ವಡ್ಡರಹಳ್ಳಿಯಲ್ಲಿ ಕಡಲೆಕಾಯಿ ಪರಿಷೆ ಸಂಭ್ರಮ

ಬೆಂಗಳೂರು ಉತ್ತರ ತಾಲೂಕಿನ ವಡ್ಡರಹಳ್ಳಿಯ ದಕ್ಷಿಣ ಶಿರಡಿ ಶ್ರೀಸಾಯಿ ಮಂದಿರ ಮತ್ತು ದತ್ತ ಪೀಠದಲ್ಲಿ ಹಮ್ಮಿಕೊಂಡಿದ್ದ ಕಡಲೆಕಾಯಿ ಪರಿಷೆ ಹಾಗೂ ಆಹಾರ ಮೇಳಕ್ಕೆ ದತ್ತಪೀಠದ ಧರ್ಮದರ್ಶಿ ರಘುನಂದನ್ ಚಾಲನೆ ನೀಡಿದರು. ಬಮುಲ್ ನಿರ್ದೇಶಕ ಕೇಶವಮೂರ್ತಿ ಸೇರಿದಂತೆ ಇನ್ನಿತರರು ಇದ್ದರು.
ಬೆಂಗಳೂರು ಉತ್ತರ ತಾಲೂಕಿನ ವಡ್ಡರಹಳ್ಳಿಯ ದಕ್ಷಿಣ ಶಿರಡಿ ಶ್ರೀಸಾಯಿ ಮಂದಿರ ಮತ್ತು ದತ್ತ ಪೀಠದಲ್ಲಿ ಹಮ್ಮಿಕೊಂಡಿದ್ದ ಕಡಲೆಕಾಯಿ ಪರಿಷೆ ಹಾಗೂ ಆಹಾರ ಮೇಳಕ್ಕೆ ದತ್ತಪೀಠದ ಧರ್ಮದರ್ಶಿ ರಘುನಂದನ್ ಚಾಲನೆ ನೀಡಿದರು. ಬಮುಲ್ ನಿರ್ದೇಶಕ ಕೇಶವಮೂರ್ತಿ ಸೇರಿದಂತೆ ಇನ್ನಿತರರು ಇದ್ದರು.
Published on

ಗಮನ ಸೆಳೆದ ಆಹಾರ-ಮೇಳಧರ್ಮದರ್ಶಿ ರಘುನಂದನ್ ಚಾಲನೆ-ಮೇಳೈಸಿದ ಸಾಂಸ್ಕೃತಿಕ ಕಾರ್ಯಕ್ರಮ

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ವಡ್ಡರಹಳ್ಳಿಯ ದಕ್ಷಿಣ ಶಿರಡಿ ಶ್ರೀಸಾಯಿ ಮಂದಿರ ಹಾಗೂ ದತ್ತ ಪೀಠದಲ್ಲಿ 3ನೇ ವರ್ಷದ ಕಡಲೆಕಾಯಿ ಪರಿಷೆ ಹಾಗೂ ಆಹಾರ ಮೇಳ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಗಣರಾಜ್ಯೋತ್ಸವ ಪ್ರಯುಕ್ತ ದಕ್ಷಿಣ ಶಿರಡಿ ಶ್ರೀಸಾಯಿ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಕಡಲೆಕಾಯಿ ಪರಿಷೆ ಹಾಗೂ ಆಹಾರ ಮೇಳಕ್ಕೆ ದತ್ತಪೀಠದ ಧರ್ಮದರ್ಶಿ ರಘುನಂದನ್ ಚಾಲನೆ ನೀಡಿದರು.

ಇನ್ನು ಪರಿಷೆ ನಿಮಿತ್ತ ಶ್ರೀಸಾಯಿ ಬಾಬಾಗೆ ಅಭಿಷೇಕ ಹಾಗೂ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 7ರಿಂದ ರಾತ್ರಿ 8ಗಂಟೆವರೆಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಲಾಗಿತ್ತು. ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ದೇವಾಲಯದ ಧರ್ಮದರ್ಶಿ ರಘುನಂದನ್ ಮಾತನಾಡಿ, ಹಿಂದು ಸಂಸ್ಕೃತಿಯಲ್ಲಿ ಹಬ್ಬದ ಆಚರಣೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿಯೊಂದು ಹಬ್ಬಕ್ಕೂ ಒಂದೊಂದು ವಿಶೇಷತೆ ಇದ್ದು, ಅದರ ಇತಿಹಾಸದ ಹಿನ್ನಲೆ ತಿಳಿದುಕೊಳ್ಳಬಹುದು ಎಂದರು.

ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಸೇರಿ ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ, ದೇವರ ದರ್ಶನ ಪಡೆದುಕೊಂಡಿದ್ದು, ಗ್ರಾಮೀಣ ಸೊಗಡನ್ನು ನಗರ ಪ್ರದೇಶದ ಜನರಿಗೆ ಅರಿವು ಮೂಡಿಸಲು ವಿಶೇಷ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಬಮುಲ್ ನಿರ್ದೇಶಕ ಕೇಶವಮೂರ್ತಿ, ತಾ.ಪಂ ಮಾಜಿ ಸದಸ್ಯ ಶಾಂತರಾಜು ಸೇರಿ ಹಲವರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪರಿಷೆಗೆ ಕಲಾತಂಡಗಳ ಮೆರುಗುನಗಾರಿ, ಗೊಂಬೆಕುಣಿತ, ಜಾನಪದ ಕಲಾತಂಡಗಳು ಕಡಲೆಕಾಯಿ ಪರಿಷೆಯ ಮೆರುಗು ಹೆಚ್ಚಿಸಿದವು. ದೇವಾಲಯದ ರಸ್ತೆಯುದ್ದಕ್ಕೂ ಮಕ್ಕಳ ಆಟಿಕೆ ಅಂಗಡಿಗಳ ಜತೆಗೆ ಕಡಲೆಕಾಯಿ, ಕಡಲೆಪುರಿ ವ್ಯಾಪಾರ ಜೋರಾಗಿತ್ತು.ನೀರಿಳಿಸಿದ ಆಹಾರ ಮೇಳಇಪ್ಪತ್ತಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಬಗೆಯ ಆಹಾರ ತಯಾರಿಸಿ, ಮಾರಾಟ ಮಾಡಲಾಯಿತು. ಜತೆಗೆ ಉತ್ತರ ಕರ್ನಾಟಕ ಭಾಗದ ಜೋಳದ ರೊಟ್ಟಿ, ಮೆಣಸಿಕಾಯಿ ರುಚಿ ಸವಿಯಲು ಸಾರ್ವಜನಿಕರು ಮುಗ್ಗಿಬಿದ್ದಿದ್ದರು. ದೇವಾಲಯದ ಆಡಳಿತದಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ದೇವಾಲಯ ಸಮಿತಿಯಿಂದ ಹಲವೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಮಾದನಾಯಕನಹಳ್ಳಿ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net