ಸಚಿವ ಸ್ಥಾನ ಸಿಗದೆ ಇರುವುದಕ್ಕೆ ನೋವಿಲ್ಲ

RAGHUMURTHI 3
Published on

ಚಿತ್ರದುರ್ಗ: ನಾನು ಮೂರು ಬಾರಿ ಗೆದ್ದಿದ್ದರೂ ಸಚಿವನಾಗಲಿಲ್ಲವೆಂಬ ನಿರಾಸೆ, ನೋವು ನನಗಿಲ್ಲ. ಆದರೆ, ಕ್ಷೇತ್ರದ ಜನರು ಆಶಿಸಿದ್ದರು, ನಿರೀಕ್ಷಿಸಿದ್ದರು. ಅವರಿಗೆ ನಿರಾಸೆ ಆಗಿರುವುದು ಹೌದು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.

ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾದೇಶಿಕತೆ, ಹಿರಿತನ ಹಾಗೂ ಸಮುದಾಯ ಪರಿಗಣಿಸಿ ಸಂಪುಟದಲ್ಲಿ ಹಲವರಿಗೆ ಸ್ಥಾನ ಸಿಕ್ಕಿದೆ. ಗೆದ್ದಿರುವ ನಮ್ಮ ಪಕ್ಷದ ಶಾಸಕರ ಪೈಕಿ ಅನೇಕರು ಗೆಲುವಿನಲ್ಲಿ ನನಗಿಂತ ಹಿರಿಯರಿದ್ದಾರೆ. ನಮ್ಮ ಸಮುದಾಯದ ಮೂವರು ಸಚಿವರಾಗಿದ್ದಾರೆ. ಸಂಪುಟ ವಿಸ್ತರಣೆ ವೇಳೆ ನಾನು ಮಂತ್ರಿ ಆಗಬಹುದು ಎಂದು ಹೇಳಿದರು.

ರಾಜಕಾರಣದಲ್ಲಿ ತಾಳ್ಮೆ ಮುಖ್ಯ. ಬಿಜೆಪಿ ಅವಧಿಯ ಹಲವು ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ. ಯಾವುದೇ ಪಕ್ಷದ ಅಧಿಕಾರದಲ್ಲಿ ಇರಲಿ, ಆ ವೇಳೆ ಮಂಜೂರಾದ ಎಲ್ಲ ಯೋಜನೆಗಳು ಸರ್ಕಾರದಿಂದ ಆಗಿರುತ್ತವೆ. ಈ ವಿಚಾರದಲ್ಲಿ ರಾಜಕಾರಣ ಸಲ್ಲದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net