ಭಗವಂತನ ಅವತಾರಕ್ಕೆ ಕೀಳು ಭಾವನೆ ಬೇಡ

There is no need to feel inferior to the incarnation of God.
ಮುಧೋಳಕ್ಕೆ ಸೋಮವಾರ ಆಗಮಿಸಿದ್ದ ವಿಧುಶೇಖರ ಭಾರತಿ ಶ್ರೀಗಳನ್ನು ವೆಂಕಟೇಶ ದೇವಸ್ಥಾನದಿಂದ ಪೂರ್ಣಕುಂಭ, ಸಕಲ ವಾದ್ಯಗಳೊಂದಿಗೆ ಶ್ರೀ ದತ್ತಾತ್ರೇಯ ದೇವಸ್ಥಾನದವರೆಗೆ ಶೋಭಾಯಾತ್ರೆ ಮೂಲಕ ಸ್ವಾಗತಿಸಲಾಯಿತು.
Published on

ಮುಧೋಳ: ಪ್ರಪಂಚ ಎಷ್ಟೇ ಮುಂದುವರಿದಿದ್ದರೂ ಅಧ್ಯಾತ್ಮ, ನೆಮ್ಮದಿ ಹುಡುಕಿಕೊಂಡು ಅನಾದಿ ಕಾಲದಿಂದ ಇಂದಿನವರೆಗೆ ನಮ್ಮ ದೇಶಕ್ಕೆ ವಿದೇಶಿಗರು ಬರುತ್ತಿದ್ದಾರೆ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಮಠದ ವಿಧುಶೇಖರ ಭಾರತಿ ಶ್ರೀಗಳು ಹೇಳಿದರು.

ನಗರದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಂತ ಒಬ್ಬನೇ. ಅವನು ಹಲವು ರೂಪಗಳಲ್ಲಿ ಅವತರಿಸಿ ಶಿಷ್ಟರ ರಕ್ಷಣೆ, ದುಷ್ಟರ ಸಂಹಾರ ಮಾಡಿದ್ದಾನೆ. ಭಕ್ತರು ತಮ್ಮ ಅಭಿರುಚಿಗೆ ತಕ್ಕಂತೆ ಪೂಜಿಸಬೇಕೇ ವಿನಾ ಇನ್ನೊಂದು ಅವತಾರದ ಬಗ್ಗೆ ಕೀಳಾಗಿ ಮಾತನಾಡಬಾರದು ಎಂದರು.

ಶ್ರೀಗಳನ್ನು ವೆಂಕಟೇಶ ದೇವಸ್ಥಾನದಿಂದ ಪೂರ್ಣಕುಂಭ, ಸಕಲ ವಾದ್ಯಗಳೊಂದಿಗೆ ಶ್ರೀ ದತ್ತಾತ್ರೇಯ ದೇವಸ್ಥಾನದವರೆಗೆ ಶೋಭಾಯಾತ್ರೆ ಮೂಲಕ ಸ್ವಾಗತಿಸಲಾಯಿತು. ಶಂಕರ ಸೇವಾ ಸಮಿತಿ ಶಾರದಾ ಭಜನಾ ಮಂಡಳಿಯಿಂದ ಲಪುಷ್ಪ ಸಮರ್ಪಣೆ ನಡೆಯಿತು.

ವಲ್ಲಭಭಟ್ ಕವಟೇಕರ ಹಾಗೂ ವೆಂಕಟೇಶ ಕೊಲ್ಹಾರ ಅವರಿಂದ ವೇದಘೋಷ ಹಾಗೂ ಶಾರದಾ ಭಜನಾ ಮಂಡಳಿಯಿಂದ ಪ್ರಾರ್ಥನೆ ನೆರವೇರಿತು. ಆನಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಸೇವಾ ಸಮಿತಿ ಅಧ್ಯಕ್ಷ ಪ್ರವೀಣ ಬಾಜಿ ಭಿನ್ನವತ್ತಳೆ ಸಮರ್ಪಿಸಿದರು. ಗುರುನಾಥ ಜೋಷಿ ನಿರೂಪಿಸಿದರು. ವಂದನಾ ಕುಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net