ಅರಣ್ಯ ಜಾಗಕ್ಕೆ ದಾಖಲೆ ಸೃಷ್ಟಿ ಆರೋಪ

Amblur
ಅಂಬ್ಲೂರು ರಾಮಕೃಷ್ಣ.
Published on

ಶೃಂಗೇರಿ: ತಾಲೂಕಿನಲ್ಲಿ ಅರಣ್ಯ ಜಾಗ ಇರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಇದರಿಂದ ಅರಣ್ಯ ಇಲಾಖೆಗೆ 1996ರ ಮಧ್ಯಂತರ ಆದೇಶದ ಪಾಲನೆಗೆ ತೊಡಕಾಗಿದ್ದು, ಈಗ ಸದ್ದಿಲ್ಲದೆ ದಾಖಲೆ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಲೆನಾಡು ನಾಗರಿಕರ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ದೂರಿದ್ದಾರೆ.
ನ್ಯಾಯಾಲಯದ ಆದೇಶದಲ್ಲಿ ಅರಣ್ಯ ಎಂಬ ಕುರಿತು ದಾಖಲೆ ಇರುವ ಪ್ರದೇಶಗಳಲ್ಲಿ ಮಾತ್ರ ಅರಣ್ಯ ಇಲಾಖೆ ಕಾಯ್ದೆ ತರಲು ಪ್ರಸ್ತಾಪಿಸಲಾಗಿದೆ. ಆದರೆ ತಾಲೂಕಿನಲ್ಲಿ ಈಗ ಕೆಲವು ಪಹಣಿಯಲ್ಲಿ ಪ್ರಸ್ತಾಪಿತ ಅರಣ್ಯ ಎಂದು ನಮೂದಿಸಲಾಗುತ್ತಿದೆ. ಮರಗಳು ಇಲ್ಲದ ಜಾಗವನ್ನು ಕೂಡಾ ಸೇರಿಸಿಕೊಳ್ಳಲಾಗುತ್ತಿದೆ. ಪರಿಬಾವಿತ ಅರಣ್ಯ ಎಂದು ಯಾವುದೇ ಜಾಗಗಳನ್ನು ಗುರುತಿಸಲಾಗಿಲ್ಲ. ಪ್ರಸ್ತುತ ಸದ್ದಲ್ಲದೆ ಇದಕ್ಕೂ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಇದರಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಮಂಜೂರಾತಿ ಪಡೆದುಕೊಳ್ಳಲು ತೊಡಕಾಗಬಹುದು. ಆದ್ದರಿಂದ ಕಂದಾಯ ಇಲಾಖೆ ಈ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಮತ್ತು ಶೃಂಗೇರಿ ಕ್ಷೇತ್ರದ ರೈತರು ಮತ್ತು ಸಾರ್ವಜನಿಕರು ಈ ವಿಷಯ ಕುರಿತು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net