

ಚಿಕ್ಕಮಗಳೂರು: ಪ್ರತಿಯೊಬ್ಬರೂ ಧರ್ಮಮಾರ್ಗದಲ್ಲೇ ನಡೆದರೆ ಪೊಲೀಸರ ಅಗತ್ಯವೇ ಇರುವುದಿಲ್ಲ. ಹಾಗೆ ಅನುಶಾಸನ ಎನ್ನುವುದನ್ನು ಎಲ್ಲರೂ ಸ್ವಯಂ ಪಾಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
ನಗರದ ತೇರಾಪಂಥ್ ಸಭಾ ಭವನದಲ್ಲಿ ಭಾನುವಾರ ಅನುವೃತ್ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಅನುವೃತ್ ಉದ್ಭೋಧನಾ ಸಪ್ತಾಹದಲ್ಲಿ ಸಂಪ್ರದಾಯ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾದಕ ವಸ್ತುಗಳ ಸೇವನೆಯಿಂದಾಗಿಯೇ ಅತೀ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತವೆ. ನಶೆಗೆ ಒಳಗಾಗದವರು ಮನುಷ್ಯತ್ವವನ್ನೇ ಮರೆತುಬಿಡುತ್ತಾರೆ. ನಶೆ ಮುಕ್ತವಾದರೆ ನಾವೂ ಅಪರಾಧಗಳಿಂದ ದೂರವಾದಂತೆ ಎಂದು ತಿಳಿಸಿದರು.
ಪ್ರತಿ ಮನುಷ್ಯ, ಪ್ರಾಣಿಗಳಲ್ಲಿ ಪೃಥ್ವಿ, ಅಗ್ನಿ, ಜಲ, ವಾಯು ಹಾಗೂ ಆಕಾಶಗಳೆಂಬ ೫ ತತ್ವಗಳಿವೆ. ಅವುಗಳ ಹೊರತು ಪ್ರಪಂಚ ಇಲ್ಲ. ಈ ತತ್ವಗಳಲ್ಲಿ ವ್ಯತ್ಯಾಸ ಉಂಟಾದರೆ ಎಲ್ಲರ ಆರೋಗ್ಯ ಕೆಡುತ್ತದೆ. ಈ ಹಿನ್ನೆಲೆಯಲ್ಲಿ ಐದೂ ತತ್ವಗಳು ಕಲುಷಿತವಾಗದಂತೆ ನೋಡಿಕೊಳ್ಳಬೇಕು ಎಂದರು.
ಆದರೆ ನಾವು ಭೂಮಿಯ ಒಳಗೆ ಎಷ್ಟೆಲ್ಲಾ ವಿಷವನ್ನು ಬೆರೆಸುತ್ತಿz್ದೆÃವೆ. ಇದರ ಪರಿಣಾಮವನ್ನೂ ಎದುರಿಸುತ್ತಿz್ದÉÃವೆ. ಪ್ರತಿ ಹಂತದಲ್ಲೂ ವಿಷವನ್ನು ಬೆರೆಸುತ್ತಿರುವ ಪರಿಣಾಮ ತಿನ್ನುವ ಹಣ್ಣು ಸಹ ವಿಷಕಾರಿಯಾಗುವಂತಾಗಿದೆ. ಜಲ ಉತ್ಪತ್ತಿ ಆಗುವಾಗ ಶುದ್ಧವಾದ ಸ್ಪಟಿಕದಂತಿರುತ್ತದೆ. ನಾವು ಅದನ್ನು ಕಲುಷಿತಗೊಳಿಸುತ್ತಿz್ದÉÃವೆ. ಇದರ ಕಾರಣ ರೋಗಗಳು ಉಲ್ಬಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಈ ಐದೂ ತತ್ವಗಳನ್ನು ನಾವು ಶುದ್ಧಿಯಾಗಿಟ್ಟುಕೊಳ್ಳುವ ಸಂಕಲ್ಪ ಮಾಡಬೇಕು ಎಂದರು.
ಅನಾವಶ್ಯಕವಾಗಿ ಮತ್ತೊಬ್ಬರಿಗೆ ಪೀಡಿಸದಿರುವುದೇ ಅಹಿಂಸೆ. ಮಾತೃ ರಕ್ಷಣೆಗೆ ಶಸ್ತçವನ್ನು ಎತ್ತುವುದು ಹಿಂಸೆಯಾಗುವುದಿಲ್ಲ. ಕಾರಣವಿಲ್ಲದೆ ಯಾರಿಗೂ ಹಿಂಸೆ ಮಾಡಬಾರದು. ಯಾರ ಮೇಲೂ ಶಸ್ತç ಪ್ರಯೋಗಿಸಬಾರದು. ಕಾರಣವಿಲ್ಲದೆ ಯಾರಿಗೂ ತೊಂದರೆ ಕೊಡಬಾರದು. ಆದರೆ ದೇಶದ ರಕ್ಷಣೆಗಾಗಿ ಶಸ್ತç ಎತ್ತದಿದ್ದರೆ ಅದು ಅಹಿಂಸಾ ತತ್ವವನ್ನು ಪಾಲಿಸಿದಂತಾಗುವುದಿಲ್ಲ ಎಂದರು.
