ಚಿಕ್ಕನಾಯಕನಹಳ್ಳಿಯಲ್ಲಿ ಪೋಸ್ಟ್ ಮಾರ್ಟಂಗೂ ಪಶು ವೈದ್ಯರಿಲ್ಲ!

tmk 1
Published on

ತುಮಕೂರು: ರೋಗಕ್ಕೆ ತುತ್ತಾದ, ಸಿಡಿಲುಬಡಿದು ಸಾವನ್ನಪ್ಪುವ ಕುರಿ, ಮೇಕೆ, ರಾಸುಗಳ ಮರಣೋತ್ತರ ಪರೀಕ್ಷೆಗೂ ಪಶು ವೈದ್ಯರಿಲ್ಲ, ಸತ್ತ ಕುರಿಮೇಕೆಗಳನ್ನು ಹೊತ್ತು ರೈತರು ‘ಪೋಸ್ಟ್ ಮಾರ್ಟಂಗಾಗಿ ಪಶುವೈದ್ಯರನ್ನು ಹುಡುಕುತ್ತ ಹತ್ತಾರು ಕಿ.ಮೀ., ದೂರದ ಹೋಗುವ ದುಸ್ಥಿತಿ... ಇದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸ್ವಕ್ಷೇತ್ರದಲ್ಲಿನ ಪರಿಸ್ಥಿತಿ !

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಪಶುಪಾಲನಾ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು, ಪಶುವೈದ್ಯಾಧಿಕಾರಿಗಳು, ಜಾನುವಾರು ಅಧಿಕಾರಿಗಳು, ಹಿರಿಯ ಪಶುಪರೀಕ್ಷಕರು, ಡಿ ದರ್ಜೆ ನೌಕರರು ಸೇರಿ ಒಟ್ಟ ಒಟ್ಟು 88 ಹುದ್ದೆಗಳಲ್ಲಿ ಕೇವಲ 34 ಹುದ್ದೆಗಳು ಭರ್ತಿ ಮಾಡಲಾಗಿದೆ. 54 ಹುದ್ದೆಗಳು ಖಾಲಿ ಇವೆ. 13 ಪಶುವೈದ್ಯಾಧಿಕಾರಿಗಳು ಇರಬೇಕಾದ ತಾಲೂಕಿನಲ್ಲಿ ಕೇವಲ 5 ಪಶುವೈದ್ಯರಿದ್ದಾರೆ. 8 ಹುದ್ದೆಗಳನ್ನೂ ಭರ್ತಿ ಖಾಲಿಯಿವೆ.

2 ಪಶು ಆಸ್ಪತ್ರೆ, 11 ಪಶುಚಿಕಿತ್ಸಾಲಯ: ಚಿಕ್ಕನಾಯಕನಹಳ್ಳಿ ತಾಲೂಕು ಕೇಂದ್ರ ಹಾಗೂ ಅತಿದೊಡ್ಡ ಹೋಬಳಿ ಕೇಂದ್ರವಾದ ಹುಳಿಯಾರಿನಲ್ಲಿ ಮಾತ್ರ ಪಶು ಆಸ್ಪತ್ರೆಗಳಿವೆ. ಇನ್ನೂ 11 ಪಶು ಚಿಕಿತ್ಸಾಲಯ ಹಾಗೂ 9 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳು ತಾಲೂಕಿನಲ್ಲಿವೆ. ತಾಲೂಕಿನ ಪಶುಪಾಲನಾ ಇಲಾಖೆಯಲ್ಲಿ ಒಟ್ಟು 88 ಮಂಜೂರು ಹುದ್ದೆಗಳಿದ್ದು 34 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಉಳಿದ 54 ಖಾಲಿ ಇವೆ.

