

ಬೆಂಗಳೂರು: ಪ್ರಥಮ ಪಿಯು ಮೌಲ್ಯಮಾಪನವನ್ನೇ ಪರೀೆ ಎಂದು ತಪ್ಪಾಗಿ ಭಾವಿಸುವುದು ಬೇಡ. ಯಾವುದೇ ವಿದ್ಯಾರ್ಥಿ ಕಾಲೇಜಿಗೆ ಬಂದು ಅಸೈನ್ಮೆಂಟ್ ಸಲ್ಲಿಸಬೇಕಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
"ಪ್ರಥಮ ಪಿಯುಗೆ ಆನ್ಲೈನ್ ಪರೀೆ' ಶೀರ್ಷಿಕೆಯಡಿ ಶುಕ್ರವಾರ ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟಗೊಂಡ ಬಳಿಕ ಅವರು ಈ ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ಮೊದಲ ಪಿಯು ತರಗತಿಗಳ ವಾರ್ಷಿಕ ಪರೀೆ ರದ್ದುಪಡಿಸಿ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲಾಗಿದೆ. ವಿದ್ಯಾರ್ಥಿಗಳ ಕಲಿಕೆಯ ನಿರಂತರತೆ ಕಾಪಾಡಲು ಮೌಲ್ಯಮಾಪನ ಪ್ರಕ್ರಿಯೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.