'ದೈಹಿಕ, ಮಾನಸಿಕ ಹಸಿವು ನೀಗದೆ ಶಾಂತಿ ಇಲ್ಲ'

15
Published on

ಮೈಸೂರು: ಮಾನವನ ದೈಹಿಕ ಮತ್ತು ಮಾನಸಿಕ ಹಸಿವು ನೀಗದ ಹೊರತು ಈ ಜಗತ್ತಿಗೆ ಶಾಂತಿ ಇಲ್ಲ ಎಂದು ಮಹಾರಾಜ ಕಾಲೇಜು ಪ್ರಾಧ್ಯಾಪಕ ಡಾ.ಟಿ.ಕೆ. ಕೆಂಪೇಗೌಡ ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕ ಇತ್ತೀಚೆಗೆ ಆಯೋಜಿಸಿದ್ದ ವಚನ ಶ್ರಾವಣ ಮನೆ ಮನೆಗೆ ಶರಣ ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಸಿವು ನೀಗಿಸಲು ಅಷ್ಟೆ ಕ್ರೌರ್ಯ, ಅಡ್ಡದಾರಿಗಳನ್ನು ಹಿಡಿಯುವ ಸಾಧ್ಯತೆ ಇದೆ. ಹಾಗೆಯೇ ಮಾನಸಿಕವಾಗಿಯೂ ಸಹ ಅನೇಕ ಆಸೆ ಆಮಿಷಗಳು ವಿಷವಾಗಿ ಪರಿಣಮಿಸಿ ನಮ್ಮನ್ನ ನಾಶ ಮಾಡಬಲ್ಲವು ಎಂದು ಬೇಸರ ವ್ಯಕ್ತಪಡಿಸಿದರು.
ಅದಕ್ಕಾಗಿ ವಚನಕಾರ ಜೇಡರ ದಾಸಿಮಯ್ಯ ಇಂಥ ದೇಹದ ಮತ್ತು ಮನಸ್ಸಿನ ಹಸಿವಿನ ವಿಷಯ ನೀಗಿಸಲು ಸಾತ್ವಿಕ ಬದುಕು, ಸಾತ್ವಿಕ ಕಾಯಕ, ಸಾತ್ವಿಕ ದಯೆ, ಆತ್ವಿಕ ಆಹಾರಗಳಿಂದ ಸಾಧ್ಯ ಎಂದಿದ್ದಾರೆ ಎಂದರು.
ಹಿಂದುಸ್ತಾನಿ ಗಾಯಕಿ ಸುನಿತಾ ಹಿರೇಮಠ ಅವರು ವಚನ ಗಾಯನ ನಡೆಸಿಕೊಟ್ಟರು. ಪರಿಷತ್ತಿನ ಅಧ್ಯಕ್ಷ ಮ.ಗು.ಸದಾನಂದಯ್ಯ ಅಧ್ಯಕ್ಷತೆ ವಹಿಸಿದ್ದರು. ತಂದೆ ವೀರಭದ್ರ ಹಿರೇಮಠ್ ಹಾಗೂ ಧನುರ್ ಸಹಕಾರ ನೀಡಿದರು. ಪ್ರಾಯೋಜಕರಾದ ಮಹಾದೇವಪ್ಪ, ಬಾಬುಪ್ರಸಾದ್, ಜಿ.ಎಲ್. ತ್ರಿಪುರಾಂತಕ , ರಾಜರತ್ನ ನಾಗರಾಜ್, ತೇಜಸ್ವಿನಿ, ಉಮಾ, ಮಹೇಶ್, ಚನ್ನಬಸಪ್ಪ, ನಂದೀಶ್, ಲೋಕೇಶ್, ಗಿರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net