

ಕಿರುವಾರ ಎಸ್.ಸುದರ್ಶನ್ ಕೋಲಾರ
ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಸರ್ಕಾರ ಜಾಗ ಮಂಜೂರು ಮಾಡದಿರುವುದು ವ್ಯಾಪಾರಸ್ಥರು, ಮಂಡಿ ಮಾಲೀಕರು, ರೈತರು ಹಾಗೂ ಹಮಾಲಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಕೆಜಿಎ್ ಮಾರುಕಟ್ಟೆಗೆ ಸ್ಥಳಾಂತರಗೊಳ್ಳಲು ಮುಂದಾಗಿದ್ದಾರೆ.
ಮಾರುಕಟ್ಟೆಗೆ ಜಾಗ ಗುರುತಿಸುವುದು ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದ್ದು, ಸಮಸ್ಯೆಗೆ ಪರಿಹಾರ ಸಿಗದೆ ಶಾಶ್ವತವಾಗಿ ಉಳಿದುಕೊಂಡಂತಾಗಿದೆ. ಹಲವು ದಶಕಗಳಿಂದ ಸಮಸ್ಯೆಯು ಹಾಗೆ ಉಳಿದುಕೊಂಡಿದೆ. ಜಾಗಕ್ಕಾಗಿ ರೈತರು, ವಿವಿಧ ಸಂಟನೆಗಳು, ವ್ಯಾಪಾರಸ್ಥರು ನಿರಂತರ ಹೋರಾಟ ನಡೆಸಿಕೊಂಡು ಬರಲಾಗುತ್ತಿದ್ದರೂ ಇತ್ತ ಜನಪ್ರತಿನಿಧಿಗಳಾಗಲಿ, ಸರ್ಕಾರವಾಗಲಿ ಗಮನಹರಿಸುತ್ತಿಲ್ಲ.
ಜಾಗದ ಸಮಸ್ಯೆಗೆ ಪರಿಹಾರ ಸಿಗದೆ ಇರುವುದರಿಂದ ಕೋಲಾರ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಡಿ ಮಾಲೀಕರು ಕೆಜಿಎ್ ಮಾರುಕಟ್ಟೆಗೆ ಸ್ಥಳಾಂತರವಾಗಲು ಮುಂದಾಗಿದ್ದಾರೆ. ಈ ಬಗ್ಗೆ ಈಗಾಗಲೇ ಕೆಜಿಎ್ ಶಾಸಕಿ ರೂಪಕಲಾ ಅವರೊಂದಿಗೆ ಮಾತುಕತೆ ಆಗಿದ್ದು, ಅವಕಾಶ ನೀಡಿದರೆ ಕೋಲಾರ ಮಾರುಕಟ್ಟೆಯಿಂದ ಹೊರ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ.
ಕೆಜಿಎ್ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರು&ಚೆನ್ನೆ$ ಕಾರಿಡಾರ್ ಹೆದ್ದಾರಿ ಹಾದು ಹೋಗಿದ್ದು, ತಮಿಳುನಾಡು, ಕೇರಳ ಸೇರಿ ಇನ್ನು ಹೆಚ್ಚು ಹೊರ ರಾಜ್ಯಗಳಿಗೆ ಸಂಕರ್ಪ ಕಲ್ಪಿಸುತ್ತದೆ. ಮುಂದಿನ ದಿನಗಳಲ್ಲಿ ವಹಿವಾಟು ಹೆಚ್ಚಾಗುವ ನಿರೀೆಯಿದೆ. ಇದರಿಂದಾಗಿ ಕೋಲಾರ ಮಾರುಕಟ್ಟೆಯ ವ್ಯಾಪಾರಸ್ಥರು, ಮಂಡಿ ಮಾಲೀಕರು, ಹಮಾಲರು ಕೆಜಿಎ್ನತ್ತ ಮುಖ ಮಾಡಿದ್ದಾರೆ.ಜಿಲ್ಲೆಯಲ್ಲಿ ಪ್ರತಿ ವರ್ಷ ಮೇ ನಿಂದ ನವೆಂಬರ್ವರೆಗೂ ಟೊಮ್ಯಾಟೊ ಸುಗ್ಗಿ ನಡೆಯುತ್ತದೆ. ವಾರ್ಷಿಕ 80 ಲಕ್ಷ ಟನ್ ಟೊಮ್ಯಾಟೊ ಆವಕವಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಾಗಿ ಬೆಳೆದಿರುವ ಈ ಮಾರುಕಟ್ಟೆಗೆ ಆಂಧ್ರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿ ಬೇರೆ ಬೇರೆ ಜಿಲ್ಲೆಗಳಿಂದಲೂ ರೈತರು ಟೊಮ್ಯಾಟೊ ಮಾರುಕಟ್ಟೆಗೆ ತರುತ್ತಾರೆ.
