ಕಾತೂರ ಪಂಚಾಯಿತಿಗೆ ತೆರಳಲು ರಸ್ತೆಯೇ ಇಲ್ಲ! ಕೆರೆ ಕೋಡಿ ಹರಿಯುವ ಕಾಲು ದಾರಿಯೇ ಆಸರೆ

26mnd3 katur panchayat Road
Published on


ಮುಂಡಗೋಡ: ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಲು ಸರಿಯಾದ ರಸ್ತೆಯಿಲ್ಲದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.


ತಾಲೂಕಿನ ಕಾತೂರ ಗ್ರಾಮ ಪಂಚಾಯಿತಿ ಕಚೇರಿ ನೂತನ ಕಟ್ಟಡವನ್ನು ಗ್ರಾಮದ ಪಕ್ಕದಲ್ಲಿನ ಕೆರೆಯ ದಡದಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ವಿುಸಲಾಗಿದೆ. ಕಳೆದ ವರ್ಷ ಈ ಕಟ್ಟಡವನ್ನು ಉದ್ಘಾಟಿಸಲಾಗಿತ್ತು. ಆದರೆ, ಕಚೇರಿಗೆ ಹೋಗಲು ಸರಿಯಾದ ದಾರಿ ಇಲ್ಲದಾಗಿದೆ.

ಕೆರೆ ಭರ್ತಿಯಾದಾಗ ಕೋಡಿ ನೀರು ಹರಿದು ಹೋಗುವ ಮಾರ್ಗದಲ್ಲಿ ಪಂಚಾಯಿತಿ ಕಚೇರಿಗೆ ಹೋಗುವ ಕಾಲುದಾರಿ ಮಾಡಲಾಗಿದೆ. ಮಳೆಗಾಲ ಆರಂಭವಾದರೆ ಈ ಕಾಲುದಾರಿ ಕೆಸರುಮಯವಾಗುತ್ತದೆ. ಇದರಿಂದ ಸಾರ್ವಜನಿಕರು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಲು ಪರದಾಡುವಂತಾಗಿದೆ.

ಕಾತೂರ ಗ್ರಾಮ ಪಂಚಾಯಿತಿ ಕಚೇರಿಗೆ ಹೋಗಲು ಕಾಲುದಾರಿಯಿದ್ದು, ಮಳೆಗಾಲದಲ್ಲಿ ಕೆಸರು ದಾರಿಯಾಗಿ ಮಾರ್ಪಡುತ್ತದೆ. ಇದರಿಂದ ಪಂಚಾಯಿತಿ ಕಚೇರಿಗೆ ಹೋಗಲು ಸಾಕಷ್ಟು ತೊಂದರೆಯಾಗುತ್ತಿದೆ. ಸಾರ್ವಜನಿಕರು ಪಂಚಾಯಿತಿಗೆ ಹೋಗಿ ಬರಲು ಸಮರ್ಪಕವಾದ ಕಚ್ಚಾ ರಸ್ತೆ ನಿರ್ವಿುಸುವುದು ಅವಶ್ಯವಿದೆ. ನೀತಿನ್ ರಾಯ್ಕರ ಕಾತೂರ ನಿವಾಸಿ ಪಂಚಾಯಿತಿ ಕಚೇರಿಗೆ ಬರುವ ದಾರಿ ಸರಿಯಾಗಿಲ್ಲ. ಇದರಿಂದ ಜನರಿಗೆ ತೊಂದರೆ ಆಗುತ್ತಿರುವುದು ನಿಜ. ಉದ್ಯೋಗ ಖಾತ್ರಿಯಡಿ ರಸ್ತೆ ಮಾಡಲು ಸಿದ್ಧತೆ ಮಾಡಿದ್ದೇವೆ. ಆದರೆ, ಸರ್ಕಾರ ಕಚೇರಿಗೆ ದಾರಿ ಮಾಡಲು ಅವಕಾಶ ರದ್ದುಪಡಿಸಿದ ಕಾರಣ ರಸ್ತೆ ಮಾಡಲು ಆಗಿಲ್ಲ. ಇದೀಗ ಶಾಸಕರ ಅನುದಾನ ಹಾಗೂ 15ನೇ ಹಣಕಾಸು ಯೋಜನೆಯಡಿ ಮಳೆ ನಿಂತ ನಂತರ ರಸ್ತೆ ಮಾಡಿಸಲಾಗುವುದು.| ಸಂಜೀವಯ್ಯ ಹಿರೇಮಠ, ಪ್ರಭಾರ ಪಿಡಿಒ ಕಾತೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net