ಸಮಾಧಾನ ಸಂತೋಷಗ್ಗಿಂತ ಬೇರೆ ಸಂಪತ್ತು ಇಲ್ಲ

There is no other wealth than peace and happiness.
Published on

ಹುನಗುಂದ:ಮನುಷ್ಯನ ಅತ್ಯಅಮೂಲ್ಯ ವಸ್ತು ಎಂದರೆ ಸಮಾಧಾನ, ಸಂತೋಷ. ಸಂಪತ್ತಿನಿಂದ ಬದುಕಿಗೆ ಬೆಲೆಯಿಲ್ಲ. ಮನದೊಳಗಿನ ಸಂತೋಷದಿಂದ ಬದುಕಿಗೆ ಬೆಲೆ ಬರುತ್ತದೆ ಎಂದು ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.ಶುಕ್ರವಾರ ಪಟ್ಟಣದ ವಿಜಯ ಮಹಾಂತೇಶ್ವರ ಮಠದ ಬಸವ ಕೇಂದ್ರದಲ್ಲಿನ ವಿಜಯ ಮಹಾಂತೇಶ್ವರ ನೂತನ ಶಿಲಾ ಮಂಟಪ ಉದ್ಘಾಟನೆ ಹಾಗೂ ಪ್ರವಚನ ಮಂಗಲ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶರಣರು,ಸಂತರ ಹೊಸ ವಿಚಾರಗಳಿಂದ ಮನಸ್ಸನ್ನು ಸ್ವಚ್ಛಗೊಳಿಸುವುದು ನಿಜವಾದ ಆಧ್ಯಾತ್ಮ. ನಿಸರ್ಗ, ದೈವಿಚ್ಚೆಯಂತೆ ಹೊಂದಿಕೊಂಡು ಬದುಕುವವರು ಸಂತರು. ತನ್ನಿಚ್ಚೆಯಂತೆ ಬದುಕುವರು ಸಂಸಾರಿಗಳು ಎಂದರು.ಇಳಕಲ್​ದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಜಾತಿ, ಮತ. ಪಂಥ ಬೇಧ ಮರೆತು ಎಲ್ಲರಲ್ಲೂ ಕರುಣೆ ಹರಸುವರರನ್ನು ಕೊಪ್ಪಳದ ಅಭಿನವ ಗವಿ ಸಿದ್ದೇಶ್ವರ ಶ್ರೀಗಳಲ್ಲಿ ಕಾಣಬಹುದು ಎಂದು ಹೇಳಿದರು.

ಪ್ರವಚನಕಾರ ಬೆಳವಿ ಚರಂತೇಶ್ವರ ಮಠದ ಶರಣಬಸವ ಸ್ವಾಮೀಜಿ ಮಾತನಾಡಿ, ವಿರಕ್ತ ಪರಂಪರೆ ಹುಟ್ಟಿನಿಂದ ಬರುವಂತದ್ದಲ್ಲ, ಸಾಧನೆಯಿಂದ ಬರುವಂತಹದು ಎಂದು ತೋರಿಸಿದವರು ವಿಜಯ ಮಹಾಂತ ಶಿವಯೋಗಿಗಳು ಎಂದರು.ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು.

ಗುಳೇದಗುಡ್ಡದ ಗುರುಸಿದ್ದೇಶ್ವರ ಸ್ವಾಮೀಜಿ, ಬಸವಕಲ್ಯಾಣದ ಸಿದ್ದರಾಮ ಶರಣರು, ಶಿರೂರು ಮಹಾಂತ ತೀರ್ಥದ ಬಸವಲಿಂಗ ಸ್ವಾಮೀಜಿ, ಸಂತೆಕಡೂರು ನವಲಿಂಗ ಶರಣರು, ಲಿಂಗಸೂರಿನ ಸಿದ್ದಲಿಂಗ ಸ್ವಾಮೀಜಿ, ಮನಗೂಳಿ ವಿರತಿಶಾನಂದ ಸ್ವಾಮೀಜಿ, ಹುಣಶ್ಯಾಳದ ಸಂಗನಬಸವ ಶ್ರೀಗಳು, ಮಹಾಂತೇಶ ಕಡಪಟ್ಟಿ, ಬಸವ ಕೇಂದ್ರದ ಅಧ್ಯ ಶಿವಪ್ಪ ನಾಗೂರ, ಮುರುಳಿಧರ ದೇಶಪಾಂಡೆ ಇತರರಿದ್ದರು.

ಚಿತ್ರರ್ಶಿಷಿಕೆ:

23.ಎಚ್​.ಎನ್​.ಡಿ.1.

ಹುನಗುಂದದ ಬಸವ ಕೇಂದ್ರದಲ್ಲಿನ ವಿಜಯ ಮಹಾಂತೇಶ್ವರ ನೂತನ ಶಿಲಾ ಮಂಟಪ ಉದ್ಘಾಟನೆ ಸಮಾರಂಭದಲ್ಲಿ ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಗುರುಮಹಾಂತ ಸ್ವಾಮಿಗಳು, ಬಸವಜಯ ಮೃತ್ಯುಂಜಯ ಸ್ವಾಮೀಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net