12 ಎಕರೆಯಲ್ಲೇ ವಹಿವಾಟು
ಮೊದಲು ನಗರದ ಟಿ.ಚೆನ್ನಯ್ಯ ಸಂತೆ ಮೈದಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾರುಕಟ್ಟೆಯನ್ನು 1997ರಲ್ಲಿ ಕೋಂಡರಾಜನಹಳ್ಳಿ ಸಮೀಪ 18 ಎಕರೆ 31 ಗುಂಟೆ ಜಾಗ ಗುರುತಿಸಿ ಸ್ಥಳಾಂತರ ಮಾಡಲಾಯಿತು. ಅಂದಿನ ಕಾಲಕ್ಕೆ ತಕ್ಕಂತೆ ಮಾರುಕಟ್ಟೆ ವಾಹಿವಾಟಿಗೆ 12 ಎಕರೆ ಜಾಗ ಕಲ್ಪಿಸಲಾಗಿತ್ತು. ಮಾರುಕಟ್ಟೆಗೆ ಟೊಮ್ಯಾಟೊ ಸೇರಿ ತರಕಾರಿ ಆವಕ ಹೆಚ್ಚಾಗಿದ್ದು, ಈಗಿನ ಕಾಲಕ್ಕೆ ಜಾಗವಿಲ್ಲ. ಏಷ್ಯಾ ಖಂಡದಲ್ಲೇ 2ನೇ ಅತಿ ದೊಡ್ಡ ಮಾರುಕಟ್ಟೆಯಾಗಿ ಬೆಳೆದಿದ್ದು, ಈಗ ಜಾಗ ಸಮಸ್ಯೆಯಿಂದ ಸೊರಗುತ್ತಿದೆ. ಸುಮಾರು 20ಕ್ಕೂ ಹೆಚ್ಚು ಮಂಡಿ ಮಾಲೀಕರು ಖಾಸಗಿ ಜಾಗಗಳನ್ನು ಬಾಡಿಗೆಗೆ ಪಡೆದು ವಹಿವಾಟು ನಡೆಸುವ ಪರಿಸ್ಥಿತಿ ಬಂದಿದೆ.
ಅವಕಾಶ ಸಿಕ್ಕರೆ ಸ್ಥಳಾಂತರ ಗ್ಯಾರಂಟಿ
ಕೋಲಾರ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಸ್ಥಳದ ಕೊರತೆಯಿದೆ. ಇಲ್ಲಿಗೆ ಆವಕ ಹೆಚ್ಚಾಗಿದ್ದರೂ ಖರೀದಿದಾರರು ಬರುತ್ತಿಲ್ಲ. ಖರೀದಿ ಮಾಡಿದ ಮಾಲನ್ನು ಪ್ಯಾಕ್ ಮಾಡಿ ಹೊರ ರಾಜ್ಯ, ವಿದೇಶಕ್ಕೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಸಮಸ್ಯೆಯನ್ನು ಎಷ್ಟು ದಿನ ಅಂತ ಎದುರಿಸಿಕೊಂಡು ಇರಲು ಸಾಧ್ಯ, ಇದರಿಂದಾಗಿ ಮಂಡಿ ಮಾಲೀಕರು, ಅಮಾಲಿಗರು, ವ್ಯಾಪಾರಸ್ಥರು ಕೆಜಿಎ್ ಶಾಸಕಿ ರೂಪಕಲಾ
ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದ್ದು, ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ. ಅವಕಾಶ ಸಿಕ್ಕಿದರೆ ಸ್ಥಳಾಂತರವಾಗುವುದು ಖಚಿತ ಎಂದು ಮಂಡಿ ಮಾಲೀಕ ಶಿವಣ್ಣ ತಿಳಿಸಿದರು.
ಚಲುವನಹಳ್ಳಿ ಜಾಗಕ್ಕಿಲ್ಲ ಪ್ರತಿಕ್ರಿಯೆ
ಕೋಲಾರ ತಾಲೂಕಿನ ಮಂಗಸಂದ್ರ, ಅರಾಭಿಕೊತ್ತನೂರು, ಬೆಳಮಾರನಹಳ್ಳಿ, ಬೆಳಮಾರನಹಳ್ಳಿ, ಈಕಂಬಳ್ಳಿ ಹೀಗೆ ಹಲವು ಕಡೆ ಜಾಗ ಗುರುತಿಸಿದರೂ ಎಲ್ಲೂ ಅಂತಿಮವಾಗಲಿಲ್ಲ. ಚೆಲುವನಹಳ್ಳಿ ಸಮೀಪ ರೈತರು ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಕೊಂಡಿದ್ದರು. ಇದನ್ನು ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಎಸಿ ಅವರು ರದ್ದುಗೊಳಿಸಿ ಆದೇಶಿಸಿದ್ದರು. ಅರ್ಜಿದಾರರು ಮತ್ತೆ ಜಿಲ್ಲಾಡಳಿತ ನ್ಯಾಯಾಲಯಕ್ಕೆ ಮೇಲ್ಮನವಿ ಹೋಗಿದ್ದರು. ಅಲ್ಲೂ ಸಹ ಸರ್ಕಾರದ ಪರ ಆದೇಶವಾಗಿದ್ದು, ಅದೇ ಜಾಗವನ್ನು ಮಾರುಕಟ್ಟೆಗೆ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
"ರೈತರು ಅನುಭವಿಸುತ್ತಿರುವ ಸಮಸ್ಯೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿಲ್ಲ. ಜಾಗ ಸಮಸ್ಯೆ ಇರುವುದರಿಂದ ಮಾರುಕಟ್ಟೆಗೆ ಬರುವ ರೈತರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಕೆಜಿಎ್ ಮಾರುಕಟ್ಟೆಗೆ ಸ್ಥಳಾಂತರವಾಗುವುದು ಅನಿವಾರ್ಯವಾಗಿದೆ."
- ಸಿಎಂಆರ್ ಶ್ರೀನಾಥ್ ಟೊಮ್ಯಾಟೊ ಮಂಡಿ ಮಾಲೀಕ, ಕೋಲಾರ