

ಕೋಲಾರ: ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತವಿಲ್ಲ. ವಾಲೂರು ತಾಲೂಕಿನಿಂದ ಡಿಸಿಸಿ ಬ್ಯಾಂಕ್‌ಗೆ ಮೂವರು ಅಭ್ಯರ್ಥಿಗಳು ಸ್ಪರ್ಧೆ ವಾಡಲಿದ್ದಾರೆ. ಮೂವರು ಗೆಲವು ಸಾಧಿಸಲಿದ್ದಾರೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಸೋಮವಾರ ಡಿ.ಸಿ.ಸಿ.ಬ್ಯಾಂಕ್‌ಗೆ ಇತರೆ ಸಂ-ಸಂಸ್ಥೆಗಳಿಂದ ಶ್ರೀನಿವಾಸ್ ಮತ್ತು ಹಾಲು ಡೇರಿಗಳಿಂದ ಗೋವರ್ಧನಹಳ್ಳಿ ಸಹಕಾರ ಸಂಸ್ಥೆಗಳಿಂದ ರಮೇಶ್ ಮತ್ತು ಮುನಿಸ್ವಾಮಿ ನಾಮಪತ್ರಗಳನ್ನು ಸಲ್ಲಿಕೆ ವಾಡಿಸಿದ ನಂತರ ಸುದ್ದಿಗಾರರೊಂದಿಗೆ ವಾತನಾಡಿ, ಸಹಕಾರ ಸಂಸ್ಥೆಗಳಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಇಬ್ಬರಲ್ಲಿ ಒಬ್ಬರನ್ನು ವಾಪಸ್ಸು ತೆಗೆಸಿ ಚುನಾವಣಾ ಕಣದಲ್ಲಿ ಒಬ್ಬರು ವಾತ್ರ ಮುಂದುವರೆಯಲಿದ್ದಾರೆ. 14 ಸಹಕಾರ ಸಂಸ್ಥೆಗಳು ವಾತ್ರ ಚುನಾವಣೆಯಲ್ಲಿ ಮತದಾನ ವಾಡಲು ಅರ್ಹತೆ ಹೊಂದಿರುವುದರಿಂದ 12 ಸಹಕಾರ ಸಂಸ್ಥೆಗಳು ಕಾಂಗ್ರೆಸ್ ಒಡೆತನದಲ್ಲಿರುವುದರಿಂದ ಅವಿರೋಧ ಆಯ್ಕೆ ಸಾಧ್ಯತೆ ಇದೆ ಎಂದರು.
ಇತರೆ ಸಂ-ಸಂಸ್ಥೆಗಳಿಂದ ಶ್ರೀನಿವಾಸನ್ ಎಂಬುವವರನ್ನು ಎರಡೂ ಜಿಲ್ಲೆಗಳ ಪರ ಚುನಾವಣಾ ಕಣಕ್ಕೆ ಇಳಿಸಲಾಗಿದೆ. ಎರಡೂ ಜಿಲ್ಲೆಗಳ ಶಾಸಕರ ಮತ್ತು ಮುಖಂಡರ ಅನುಮತಿ ಪಡೆದು ಏಕೈಕ ಅಭ್ಯರ್ಥಿಯನ್ನು ೋಷಣೆ ವಾಡಲಾಗಿದೆ ಎಂದು ತಿಳಿಸಿದರು.
ಗೋವಿಂದಗೌಡ ಯಾವ ಪಕ್ಷವೋ ಗೊತ್ತಿಲ್ಲ: ಇತರೆ ಸಂಸ್ಥೆಗಳಿಂದ ಗೋವಿಂದಗೌಡ ನಾಮಪತ್ರ ಸಲ್ಲಿಸಿ, ಅವರು ಕಾಂಗ್ರೆಸ್‌ನಲ್ಲಿಯೇ ಇದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕರು, ಗೋವಿಂದಗೌಡ ಯಾವ ಪಕ್ಷವೋ ಗೊತ್ತಿಲ್ಲ. ಶಾಸಕಿ ರೂಪಕಲಾ ವಾತ್ರ ನಮ್ಮ ಪಕ್ಷ. ಅವರು ನಮ್ಮ ಪಕ್ಷದ ಪರ ನಾಮಪತ್ರ ಸಲ್ಲಿಸಿದ್ದಾರೆ. ಸ್ಥಳೀಯ ಹಾಲು ಒಕ್ಕೂಟದಿಂದ ಗೋವರ್ಧನರೆಡ್ಡಿಯನ್ನು ಅಭ್ಯರ್ಥಿಯಾಗಿ ಆಯ್ಕೆ ವಾಡಲಾಗಿದೆ. ಇದನ್ನು ಜಿಲ್ಲೆಯ ಪಕ್ಷದ ಎಲ್ಲ ಶಾಸಕರ ಅಭಿಪ್ರಾಯ ಪಡೆದು ಅಭ್ಯರ್ಥಿಯನ್ನು ಆಯ್ಕೆ ವಾಡಲಾಗಿದೆ ಎಂದು ಶಾಸಕ ನಂಜೇಗೌಡ ತಿಳಿಸಿದರು.