ಶತೃ ಮಿತ್ರಭಾವದ ಅರಿವಿಲ್ಲದೆ ಎಲ್ಲರೊಂದಿಗೆ ಸಮಾನವಾಗಿ ವ್ಯವಹರಿಸುವುದು ನಾಗರೀಕ ಸಮಾಜಕ್ಕೆ ಒಳ್ಳೆಯದು. ಆದರೆ ದೇಶದ ವಿಚಾರ ಬಂದಾಗ ದೇಶದ ರಕ್ಷಣೆಗೆ ನಾವು ಶತೃ ಹೇಗೆ ವ್ಯವಹರಿಸುತ್ತಾನೋ ಹಾಗೇಯೇ ವ್ಯವಹರಿಸಬೇಕು ಎಂದು ನಮ್ಮ ಧರ್ಮಶಾಸ್ತçಗಳು ಹೇಳುತ್ತವೆ ಎಂದು ಹೇಳಿದರು.
ಆದಿ ಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟಾçರ್ ಸಿ.ಕೆ.ಸುಬ್ಬರಾಯ ಮಾತನಾಡಿ, ಏನಾದರೂ ಆಗು ಮೊದಲು ಮಾನವನಾಗು ಎನ್ನುದನ್ನು ಕೇಳಿz್ದÉÃವೆ. ನಾವು ಉತ್ತಮ ವೈದ್ಯರು, ಇಂಜಿನಿಯರುಗಳು, ವಕೀಲರು, ವಿಜ್ಞಾನಿಗಳು, ಉದ್ಯಮಿಗಳನ್ನು ತಯಾರು ಮಾಡುತ್ತಿz್ದÉÃವೆ. ಆದರೆ ಮಾನವೀಯ ಮೌಲ್ಯಗಳ ಕೊರತೆ ಕಾಣುತ್ತಿz್ದÉÃವೆ. ಬೇರೆಯವರನ್ನು ನಾವು ಗೌರವದಿಂದ, ಸೌಹಾರ್ಧದಿಂದ ಕಂಡರೆ ನಮ್ಮ ವ್ಯಕ್ತಿತ್ವದ ಮೌಲ್ಯ ಇನ್ನಷ್ಟು ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಎಲ್ಲವೂ ಬೇಕಾಗುತ್ತದೆ. ಆಧುನಿಕತೆಯ ನಾಗಾಲೋಟದಲ್ಲಿ ಓಡುತ್ತಿz್ದÉÃವೆ. ವಿಶ್ವದಲ್ಲಿ ಭಾರತ ದೇಶ ಅನೇಕ ಕ್ಷೇತ್ರದಲ್ಲಿ ಹೆಸರುಗಳಿಸಿದೆ. ನಮ್ಮದೇ ಆದ ಉಪಗ್ರಹಳನ್ನು ಉಡಾವಣೆ ಮಾಡಿರುವ ಐದು ದೇಶಗಳಲ್ಲಿ ಭಾರತವೂ ಒಂದು ಎನ್ನುವುದು ಬಹಳ ವಿಶೇಷ. ಮಾಹಿತಿ ತಂತ್ರಜ್ಞಾನದ ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ವಿಶ್ವಕ್ಕೆ ನಾವೇ ಮೊದಲಿಗರು. ಇದೆಲ್ಲವೂ ಭಾರತೀಯರ ನಿಜವಾದ ಪ್ರತಿಭೆ. ಇದೆಲ್ಲದರ ನಡುವೆ ನಾವು ಮನುಷ್ಯರಾಗಿ ಬದುಕಬೇಕು ಎನ್ನುವುದನ್ನು ಮರೆತರೆ ನಮ್ಮ ಬದುಕಿಗೆ ತೊಂದರೆ ಇದೆ ಎಂದರು.
ಮುನಿಶ್ರೀ ಮೋಹಜಿತ್ ಕುಮಾರ್ ಜಿ ಉಪದೇಶಾಮೃತ ನೀಡಿದರು. ತೇರಾಪಂಥ್ ಸಭಾದ ಅಧ್ಯಕ್ಷ ಮಹೇಂದರ್ ಡೋಸಿ,ಅನುವ್ರತ ಸಂಸ್ಥೆಯ ಮಂಜುಬಾಯಿ ಬನ್ಸಾಲಿ, ನಗರಸಭೆ ಸದಸ್ಯ ವಿಫುಲ್‌ಕುಮಾರ್ ಜೈನ್, ಬ್ರಹ್ಮಕುಮಾರಿ ಭಾಗ್ಯಕ್ಕ, ಗೌತಮ್ ಆಚಾ, ಲಾಲ್‌ಚಂದ್ ಬನ್ಸಾಲಿ, ಕಿಶೋರ್ ಆಚಾ ಸಜ್ಜನ್‌ರಾಜ್, ಪದಮ್ ನಹರ್, ಮಾಣಿಕ್‌ಚಂದ್ ಗಾದಿಯಾ, ಸರೋಜಾಬಾಯಿ ಸಿಯಾಲ್, ಚಂದ್ರ ಗಾದಿಯಾ, ಗುಣವತಿ ನಹಾರ್, ಸುರೇಶ್ ಆಚಾ, ಶಾಂತಿಲಾಲ್‌ಗಾದಿಯಾ, ಗೌತಮ್ ನಹರ್, ಅಶೋಕ್ ಡೋಸಿ, ಸುರೇಂದ್ರ, ಲಾಲ್‌ಚಂದ್ ಬರ್ಲೋಟ, ಭರತ್ ಬರ್ಲೋಟ, ಮದನ್ ಚಂದ್‌ಗಾದಿಯಾ ಮತ್ತಿತರರಿದ್ದರು.