

ರಾಯಚೂರು ಬಿಜೆಪಿ ಮುಖಂಡ ಸನ್ನಿ ರೋನಾಲ್ಡ್ ಗಡಿಪಾರು ಮಾಡಲು ಸಹಾಯಕ ಆಯುಕ್ತರಿಗೆ ಇರುವ ಅಧಿಕಾರದಿಂದ ನಿರ್ಧಾರದಿಂದ ಕೈಗೊಂಡಿದ್ದಾರೆ ಹೊರತು ಸಚಿವ ಎನ್.ಎಸ್.ಬೋಸರಾಜು ಅಥವಾ ರವಿ ಬೋಸರಾಜುರ ಯಾವುದೇ ರಾಜಕೀಯ ಪ್ರಭಾವವಿಲ್ಲವೆಂದು ಆರ್‌ಡಿಎ ಸದಸ್ಯ ನರಸಿಂಹಲು ಮಾಡಗಿರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಸಚಿವ ಎನ್.ಎಸ್.ಬೋಸರಾಜು ಹಾಗೂ ರವಿ ಬೋಸರಾಜ ಕಾಳಜಿಯಿಂದ ಮಾದಿಗ ಸಮೂದಾಯ ಅನೇಕ ನಾಯಕರಿಗೆ ರಾಜಕೀಯ ಅಧಿಕಾರ ದೊರೆತಿದೆ. ಅವರು ಮಾದಿಗರನ್ನು ರಾಜಕೀಯವಾಗಿ ಮುಗಿಸುವ ಯಾವ ಕೆಲಸವೂ ಮಾಡಿಲ್ಲ.
ಸನ್ನಿ ರೋನಾಲ್ಡ್ ಗಡಿಪಾರು ಮಾಡಲು ಸಹಾಯಕ ಆಯುಕ್ತರಿಗೆ ಇರುವ ಅಧಿಕಾರದಿಂದ ನಿರ್ಧಾರದಿಂದ ಕೈಗೊಂಡಿದ್ದಾರೆ ಹೊರತು ರವಿ ಬೋಸರಾಜ ಇವರ ಒತ್ತಡದಿಂದ ಅಲ್ಲ. ರನ್ನಿ ರೋನಾಲ್ಡ್ ಇವರು ನಡುವಳಿಕೆ ಸಮಾಜದಲ್ಲಿ ಭಯ ಸೃಷ್ಟಿಸುವ ಮಾಡುವ ಹೇಳಿಕೆ, ಬೆದರಿಸುವ ಹೇಳಿಕೆಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿರುವ ಅವರು ಸಮಾಜದಲ್ಲಿ ಅಶಾಂತಿ ಉಂಟು ಮಾಡದಿರಲಿ ಎಂಬ ಕಾರಣದಿಂದ ಗಡಿಪಾರು ಮಾಡುವ ನಿರ್ಧಾರ ಸಹಾಯಕ ಆಯುಕ್ತರು ಕೈಗೊಂಡಿದ್ದಾರೆ ಹೊರತು ರಾಜಕೀಯ ಒತ್ತಡದಿಂದ ಕೈಗೊಂಡಿಲ್ಲ ಎಂದರು.
2017 ರಿಂದ ಅನೇಕ ಪ್ರಕರಣಗಳು ಸನ್ನಿ ರೋನಾಲ್ಡ್ ವಿರುದ್ಧ ದಾಖಲಾಗಿವೆ. ಈ ಹಿಂದೆ ಹುಟ್ಟು ಹಬ್ಬ ಆಚರಣೆ ಸಂದರ್ಭದಲ್ಲಿ ತಲ್ವಾರ್ ಹಿಡಿದು ಮೆರವಣಿಗೆ ಮಾಡಿರುವದು ಸಹ ಪೊಲೀಸ್ ಇಲಾಖೆ ಗಮನಿಸಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಆಂಜಿನೇಯ್ಯ ಕುರುಬದೊಡ್ಡಿ, ಎಸ್.ಬೂದೆಪ್ಪ, ಈರಣ್ಣ ಭಂಡಾರಿ, ವಸಂತಕುಮಾರ ಆರೋಲಿ, ಪ್ರತಿಭಾರೆಡ್ಡಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ ಇದ್ದರು.