

ಲಕ್ಷ್ಮೇಶ್ವರ: ಪ್ರತಿಯೊಬ್ಬರೂ ದಾನ ನೀಡುವ ಗುಣ ಬೆಳೆಸಿಕೊಳ್ಳಬೇಕು. ದಾನದಿಂದ ಮನಸಿಗೆ ನೆಮ್ಮದಿಯ ಜತೆಗೆ ಒಳ್ಳೆಯ ಕಾರ್ಯವನ್ನು ಮಾಡಿದ ತೃಪ್ತಿ ದೊರಕುತ್ತದೆ ಎಂದು ಮುಂಡರಗಿಯ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿಗಳು ನುಡಿದರು.
ಪಟ್ಟಣದ ಶಿಗ್ಲಿ ಮಾರ್ಗದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಹತ್ತಿರ ಮಂಗಳವಾರ ದಿ. ಬಸವರಾಜ ಗೂಳಪ್ಪ ಉಪನಾಳ ಇವರು ಹೂವಿನಶಿಗ್ಲಿ ಮಠಕ್ಕೆ ದಾನ ಮಾಡಿರುವ 1 ಎಕರೆಯಲ್ಲಿ ಧಾರ್ಮಿಕ ಪಾಠಶಾಲಾ ಕಟ್ಟಡದ ಭೂಮಿಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದ ಶ್ರೀಗಳು, ದಾನ, ಧರ್ಮಗಳಿಂದ ಸಂಸ್ಥೆಗಳು ಬೆಳೆಯುತ್ತವೆ. ಗುಪ್ತದಾನ ಮಾಡುವವರು ಇದ್ದಾರೆ. ಮನಸಿನ ತೃಪ್ತಿಗೆ ದಾನ ಮಾಡುವ ಕಾರ್ಯವನ್ನು ಮಾಡಬೇಕೆ ಹೊರತು ಪ್ರಚಾರದ ಉದ್ದೇಶದಿಂದ ದಾನ ಮಾಡುವುದು ಬೇಡ. ಉತ್ತಮ ಕಾರ್ಯಗಳನ್ನು ಮಾಡಿರುವ ಪ್ರತಿಯೊಬ್ಬರನ್ನೂ ಸಮಾಜವು ಗೌರವಿಸುತ್ತದೆ ಎಂದು ಹೇಳಿದರು.
ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ಉಪನಾಳ ಕುಟುಂಬದವರು ಈ ಭಾಗದಲ್ಲಿ ಅನೇಕ ಧಾರ್ಮಿಕ ಕಾರ್ಯಗಳಿಗೆ ಭೂಮಿ ದಾನ ಮಾಡಿದ ಅನೇಕ ಉದಾಹರಣೆಗಳಿವೆ. ಹೂವಿನಶಿಗ್ಲಿ ವಿರಕ್ತಮಠದಿಂದ ಆರಂಭವಾಗುವ ಧಾರ್ಮಿಕ ಪಾಠಶಾಲೆ ಮತ್ತೊಂದು ಮೈಲಿಗಲ್ಲಾಗಲಿದೆ ಎಂದು ಹೇಳಿದರು.
ಕುಂದಗೋಳ ಕಲ್ಯಾಣಪುರಮಠದ ಅಭಿನವ ಬಸವಣ್ಣಜ್ಜನವರು ನೇತೃತ್ವ ವಹಿಸಿ, ಮನುಷ್ಯ ತನ್ನ ಸತ್ಯಶುದ್ಧ ಕಾಯಕದ ಜತೆಗೆ ದಾನ, ಧರ್ಮ, ಪರೋಪಕಾರ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ಧರ್ಮ ಗುರುಗಳ, ಹಿರಿಯರ ಸಂದೇಶ ಮತ್ತು ಮಾರ್ಗದರ್ಶನ ಅವಶ್ಯವಾಗಿದೆ. ಅಂತಹ ವಾತಾವರಣ ಸೃಷ್ಟಿಸಬೇಕಾಗಿದೆ ಎಂದರು.
ಮಹಾಂತದೇವರು ಉಪಸ್ಥಿತರಿದ್ದರು. ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಪಾರ್ವತಿ ಬಸವರಾಜ ಉಪನಾಳ, ಎಸ್.ಪಿ. ಬಳಿಗಾರ, ಪುಲಕೇಶಿ ಉಪನಾಳ, ಮಹೇಶ ಉಪನಾಳ, ಸೋಮೇಶ ಉಪನಾಳ, ರಮೇಶ ಉಪನಾಳ, ನಂದಾ ಧರ್ಮಾಯತ, ಡಿ.ಬಿ. ಬಳಿಗಾರ, ಚಂಬಣ್ಣ ಬಾಳಿಕಾಯಿ, ಡಾ. ವಿನೋದ ಹೊನ್ನಿಕೊಪ್ಪ, ಎಲ್.ಎಸ್. ಅರಳಹಳ್ಳಿ, ಡಾ.ಆರ್.ಜಿ. ಚಿಕ್ಕಮಠ, ನಿಂಗಪ್ಪ ಹೆಬಸೂರ, ಮಂಜುನಾಥ ಮಾಗಡಿ, ಹೊನ್ನಪ್ಪ ಒಡ್ಡರ, ನಾಗರಾಜ ಚಿಂಚಲಿ, ರಾಮಣ್ಣ ಲಮಾಣಿ(ಶಿಗ್ಲಿ), ಇದ್ದರು. ಭೂದಾನಿಗಳಾದ ದಿ. ಬಸವರಾಜ ಉಪನಾಳ ಕುಟುಂಬದವರನ್ನು ಸನ್ಮಾನಿಲಾಯಿತು. ಸಿದ್ದಯ್ಯಶಾಸ್ತ್ರಿಗಳು ಹಿರೇಮಠ ನಿರೂಪಿಸಿ, ಅಶೋಕ ಶಿರಹಟ್ಟಿ ಸ್ವಾಗತಿಸಿದರು.