

ದೊಡ್ಡಬಳ್ಳಾಪುರ : ಯಾವುದೇ ಕಾರಣಕ್ಕೂ ದೊಡ್ಡಬಳ್ಳಾಪುರದಲ್ಲಿ ಶಂಕುಸ್ಥಾಪನೆಯಾಗಿ ನಿರ್ಮಾಣವಾಗುವ ಜಿಲ್ಲಾಸ್ಪತ್ರೆ ಕೈತಪ್ಪುವ ಪ್ರಶ್ನೆಯೇ ಇಲ್ಲ. ಇಲ್ಲಿಯೇ ಜಿಲ್ಲಾಸ್ಪತ್ರೆ ನಿರ್ಮಾಣವಾಗುತ್ತದೆ ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು. ಜಿಲ್ಲಾಸ್ಪತ್ರೆ ತಾಲೂಕಿನಲ್ಲಿ ಶ್ರೀವಾಗಿ ನಿರ್ಮಾಣ ಮಾಡುವಂತೆ ಜಿಲ್ಲಾಸ್ಪತ್ರೆ ಹೋರಾಟ ಸಮಿತಿಯಿಂದ ನಗರದ ಕನ್ನಡ ಜಾಗೃತ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾಸ್ಪತ್ರೆಯ ಬಗ್ಗೆ ಐದು ಬಾರಿ ಸದನದಲ್ಲಿ ಪ್ರಶ್ನೆ ಮಾಡಲಾಗಿದೆ. ಇಲ್ಲಿನ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಕೈತಪ್ಪುವ ಮಾತೇ ಬೇಡ. ಜಿಲ್ಲಾಸ್ಪತ್ರೆಯ ಹೋರಾಟ ಸಮಿತಿಯಲ್ಲಿ ಅನೇಕ ಹೋರಾಟಗಾರರು, ಹಿರಿಯರು ಭಾಗಿಯಾಗಿದ್ದಾರೆ. ಕಳೆದ ವರ್ಷ ದೇವನಹಳ್ಳಿಯಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಜಿಲ್ಲಾಸ್ಪತ್ರೆಯ ಯೋಜನೆಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ಮಾಡಿದ್ದರು. ನಿಗದಿ ಪಡಿಸಿದ ಅನುದಾನವನ್ನು ಜಿಲ್ಲಾಸ್ಪತ್ರೆಗೆ ಕೊಡಬೇಕಿದೆ. ದೊಡ್ಡಬಳ್ಳಾಪುರದ ತಾಯಿ&ಮಗು ಆಸ್ಪತ್ರೆಯಲ್ಲಿ 200&250 ಹೆರಿಗೆಗಳು ಆಗುತ್ತಿದೆ. ಉಳಿದ ತಾಲೂಕುಗಳಲ್ಲಿ 100&120 ಆಗುತ್ತದೆ. ಜಿಲ್ಲಾಸ್ಪತ್ರೆ ಅತ್ಯಂತ ಅವಶ್ಯಕವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ಅವರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಜತೆ ಮಾತನಾಡಿದ್ದಾರೆ.
ಮುಂದಿನ ವಾರ ವಿವಿಧ ಇಲಾಖೆಗಳ ಸಭೆ ನಡೆಸುವ ಸಾಧ್ಯತೆ ಇದೆ. ಅಗತ್ಯ ಕ್ರಮವಹಿಸಲು ಕ್ರಮವಹಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಜಿಲ್ಲಾಸ್ಪತ್ರೆ ಕೈತಪ್ಪುವುದಿಲ್ಲ. ನಿಮ್ಮ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು. ಹೋರಾಟಗಾರ ಸಂಜೀವ ನಾಯಕ್ ಮಾತನಾಡಿ, ಹಾಲಿ ಹಾಗೂ ಮಾಜಿ ಶಾಸಕರು ಒಂದಾಗಿ ಜಿಲ್ಲಾಸ್ಪತ್ರೆಗಾಗಿ ಕೆಲಸ ಮಾಡಬೇಕು. ವೈಯಕ್ತಿಕ ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತಿ ಕೆಲಸ ಮಾಡಬೇಕು. ಜಿಲ್ಲಾಸ್ಪತ್ರೆ ಶ್ರೀವಾಗಿ ನಿರ್ಮಾಣವಾಗಬೇಕು. ಜಿಲ್ಲಾಸ್ಪತ್ರೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು, ಕಂದಾಯ ಸಚಿವರಿಗೂ ಮನವಿ ಮಾಡಲಾಗುತ್ತದೆ ಎಂದರು.
ಹೋರಾಟಕ್ಕೆ ಬೆಂಬಲ : ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ, 2013&14ರ ಸಾಲಿನ ಬಜೆಟ್ನಲ್ಲಿ ಜಿಲ್ಲಾಸ್ಪತ್ರೆಯ ವಿಚಾರ ಪ್ರಸ್ತಾಪ ಆಗಿತ್ತು. ಆದರೆ ರಾಜ್ಯದಲ್ಲಿ ರಾಜಕೀಯ ಬದಲಾವಣೆಯಿಂದ ಜಾರಿಗೆ ಸಾಧ್ಯವಾಗಿಲ್ಲ. 2018&19ರಲ್ಲಿ ಜಿಲ್ಲಾಸ್ಪತ್ರೆ ಕೆಸಿ ಜನರಲ್ಗೆ ಹೊಗುವ ಪ್ರಸ್ತಾವನೆ ಬಂದಿತ್ತು. ಹಿಂದಿನ ಜಿಲ್ಲಾ ಮಂತ್ರಿಗಳಾದ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಅದು ಆಗದಂತೆ ಕ್ರಮವಹಿಸಲಾಗಿತ್ತು. ಇದನ್ನು ಕ್ಯಾಬಿನೆಟ್ನಲ್ಲಿ ರದ್ದು ಮಾಡಿಸಿದೆವು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಮಟ್ಟದ ಕೇಂದ್ರಗಳ ಆರಂಭಕ್ಕೆ ಮಾತುಕತೆ ಆಗಿತ್ತು. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಮೆಡಿಕಲ್ ಕಾಲೇಜಿದೆ, ನಮ್ಮಲ್ಲಿ ಇಲ್ಲ. ಸಿಎಂ ಸಿದ್ದರಾಮಯ್ಯ ಬಳಿ ಕೂಡ ಒತ್ತಾಯ ಮಾಡಿದ್ದೇವೆ. ಜಿಲ್ಲಾಸ್ಪತ್ರೆ ತಾಲೂಕಿನಲ್ಲಿಯೇ ಆಗಬೇಕು ಎಂದರು. ಹೋರಾಟಗಾರರೊಂದಿಗೆ ಕೈ ಜೋಡಿಸಲಾಗುವುದು ಎಂದರು.