ಗಣಿಗಾರಿಕೆ ವಿರುದ್ಧ ಪತ್ರದಲ್ಲಿ ಯಾವುದೇ ರಾಜಕೀಯವಿಲ್ಲ

H.K.PATIL
H.K.PATIL
Published on

ರಾಯಚೂರು ರಾಜ್ಯದಲ್ಲಿ ಆಕ್ರಮ ಗಣಿಗಾರಿಕೆ ಕುರಿತು ಬರೆದ ಪತ್ರದಲ್ಲಿ ಯಾವುದೇ ರಾಜಕೀಯವಿಲ್ಲ. ಜನರ ಹಿತಕ್ಕಾಗಿ ಪತ್ರ ಬರೆಯಲಾಗಿದೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ರಮ ಗಣಿಗಾರಿಕೆಯಿಂದ ರಾಜ್ಯಕ್ಕೆ ಸುಮಾರು 1.40 ಲಕ್ಷ ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟವಾಗಿದೆ. 2017-18ರಲ್ಲಿ ಅಂದು ನನ್ನ ಅಧ್ಯಕ್ಷತೆಯಲ್ಲಿಯೇ ಸಂಪುಟ ಉಪ ಸಮಿತಿ ಈ ಅಕ್ರಮಗಳನ್ನು ಬಹಿರಂಗ ಪಡಿಸಿತ್ತು.

ಆಗ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಕಾಂಗ್ರೆಸ್ ಪಕ್ಷವು 320 ಕಿ.ಮೀ. ದೂರದ ಪಾದಯಾತ್ರೆಯನ್ನು ಕೈಗೊಂಡು ಈ ವಿಷಯವನ್ನು ಜನರ ಮುಂದಿಟ್ಟಿತ್ತು. ಆಗಿನ ಕಾಂಗ್ರೆಸ್ ಸರ್ಕಾರ ಕೆಲವು ಪ್ರಕರಣಗಳನ್ನು ತನಿಖಾ ಸಂಸ್ಥೆಗಳಿಗೆ ವಹಿಸಿತ್ತು. ಒಟ್ಟು ಪ್ರಕರಣದಲ್ಲಿ ಕೇವಲ ಶೇ.0.2ರಷ್ಟು ಮಾತ್ರ ತೀರ್ಪು ಹೊರಬಿದ್ದಿದ್ದು, ಸಿಬಿಐಗೆ 9 ಪ್ರಕರಣಗಳ ತನಿಖೆಗೆ ನೀಡಲಾಗಿತ್ತು. ಆದರೆ ಅವರು 3 ಪ್ರಕರಣಗಳನ್ನು ಮಾತ್ರ ತೆಗೆದುಕೊಂಡು ಉಳಿದ 6 ಪ್ರಕರಣಗಳನ್ನು ನಾವು ಮಾಡುವುದಿಲ್ಲವೆಂದು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net