ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಆರೋಪ

FotoJet
Published on

ಬಿಜೆಪಿ, ಜೆಡಿಎಸ್​ ನಾಯಕರ ವಿರುದ್ಧ ಇಂಧನ ಸಚಿವ ಕೆ.ಜೆ.ಜಾರ್ಜ್​ ವಾಗ್ದಾಳಿ
ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿ ತಲುಪಿಸಿ

ಕೋಲಾರ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್​ ಮುಖಂಡರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ, ಇದಕ್ಕೆ ತಕ್ಕ ಪಾಠ ಕಲಿಸಲು ಪಕ್ಷದ ಮುಖಂಡರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಸರ್ಕಾರ ಯೋಜನೆಗಳ ಪ್ರಯೋಜನ ತಲುಪಿಸಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್​ ಹೇಳಿದರು.
ನಗರದ ಕಾಂಗ್ರೆಸ್​ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್​ ಮುಖಂಡರ ಸಭೆಯಲ್ಲಿ ಮಾತನಾಡಿ, ಜನಾದೇಶದ ಮೇರೆಗೆ ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಧಿಕಾರ ಕಳೆದುಕೊಂಡವರು ಮುಡಾ ವಿಚಾರವನ್ನು ಮುಂದಿಟ್ಟುಕೊಂಡು ತೇಜೋವಧೆ ಮಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ಬೆಂಬಲ ಪಡೆದು ಕೇಂದ್ರ ಮಂತ್ರಿಯಾಗಿರುವವರು ಸಿದ್ದರಾಮಯ್ಯ ಸರ್ಕಾರ ಉರುಳಿಸುತ್ತೇನೆ ಎಂದಿದ್ದಾರೆ. ಇದರಿಂದಲೇ ರಾಜ್ಯಪಾಲರಿಗೆ ಸಿಎಂ ವಿರುದ್ಧ ದೂರು ನೀಡಿದ್ದಾರೆ. ಆದರೆ ಯಾವ ಆಧಾರದ ಮೇರೆಗೆ ಸಿಎಂಗೆ ಶೋಕಾಸ್​ ನೋಟಿಸ್​ ನೀಡಿದ್ದಾರೆ ಎಂಬುದನ್ನು ಹೇಳಿಲ್ಲ, ಸದ್ಯದಲ್ಲೇ ಕೋರ್ಟ್​ನಿಂದ ಕ್ಲೀನ್​ ಚಿಟ್​ ದೊರೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.


75 ವರ್ಷಗಳಿಂದ ಕಾಂಗ್ರೆಸ್​ ಏನು ಮಾಡಿದೆ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಕಾಂಗ್ರೆಸ್​ ಏನು ಮಾಡಿದೆ ಎಂಬುದು ಜನಕ್ಕೆ ಗೊತ್ತಿದೆ ಎಂದ ಅವರು, 15 ವರ್ಷಲ್ಲಿ ಬಿಜೆಪಿ ಕೆಲಸ ಮಾಡಿದ್ದರೆ ಚುನಾವಣೆಯಲ್ಲಿ ಏಕೆ ಬಲ ಕಳೆದುಕೊಂಡಿತು ಎಂದು ಪ್ರಶ್ನಿಸಿದರು.
ಕೇಂದ್ರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ರಾಹುಲ್​ ಗಾಂಧಿ ಅವರು ಕಾಶಿಯಿಂದ ಕನ್ಯಾಕುಮಾರಿ ವರೆಗೆ ಪಾದಯಾತ್ರೆ ಮಾಡಿದ್ದು ಇತಿಹಾಸ. ಕೇಂದ್ರದಿಂದ ಜನರು ತೊಂದರೆ ಅನುಭವಿಸಿದ್ದನ್ನು ಗಮನಿಸಿದ್ದ ಸಿದ್ದರಾಮಯ್ಯ ಸರ್ಕಾರ, ಜನರಿಗೆ ಅನುಕೂಲವಾಗುವ ರೀತಿ 5 ಗ್ಯಾರಂಟಿ ಜಾರಿಗೆ ಮಾಡಿದ್ದು, ಎಲ್ಲರ ಬದುಕು ಸುಧಾರಣೆಯಾಗುತ್ತಿದೆ ಎಂದು ತಿಳಿಸಿದರು.


