ಈ ನಾಡಲ್ಲಿ ಜ್ಞಾನಕ್ಕೆ ಕೊರತೆ ಇಲ್ಲ

gld 20-1 shri
ಗುಳೇದಗುಡ್ಡದಲ್ಲಿ ನಡೆದ ಸಮಾರಂಭದಲ್ಲಿ ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ಸ್ವಾಮಿಗಳು ಪ್ರವಚನ ನೀಡಿದರು.
Published on

ಗುಳೇದಗುಡ್ಡ: ದೇಶದಲ್ಲಿ ಮಹಾತ್ಮರು ಕಂಡಿರುವ ಅನುಭಾವದ ದರ್ಶನಗಳು ತುಂಬಿ ತುಳುಕುತ್ತಿವೆ. ಬದುಕಿಗೆ ಬೇಕಾಗಿರುವ ವಿಚಾರಧಾರೆಗಳನ್ನು ಮಹಾತ್ಮರು ಇಲ್ಲಿ ನಮ್ಮೆಲ್ಲರ ಯೋಗಕ್ಷೇಮಕ್ಕೆ ಹರಡಿ ಹೋಗಿದ್ದಾರೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ಶ್ರೀಗಳು ಹೇಳಿದರು.

ಪಟ್ಟಣದ ಗುರುಸಿದ್ಧೇಶ್ವರ ಮಠದಲ್ಲಿ ಶರಣಸಂಗಮ ಸಮಾರಂಭ, ಗುರುಸೇವಾ ದೀಕ್ಷಾ ಪಟ್ಟಾಧಿಕಾರ ಸಮಾರಂಭದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು.

ಶರಣರ ಈ ಪವಿತ್ರ ನಾಡಲ್ಲಿ ಜ್ಞಾನಕ್ಕೆ ಕೊರತೆ ಇಲ್ಲ. ನುಡಿಗೂ ಕೊರತೆ ಇಲ್ಲ. ನಡೆಗೆ ಮಾತ್ರ ಕೊರತೆ ಇದೆ. ಅದಕ್ಕೆ ಬಸವಣ್ಣನವರು ಈ ನಡೆ, ನುಡಿ ಕುರಿತು ನುಡಿದಂತೆ ನಡೆ, ಇದೇ ಜನ್ಮ ಕಡೆ ಎಂದು ಹೇಳಿದರು.

ಶರಣ, ಸಂತರ ಪ್ರಕಾರ ನಡೆ ಮತ್ತು ನುಡಿ ಮನುಷ್ಯನ ಜೀವನದ ದರ್ಶನ. ಜಗದೊಳು ನುಡಿದಂತೆ ನಡೆದು, ನಡೆದಂತೆ ನುಡಿದು ತೋರಿದ ಜೀವನ ಅದುವೇ ಪಾವನ ಎನ್ನುವುದು ಶರಣರ ಆಶಯವಾಗಿದೆ. ಈ ಭೂಮಿ ಮೇಲೆ ಮಹಾತ್ಮರು ಇರುವ ಕಾರಣದಿಂದ ಮತ್ತು ಅವರ ದರ್ಶನದಿಂದ ನಾವೆಲ್ಲ ಬದುಕಿದ್ದೇವೆ. ಹಾಗಾಗಿ ಈ ದೇಶದಲ್ಲಿ ದರ್ಶನಗಳು ತುಂಬಿಕೊಂಡಿವೆ. ಅವುಗಳನ್ನು ನೋಡುವ ಕಣ್ಣುಗಳಿರಬೇಕು. ಕೇಳುವ ಕಿವಿಗಳಿರಬೇಕು. ಪ್ರೀತಿಸುವ ಹೃದಯವಿರಬೇಕು. ಕೈಮುಟ್ಟಿ ಹೋಗುವ ಕೈಗಳಿರಬೇಕು. ಆ ವಿಚಾರಗಳನ್ನು ಕೇಳುವಂತಹ ಕಾಲಿನ ಶಕ್ತಿ ಇರಬೇಕು ಎಂದರು.

ಶ್ರೀಮಠದ ಬಸವರಾಜ ಪಟ್ಟದಾರ್ಯ ಸ್ವಾಮಿಗಳು, ಶ್ರೀ ಗುರುಬಸವ ದೇವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net