ಮಾಗಡಿ ತಾಲೂಕಿನಲ್ಲಿ ರಸಗೊಬ್ಬರ ಕೊರತೆ ಇಲ್ಲ

gobbara
Published on

ಮಾಗಡಿ: ತಾಲೂಕಿನಲ್ಲಿ ಡಿಎಪಿ&50.45ಮೆ.ಟನ್​, ಎಂಒಪಿ&33.10 ಮೆಟ್ರಿಕ್​ ಟನ್​, ಕಾಂಪ್ಲೆಕ್ಸ್​ ಗೊಬ್ಬರ 525.265 ಮೆ.ಟನ್​, ಎಸ್​ಎಸ್​ಪಿ&5.25 ಮೆ.ಟನ್​ ಹಾಗೂ ಯೂರಿಯಾ 603.712 ಮೆ.ಟನ್​ ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಾ ಶವಣೂರು ತಿಳಿಸಿದರು.

ರಾಮನಗರದ ಜಂಟಿ ಕೃಷಿ ನಿರ್ದೇಶಕರು, ಪಿಎಸ್​ಐ, ಕಂದಾಯ ನಿರೀಕ್ಷಕರು, ಮಾಗಡಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಜಾರಿ ದಳ ಮಾಗಡಿ ತಾಲೂಕಿನ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ದಾಸ್ತಾನು ಮಾಹಿತಿ ಪಡೆದ ಬಳಿಕ ಮಾತನಾಡಿದ ಅವರು, ರಸಗೊಬ್ಬರದ ಅಭಾವ, ಎಂಆರ್​ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಹಾಗೂ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸುವ ಪ್ರಕರಣಗಳು ಜಂಟಿ ಕಾರ್ಯಾಚರಣೆ ವೇಳೆಯಲ್ಲಿ ಕಂಡುಬಂದಿಲ್ಲ. ಅಲ್ಲದೆ ಮಾಗಡಿ ಪಟ್ಟಣದ ಟಿಎಪಿಸಿಎಂಎಸ್​ನಲ್ಲಿ ಯೂರಿಯಾ&26 ಮೆ.ಟನ್​, ಡಿಎಪಿ&7.9 ಮೆ.ಟನ್​ ಹಾಗೂ 20&20&0&13&26 ಮೆ.ಟನ್​ ದಾಸ್ತಾನು ಇದ್ದು, ವಿತರಣೆ ಪ್ರಗತಿಯಲ್ಲಿದೆ ಎಂದರು.

ಮಾರಾಟಗಾರರಿಗೆ ರಸಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಮತ್ತು ಕೃತಕ ಅಭಾವ ಸೃಷ್ಟಿಸಬಾರದೆಂದು ಎಚ್ಚರಿಕೆ ನೀಡಲಾಗಿದ್ದಿ, ಬಹುತೇಕ ಮಳಿಗೆಗಳಲ್ಲಿ ಪಿಒಎಸ್​ ದಾಸ್ತಾನು ಮತ್ತು ಭೌತಿಕ ದಾಸ್ತಾನು ತಾಳೆಯಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net