ಕಬ್ಬು ನುರಿಸುವ ಕೆಲಸದಲ್ಲಿ ತೊಂದರೆಯಾಗಿಲ್ಲ: ಎಡಿಸಿ ಡಾ.ಎಚ್.ಎಲ್.ನಾಗರಾಜು ಸ್ಪಷ್ಟನೆ

ADC H.L.Nagaraju
Published on
ಮಂಡ್ಯ: ಮೈಷುಗರ್ ಕಾರ್ಖಾನೆಯಲ್ಲಿ ಕಬ್ಬು ನುರಿಯುವ ಕೆಲಸ ನಡೆಯುತ್ತಿದ್ದು, ರೈತರು ಯಾವುದೇ ವದಂತಿಗಳಿಗೆ ಕಿವಿಕೊಡಬಾರದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದ್ದಾರೆ‌.
ವಿದ್ಯುತ್ ನಿಲುಗಡೆಯಿಂದ ಕೆಲವು ಗಂಟೆಗಳು‌ ಮಾತ್ರ ಕಬ್ಬು ನುರಿಸುವ ಕೆಲಸಕ್ಕೆ ತೊಂದರೆಯಾಗಿದ್ದು, ಅದನ್ನು ಹೊರತುಪಡಿಸಿದರೆ ಕಬ್ಬು ನುರಿಸುವ ಕೆಲಸಕ್ಕೆ ಯಾವುದೇ ರೀತಿಯ ತೊಂದರೆಯಾಗಿರುವುದಿಲ್ಲ.
ಕಾರ್ಖಾನೆಯ ಸಿಬ್ಬಂದಿ ಕಬ್ಬು ನುರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ‌. ಅಧಿಕಾರಿಗಳು ಕಬ್ಬು ಖರೀದಿ ಕೆಲಸ ನಿರ್ವಹಿಸುತ್ತಿದ್ದು, ರೈತರು ಚಿಂತೆ ಮಾಡದೇ ಮೈಷುಗರ್ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net