ಭಾರತದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗಿಲ್ಲ ಕೊರತೆ

18 vikram 3
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಮ್ಮ ದೇಶದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಕೊರತೆ ಇಲ್ಲ. ತಾಂತ್ರಿಕತೆಯನ್ನು ಸಾಧನವನ್ನಾಗಿ ಬಳಸಿಕೊಂಡು ಸರ್ಕಾರಿ ಶಾಲೆ ಮಕ್ಕಳಲ್ಲಿ ಜ್ಞಾನ ವೃದ್ಧಿಸುವಂತಹ ಕಾರ್ಯ ಮಾಡುತ್ತಿರುವ ಎಸ್​ವಿವೈಎಂ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಐಐಐಟಿ ನಿರ್ದೇಶಕ ಡಾ. ಮಹದೇವ ಪ್ರಸನ್ನ ಹೇಳಿದರು.

ನಗರದ ಸ್ವಾಮಿ ವಿವೇಕಾನಂದ ಯೂತ್​ ಮೂವಮೆಂಟ್​ (ಎಸ್​ವಿವೈಎಂ) ವತಿಯಿಂದ ಇನ್​ಸ್ಟಿಟ್ಯೂಟ್​ ಆಫ್ ಇಂಜಿನಿಯರ್ಸ್​ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವೆನ್ಸಡೇ ವೆಬಿನಾರ್​ಗಳ ಪಕ್ಷಿನೋಟ "ಹಣತೆ' ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕರೋನಾ ಸಂದರ್ಭವನ್ನೇ ಉತ್ತಮ ಅವಕಾಶವಾಗಿಸಿಕೊಂಡು ಹಳ್ಳಿ ಮಕ್ಕಳ ಜ್ಞಾನಾರ್ಜನೆಗೆ ಅನುಕೂಲಕರ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ವೆನ್ಸಡೇ ವೆಬಿನಾರ ಮೂಲಕ ಜೀವನದ ಪಾಠಕ್ಕಾಗಿ, ಪಠ್ಯೇತರ ವಿಷಯಗಳನ್ನು ಒಳಗೊಂಡು ಹಲವಾರು ವಿಷಯಗಳನ್ನು ಮಕ್ಕಳಿಗೆ ತಿಳಿಸಲಾಗುತ್ತಿದೆ. ಈ ವೆಬಿನಾರಲ್ಲಿ ಹೆಣ್ಣು ಮಕ್ಕಳು ಅತಿ ಹೆಚ್ಚು ಭಾಗವಹಿಸುತ್ತಿದ್ದಾರೆ. ಹಳ್ಳಿಯಲ್ಲಿ ಇರುವಂತಹ ಮಕ್ಕಳಿಗೆ ಜ್ಞಾನವೇ ಪ್ರಬಲ ಅಸ್ತ್ರ. ಕಡಿಮೆ ವೆಚ್ಚದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಭಾರತದಲ್ಲಿ ಅಷ್ಟೇ ಅಲ್ಲದೆ ಪ್ರಪಂಚದ ಯಾವುದೇ ಕಡೆಯಿದ್ದರೂ ಅವರೆಲ್ಲರನ್ನೂ ಸಂಪರ್ಕ ಮಾಡಿ ಅವರಿಂದ ಮಕ್ಕಳಿಗೆ ಜೀವನ ಪಾಠ ಮಾಡಿಸುತ್ತಿರುವ ಕಾರ್ಯಕ್ಕೆ ನಮ್ಮ ಸಹಕಾರವಿದೆ ಎಂದರು.

ಉಮಾ ಹಂಪಣ್ಣವರ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ತಿಳಿಸುವ ಕಾರ್ಯ ಅಗತ್ಯ. ಜೀವನದಲ್ಲಿ ಮೌಲ್ಯಗಳು ಮುಖ್ಯ. ಶಿಕ್ಷಣದ ಜತೆಗೆ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುತ್ತಿರುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದರು.

ಸ್ವಾಮಿ ವಿವೇಕಾನಂದ ಯೂತ್​ ಮೊವ್​ಮೆಂಟ್​ ಆಡಳಿತ ಮಂಡಳಿ ಸದಸ್ಯೆ ಪುಷ್ಪಲತಾ ಅಧ್ಯಕ್ಷತೆ ವಹಿಸಿದ್ದರು. ಸಂಜೀವ ರೆಡ್ಡಿ, ಡಾ. ಲಿಂಗರಾಜ ರಾಮಾಪುರ, ಕೀರ್ತಿ ತೇಲಿ ಅಭಿಪ್ರಾಯ ಹಂಚಿಕೊಂಡರು.

ಜಯಂತ ಕೆ.ಎಸ್​. ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net