ಕೆಡುಕು ಮನಸಿಗೆ ಸುಖವಿರಲ್ಲ

22TELASANG2
Published on

ತೆಲಸಂಗ: ಯಾವುದೇ ಭೇದವಿಲ್ಲದೆ ಮಾನವೀಯ ಮೌಲ್ಯ ಎತ್ತಿ ಹಿಡಿದು ಬದುಕಲು ಕಲಿಸಿದ್ದು ಇಂಚಗೇರಿ ಸಂಪ್ರದಾಯ ಎಂದು ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.

ಸಮೀಪದ ಕನ್ನಾಳ ಗ್ರಾಮದ ಗಿರೀಶ, ಗಿರಿಮಲ್ಲೇಶ್ವರ ಆಶ್ರಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಸಾಧನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ದೇವರ ನಾಮಸ್ಮರಣೆ, ಭಜನೆ, ಕೀರ್ತನೆ ಮತ್ತು ಪ್ರವಚನ ಮೂಲಕ ಮನಸ್ಸು ಪಾವನಗೊಳಿಸಿಕೊಳ್ಳಬೇಕು. ಶ್ರಾವಣ ಭಗವಂತನ ಆರಾಧನೆ ಮತ್ತು ಆಧ್ಯಾತ್ಮಿಕ ಸಾಧನೆಗೆ ಮೀಸಲಾದ ಪವಿತ್ರ ಮಾಸ. ಹಣಗಳಿಕೆ, ದುರಹಂಕಾರ, ಕೆಡುಕು ಮತ್ತು ಹೊಟ್ಟೆಕಿಚ್ಚಿಗೆ ಮನಸ್ಸನ್ನು ಕೊಟ್ಟರೆ ಶ್ರೀಮಂತರಾದರೂ ಸುಖದಿಂದ ಬದುಕಲು ಸಾಧ್ಯವಿಲ್ಲ. ಅದಕ್ಕೆ ಸಂಸ್ಕಾರ ಅವಶ್ಯ ಎಂದರು.

ಕನ್ನಾಳದ ಬಸವಲಿಂಗ ಸ್ವಾಮೀಜಿ, ಶಂಕರೆಪ್ಪ ಮಹಾರಾಜರು, ವಿವೇಕಾನಂದ ಮಹಾರಾಜರು ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net