

ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ 110 ಕೆ.ವಿ ಉಪಕೇಂದ್ರ ವ್ಯಾಪ್ತಿಯ ಗ್ರಾಮಗಳಿಗೆ ಫೆ.9ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಮುತ್ನಾಳ, ವಿರಕನಕೊಪ್ಪ, ಅರಳಿಕಟ್ಟಿ, ಬಸಾಪೂರ, ಹಿರೇಬಾಗೇವಾಡಿ, ಭೆಂಡಿಗೇರಿ, ಗಜಪತಿ, ಅಂಕಲಗಿ, ಹುಲಿಕವಿ, ಕೆ.ಕೆ. ಕೊಪ್ಪ, ಕಲಾರಕೊಪ್ಪ, ಸಿದ್ಧನಹಳ್ಳಿ, ಬಡೇಕೊಳ್ಳಮಠ, ಹಾಲಗಿಮರ್ಡಿ, ನಾಗೇನಟ್ಟಿ, ನಾಗೇರಹಾಳ, ಬಡಸ, ನಂದಿಹಳ್ಳಿ, ಕುಕಡೊಳ್ಳಿ ಗ್ರಾಮಗಳಿಗೆ ಹಾಗೂ ಖಾನಾಪುರ ತಾಲೂಕಿನ ಹಿರೇಹಟ್ಟಿಹೊಳಿ, ಗಾಡಿಕೊಪ್ಪ ಹಾಗೂ ಪಾರಿಶ್ವಾಡ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆೆಯಲ್ಲಿ ತಿಳಿಸಿದ್ದಾರೆ.