ಪ್ರಭಾರ ಎಡಿ: ಪಶು ಆಸ್ಪತ್ರೆಯಲ್ಲಿ ಸಹಾಯಕ ನಿರ್ದೇಶಕರು, ಪಶುವೈದ್ಯರು, ಜಾನುವಾರು ಅಧಿಕಾರಿ, ಹಿರಿಯ ಪಶುಪರೀಕ್ಷಕರು, ಪಶುವೈದ್ಯಕೀಯ ಸಹಾಯಕರು, ಎಸ್‌ಡಿಎ, ವಾಹನ ಚಾಲಕರು, ಡಿ ದರ್ಜೆ ನೌಕರರ ಹುದ್ದೆಗಳಿರಲಿವೆ. ಸದ್ಯ ತಾಲೂಕು ಕೇಂದದ ಪಶು ಆಸ್ಪತ್ರೆಯಲ್ಲೇ ಪ್ರಭಾರ ಸಹಾಯಕ ನಿರ್ದೇಶಕರಿದ್ದು 2 ಪಶುವೈದ್ಯರ ಹುದ್ದೆಗಳು ಖಾಲಿ ಇವೆ. ಹುಳಿಯಾರ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಮಂಜುನಾಥ್ ಅವರೇ ಚಿಕ್ಕನಾಯಕನಹಳ್ಳಿ ಆಸ್ಪತ್ರೆ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ. ಚಿಕ್ಕನಾಯಕನಹಳ್ಳಿ ಪಶು ಆಸ್ಪತ್ರೆಯಲ್ಲಿ ಹಿರಿಯ ಪಶುಪರೀಕ್ಷಕರು, ಪಶುವೈದ್ಯಕೀಯ ಸಹಾಯಕರು ಸೇರಿ 12 ಹುದ್ದೆಗಳಲ್ಲಿ ಓರ್ವ ಜಾನುವಾರು ಅಧಿಕಾರಿ, ಓರ್ವ ಎಸ್‌ಡಿಎ ಬಿಟ್ಟರೆ ಉಳಿದ 10 ಹುದ್ದೆಗಳು ಖಾಲಿಯಿವೆ. ಹುಳಿಯಾರು ಪಶು ಆಸ್ಪತ್ರೆಯಲ್ಲಿ 5 ಹುದ್ದೆಗಳಲ್ಲಿ 2 ಹುದ್ದೆ ಭರ್ತಿಯಾಗಿದ್ದು 3 ಹುದ್ದೆಗಳು ಖಾಲಿಯಿವೆ. ಹಿರಿಯ ಪಶುಪರೀಕ್ಷಕರು, ಪಶುವೈದ್ಯಕೀಯ ಸಹಾಯಕರು ಸೇರಿ 12 ಹುದ್ದೆಗಳಲ್ಲಿ ಓರ್ವ ಜಾನುವಾರು ಅಧಿಕಾರಿ, ಓರ್ವ ಎಸ್‌ಡಿಎ ಬಿಟ್ಟರೆ ಉಳಿದ 10 ಹುದ್ದೆಗಳು ಖಾಲಿಇವೆ. ಹುಳಿಯಾರು ಪಶು ಆಸ್ಪತ್ರೆಯಲ್ಲಿ 5 ಹುದ್ದೆಗಳಲ್ಲಿ 2 ಹುದ್ದೆ ಭರ್ತಿಯಾಗಿದ್ದು 3 ಹುದ್ದೆಗಳು ಖಾಲಿಯಿವೆ.

ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ಗಮನಹರಿಸಿ ಪಶುಪಾಲನಾ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಕ್ರಮವಹಿಸಬೇಕಿದೆ.

ಜಾನುವಾರು ಸಂಖ್ಯೆ : ತಾಲೂಕಿನಲ್ಲಿ 2012ರ ಜಾನುವಾರು ಗಣತಿ ಪ್ರಕಾರ 1,35,133 ಕುರಿ, 29,318 ಮೇಕೆಗಳಿವೆ. ಇನ್ನೂ 58,680 ದನ, 13,326 ಎಮ್ಮೆಗಳು ಹಾಗೂ 537 ಹಂದಿಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net