ಶಾಸಕ ಕೊತ್ತೂರು ಜಿ.ಮಂಜುನಾಥ್​ ಮಾತನಾಡಿ, ಬೆಸ್ಕಾಂ ಸಂಬಂಧ ಹಲವು ಸಮಸ್ಯೆಗಳು ಇವೆ, ಕೆಲ ಕಡೆ ಹೊಸ ವಿದ್ಯುತ್​ ಸರಬರಾಜು ಕೇಂದ್ರಗಳು ಸ್ಥಾಪನೆಯಾಗಬೇಕಾಗಿದೆ. ಬಾಕಿ ಕೆಲಸಗಳನ್ನು ಶೀಘ್ರ ಮುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಕೋರಿದರು.
ಸಭೆಯಲ್ಲಿ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ, ಕಿಸಾನ್​ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್​, ಮಹಿಳಾಧ್ಯೆ ರತ್ನಮ್ಮ, ಕೆಪಿಸಿಸಿ ಒಬಿಸಿ ಉಪಾಧ್ಯಕ್ಷ ಮಂಜುನಾಥ್​, ನಗರ ಬ್ಲಾಕ್​ ಅಧ್ಯಕ್ಷ ಪ್ರಸಾದ್​ ಬಾಬು, ಮುಖಂಡ ಕೆ.ವಿ.ಗೌತಮ್​, ಗ್ಯಾರೆಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್​, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯೆ ಸಂಗೀತಾ ಇತರರಿದ್ದರು.

ಕುಸುಮ ಯೋಜನೆಯಿಂದ ಅನುಕೂಲ
ಕುಸುಮ ಯೋಜನೆ ಸಮರ್ಪಕವಾಗಿ ಜಾರಿಗೆ ತಂದು ಜಿಲ್ಲೆಯ ರೈತರಿಗೆ ಅನುಕೂಲವಾಗುವ ರೀತಿ ವಿದ್ಯುತ್​ ಪೂರೈಕೆ ಮಾಡಬೇಕು. 1969ರಿಂದ ರಾಜಕೀಯದಲ್ಲಿ ಜಾರ್ಜ್​ ಅವರು ಯುವ ಕಾಂಗ್ರೆಸ್​, ಕೇಂದ್ರ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ. ಎಲ್ಲರಿಗೂ ಕಚೇರಿಗೆ ಭೇಟಿ ನೀಡಬೇಕು ಎಂಬ ಭಾವನೆ ಇರುವುದಿಲ್ಲ. ಅದು ಮೂಲ ಕಾಂಗ್ರೆಸ್​ನವರಲ್ಲಿ ಮಾತ್ರ ಬರುತ್ತದೆ. ರಾಜ್ಯವು ಅಭಿವೃದ್ಧಿ ಆಗಬೇಕಾದರೆ ಇಂಧನ ಸಹಕಾರ ಅಗತ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಜೀರ್​ ಅಹ್ಮದ್​ ತಿಳಿಸಿದರು.


ತಾಳ್ಮೆ, ನಿಷ್ಟೆ ಇದ್ದರೆ ಅವಕಾಶ
ತಾಳ್ಮೆ, ನಿಷ್ಟೆ ಇದ್ದರೆ ಮಾತ್ರ ಅವಕಾಶಗಳು ಹುಡುಕಿಕೊಂಡು ಬರುತ್ತದೆ, ಇದರಿಂದಲ್ಲೇ ಮಂಡಲ್​ನಿಂದ ಕೋಮುಲ್​ ಅಧ್ಯಕ್ಷ, ಶಾಸಕನಾಗಿದ್ದೇನೆ. ಆರಂಭದಲ್ಲೇ ಮೊದಲ ಸಾಲು ಸೇರಬೇಕು ಎಂದರೆ ಸುಲಭವಲ್ಲ, ಇದನ್ನು ಅರಿತು ಕಾರ್ಯತರ್ಕರು, ಮುಖಂಡರು ಪಕ್ಷ ಸಂಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಸಲಹೆ ನೀಡಿದರು.


ಸೋಲಾರ್​ ಟಕದಿಂದ ಹೊರೆ ಕಡಿಮೆ
ಕೋಮುಲ್​ನಿಂದ ತಿಂಗಳಿಗೆ 2 ಕೋಟಿ ರೂ. ವಿದ್ಯುತ್​ ಬಿಲ್​ ಪಾವತಿ ಮಾಡಲಾಗುತ್ತಿತ್ತು, ಅದರ ಹೊರೆ ರೈತರ ಮೇಲೆ ಬೀಳುತ್ತಿತ್ತು, ಅದನ್ನು ತಪ್ಪಿಸಲು ಹೊಳಲಿ ಸಮೀಪ ಸೋಲಾರ್​ ಟಕ ಸ್ಥಾಪನೆ ಮಾಡಲಾಗುತ್ತಿದ್ದು, ಅದರ ಕೀರ್ತಿ ಜಾರ್ಜ್​ ಅವರಿಗೆ ಸಲ್ಲುತ್ತದೆ ಎಂದು ಎಂಎಲ್ಸಿ ಎಂ.ಎಲ್​.ಅನಿಲ್​ ಕುಮಾರ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net