಗಬಾರದು. ಕಚೇರಿಗಳಲ್ಲಿ ದೇವರ ೋಟೋ, ಮಹನೀಯರ ೋಟೋಗಳು ಇಟ್ಟುಕೊಂಡು ಆವರ ಆಶಯಗಳನ್ನು ದೂರಮಾಡಬೇಡಿ. ಸಂಬಳ ಬಿಟ್ಟು ಬೇರೆ ಎಲ್ಲವೂ ವಿಷ. ಸಕಾಲಕ್ಕೆ ಜನರ ಸೇವೆ ಮಾಡಿ. ನೀವು ಒಳ್ಳೆಯ ಕೆಲಸ ಮಾಡಿ, ನಾನು ನಿಮ್ಮೊಂದಿಗೆ ಇರುತ್ತೇನೆ. ಪುರಸಭೆ ಆರೋಗ್ಯ ಅಧಿಕಾರಿಗಳು ಪಟ್ಟಣದಲ್ಲಿ ಯಾವುದೇ ಹೋಟೆಲ್, ಅಂಗಡಿ ಮಾರುಕಟ್ಟೆಗಳಿಗೆ ಹೋಗಿ ಪರಿಶೀಲಿಸಬೇಕು. ಹೋಟೆಲ್, ಅಂಗಡಿ ಮಾಲೀಕರು ಮನಬಂದಂತೆ ನಿಯಮ ಬಾಹೀರವಾಗಿ ಕೆಲಸ ಮಾಡುತ್ತಿದ್ದು, ಅವರ ಮೇಲೆ ಕ್ರಮಕೈಗೊಳ್ಳಬೇಕು. ಪಟ್ಟಣದಲ್ಲಿನ ಅನೈರ್ಮಲ್ಯ ತಾಂಡವವಾಡುತ್ತಿದೆ. ಸರಿಯಾಗಿ ನಿರ್ವಹಿಸದಿದ್ದಲ್ಲಿ ಅಂತಹವರ ವಿರುದ್ಧ ಕ್ರಮಕೈಗೆಳ್ಳಬೇಕು, ರ್ನಿಲಕ್ಷ$್ಯ ಮಾಡಿ ನನ್ನನ್ನು ಕೆಣಕಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೆಲಸದಲ್ಲಿ ಎಚ್ಚರ ಇರಲಿ
ನಿಮ್ಮ ಇಲಾಖೆಯಲ್ಲಿ ನಾಲ್ಕು ಶಾಲಾ ಕಟ್ಟಡಗಳು ಬಿದ್ದು ಹೋಗಿವೆ. ಅಲ್ಲದೆ, ನಾಲ್ಕು ವರ್ಷಗಳಿಂದ ಶೌಚಗೃಹಗಳುಬಂದ್ ಆಗಿವೆ. ನಿನ್ನೆಯೇ ನಿಮ್ಮ ಅಧಿಕಾರಿಗೆ ತಿಳಿಸಲಾಗಿದೆ. ಅಲ್ಲದೆ, ಕೆಲ ಶಿಕ್ಷಕರು ಬಡ್ಡಿ ವ್ಯಾಪಾರ ಮಾಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಅಂತಹವರು ಎಚ್ಚರಿಕೆಯಿಂದ ಇರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಮುನಿಲಕ್ಷ$್ಮಯ್ಯ ಅವರಿಗೆ ತಿಳಿಸಿದರು.
ಕೆಲ್ಸ ಮಾಡ್ತಿವಿ ಸರ್, ಕೇಸ್ ಹಾಕ್ಬೇಡಿ ಪ್ಲೀಸ್
ಉಪಲೋಕಾಯುಕ್ತರ ಸಭೆ ವೇಳೆ ತಹಸೀಲ್ದಾರ್ ಜಿ.ಎನ್.ಸುಧೀಂದ್ರ ಅವರು ತಾಲೂಕಿನ ಎಲ್ಲ ಅಧಿಕಾರಿಗಳ ಪರ ಮನವಿ ಮಾಡುತ್ತಾ ನಮ್ಮ ಮೇಲೆ ಯಾವುದೇ ಕೇಸ್ ಬುಕ್ ಮಾಡಬೇಡಿ ಸರ್, ಒಂದು ತಿಂಗಳ ಒಳಗೆ ಬಾಕಿ ಇರುವ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು ಎಂದು ಮನವಿ ಮಾಡಿದರು.