

ತೇರದಾಳ: ವೀರಶೈವ ಲಿಂಗಾಯತ ಧರ್ಮದಲ್ಲಿ ಗುರು ಮತ್ತು ವಿರಕ್ತ ಎಂಬ ಎರಡು ಪರಂಪರೆಗಳಿದ್ದು, ಅವುಗಳು ಕಾಲಾಂತರದಲ್ಲಿ ವಿಭಿನ್ನವಾಗಿರುವುದು ನೋವಿನ ಸಂಗತಿ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ದೇವಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ಮಂಡಲ ಪೂಜೆ ಮಂಗಲೋತ್ಸವ ಕಾರ್ಯಕ್ರಮದ ಧರ್ಮಸಭೆಯಲ್ಲಿ ಮಾತನಾಡಿದ ಅವರು, . ಇದು ವೀರಶೈವ ಸಮಾಜ ಇಂದು ಅಲ್ಪಸಂಖ್ಯಾತರಾಗಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ ವೀರಶೈವ ಲಿಂಗಾಯತರು ಒಂದಾಗದಿದ್ದರೆ ಭವಿಷ್ಯವಿಲ್ಲ ಎಂದರು.
ನಮ್ಮೆಲ್ಲ ಬೇಧಭಾವವನ್ನು ಮರೆತು ವಿರಶೈವ ಲಿಂಗಾಯತರು ನಾವೇಲ್ಲ ಒಂದು, ವಿಶ್ವವೇ ಧರ್ಮ ಎಂಬ ವಿಶಾಲ ಮನೋಭಾವನೆ ಬೆಳೆಸಿಕೊಳ್ಳಬೇಕು. ಹನ್ನೆರಡನೇ ಶತಮಾನದ ಕ್ರಾಂತಿಯಲ್ಲಿ ಪಂಚಪೀಠಗಳು ಬೇರೆ ಬೇರೆ ಆಯಾಮಗಳ ಮೂಲಕ ಭಾಗಿಯಾಗಿವೆ. ಅದಕ್ಕೆ ಸಾಕ್ಷಿಯಾಗಿ ಶ್ರೀಶೈಲ ಪೀಠದ ಅಂದಿನ ಜಗದ್ಗುರು ಮಲ್ಲಿಕಾರ್ಜೂನ ಮಹಾಸ್ವಾಮೀಜಿಯವರ ಪ್ರಸಂಗಗಳು ಪುರಾವೆಗಳನ್ನು ಒದಗಿಸುತ್ತವೆ ಎಂದರು.
ಜಮಖಂಡಿಯ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾದ್ಯ ಶಿವಾಚಾರ್ಯರು ಮಾತನಾಡಿ, ಅಲ್ಲಮರ ಜಾಗೃತ ದೇವಸ್ಥಾನ ಇದಾಗಿದ್ದು, ನೂತನ ಕಟ್ಟಡ ಕೇದಾರನಾಥ ದೇವಾಲಯದ ಪ್ರತಿಬಿಂಬದಂತೆ ಕಂಗೊಳಿಸುತ್ತಿದೆ ಎಂದರು. ಉದ್ಘಾಟಕರಾದ ಶಾಸಕ ಸಿದ್ದು ಸವದಿ, ಶಾಸಕ ಜಗದೀಶ ಗುಡಗುಂಟಿ ಮಾತನಾಡಿದರು.
ಜಮಖಂಡಿ ಗೌರಿಶಂಕರ ಶಿವಾಚಾರ್ಯ, ಬನಹಟ್ಟಿಯ ಶರಣಬಸವ ಶ್ರೀ, ಕುಂದರಗಿಯ ಸಂಗಮೇಶ್ವರ ಶ್ರೀ, ಜಂಬಗಿ ಅಡವಿಸಿದ್ದೇಶ್ವರ ಶ್ರೀ, ಚಿಪ್ಪಲಕಟ್ಟಿಯ ಸಿದ್ದಲಿಂಗ ಶ್ರೀ, ಹಲಗಲಿ-ಬೀಳಗಿಯ ಗುರುಪಾದ ಶ್ರೀ, ಮುತ್ತೂರಿನ ಗಿರೀಶದೇವರು, ಗಿರಿಸಾಗರದ ರುದ್ರಮುನಿ ಶ್ರೀ, ಮಹಿಷ್ಯಾಳ ಪೂಜ್ಯರು, ಕೊಣ್ಣೂರು ಹೊರಗಿನಮಠದ ಡಾ.ವಿಶ್ವಪ್ರಭು ಶ್ರೀ, ಸ್ಥಳೀಯ ಗಂಗಾಧರದೇವರು ಮತ್ತಿತರರಿದ್ದರು.