ತ್ಯಾಗಿಗಳಾದ ಸಂತ್ರಸ್ತರ ಗೌರವಿಸುವ ಕೆಲಸ ಆಗಿಲ್ಲ

There is no respect for the victims who are the victims
ಬಾಗಲಕೋಟೆ ನಗರದ ಕೌಲಪೇಟ ಸೇರಿದಂತೆ ವಿವಿಧ ಓಣಿಗಳಲ್ಲಿ ಮನೆ ಮನೆಗೆ ತೆರಳಿ ಮಲ್ಲಿಕಾರ್ಜುನ ಚರಂತಿಮಠ ಪ್ರಚಾರ ನಡೆಸಿದರು.
Published on

ಬಾಗಲಕೋಟೆ : ರಾಜಕೀಯ ಮೂಲ ಚಿಂತನೆಗಳನ್ನೇ ಮರೆತು, ರಾಜಕೀಯ ಧರ್ಮ ಪಾಲಿಸದೇ ಆಡಳಿತ ನೀಡುತ್ತಿರುವ ನಾಯಕರಿಗೆ ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದ ಜನರು ತಕ್ಕ ಉತ್ತ ನೀಡಲಿದ್ದಾರೆ. 1983ರ ಇತಿಹಾಸ ಮರುಕಳಿಸಲಿದೆ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಕೌಲಪೇಠ ಸೇರಿದಂತೆ ವಿವಿಧ ಓಣಿಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು.

ಈ ಕ್ಷೇತ್ರದಿಂದ ಹಲವು ಬಾರಿ ಆಯ್ಕೆಯಾದವರು, ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿಲ್ಲ. ವಿದ್ಯಾವಂತರಿಗೆ ಕೆಲಸ ಕೊಡಿಸುವ ಕಾರ್ಯವಾಗಿಲ್ಲ. ಇದರಿಂದ ಇಡೀ ಬಾಗಲಕೋಟೆ ನಗರ, ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದೆ ಎಂದರು.

ಜನರ ಸ್ವಾವಲಂಬನೆಯ ಬದುಕಿಗೆ ಯಾವ ಆಸರೆಯೂ ಇಲ್ಲ. ಮನೆ-ಭೂಮಿ ಕಳೆದಕೊಂಡ ಸಂತರಸ್ತರನ್ನು, ಸ್ವಾತಂತ್ರ್ಯ ಯೋಧರಂತೆ ಕಾಣಬೇಕು ಎಂದು ಹಿರಿಯರು ಹೇಳುತ್ತಾರೆ. ಆದರೆ, ನಮ್ಮಲ್ಲಿ ಸಂತ್ರಸ್ತರನ್ನು ಅತ್ಯಂತ ಕಡೆಯಾಗಿ ನೋಡಲಾಗುತ್ತಿದೆ. ಇಂತಹ ಹಲವಾರು ಸಮಸ್ಯೆಗಳ ಮಧ್ಯೆ ಈಗ ಚುನಾವಣೆ ಬಂದಿದೆ. ಆಯ್ಕೆ ನಿಮ್ಮ ಕೈಯಲ್ಲಿ ಇದೇ ಎಂದು ಹೇಳಿದರು.

ಮುಖಂಡರಾದ ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ರವಿ ಕುಮಟಗಿ, ಅಶೋಕ ಮುತ್ತಿನಮಠ, ಅಶೋಕ ಮಹೇಂದ್ರಕರ, ನಾಗರಾಜ ಕೆರೂರ, ಸಚಿನ ಮರಿಶೆಟ್ಟಿ, ಸಂಜೀವ ಡಿಗ್ಗಿ, ಉಮಾ ಗವಿಮಠ, ಸುಭದ್ರಾ ದಶಮನಿ, ಸಂಗಮ್ಮ ನಾಶಿ, ರೇಖಾ ಮುರಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net