ಸರ್ಕಾರಿ ಶಾಲೆಯಲ್ಲಿಲ್ಲ ಭೇದ ಭಾವ: ಸಂಸದ ಬ್ರಿಜೇಶ್​ ಚೌಟ ಅನಿಸಿಕೆ

Sul_government school
Published on

ಸುಳ್ಯ: ಸರ್ಕಾರಿ ಶಾಲೆಯಲ್ಲಿ ಯಾವುದೇ ಭೇದ ಭಾವ ಇಲ್ಲ. ಎಲ್ಲರಿಗೂ ಸಮಾನ ಅವಕಾಶ ಇದೆ. ಜತೆಯಾಗಿ ಕಲಿಯಲು ಅವಕಾಶ ಇದೆ ಎಂದು ಸಂಸದ ಬ್ರಿಜೇಶ್​ ಚೌಟ ಹೇಳಿದರು. ಬೆಳ್ಳಾರೆ ಕರ್ನಾಟಕ ಪಬ್ಲಿಕ್​ ಸ್ಕೂಲ್​ನ ವಸಂತ ಸಂಭ್ರಮ ಸಮಾರೋಪದಲ್ಲಿ ಇತ್ತೀಚಿಗೆ ಮಾತನಾಡಿದರು.

ಆಳ್ವಾಸ್​ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಆರೋಗ್ಯ ಮತ್ತು ವಿದ್ಯೆ ಇದ್ದರೆ ಜನರು ನಾಡಿನಲ್ಲಿ ಪ್ರಬುದ್ಧರಾಗಲು ಸಾಧ್ಯ. ಕನ್ನಡ ಮಾಧ್ಯಮವನ್ನು ಬಲಾಢ್ಯವಾಗಿ ಕಟ್ಟಬೇಕು. ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಇಟ್ಟುಕೊಳ್ಳಬಾರದು ಎಂದರು.

ವಿಧಾನಪರಿಷತ್​ಸದಸ್ಯ ಪ್ರತಾಪಸಿಂಹ ನಾಯಕ್​, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕ ಕುಶಲ ಕೆ., ಮಾಜಿ ಸಚಿವ ಎಸ್​.ಅಂಗಾರ, ವಸಂತ ಸಂಭ್ರಮ ಸಮಿತಿ ಸಂಚಾಲಕ ಎಸ್​.ಎನ್​.ಮನ್ಮಥ, ಅಧ್ಯಕ್ಷೆ ರಾಜೀವಿ ಆರ್​.ರೈ, ಪ್ರಧಾನ ಕಾರ್ಯದರ್ಶಿ ಪ್ರದಿಪ್​ ಕುಮಾರ್​ ರೈ ಪನ್ನೆ, ವಿಶ್ರಾಂತ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್​ ಚೂಂತಾರು, ಗ್ರಾಮ ಪಂಚಾಯಿತಿ ಸದಸ್ಯರಾದ ಅನಿಲ್​ ರೈ ಪುಡ್ಕಜೆ, ಗೌರಿ, ದಿನೇಶ್ಚಂದ್ರ ಬಿ.ಹೆಗ್ಡೆ, ಶಿಕ್ಷಣ ಸಂಯೋಜಕಿ ಸಂಧ್ಯಾ, ಕಾಲೇಜಿನ ಪ್ರಾಂಶುಪಾಲ ಜನಾರ್ದನ ಎನ್​., ಉಪಪ್ರಾಂಶುಪಾಲೆ ಉಮಾ ಕುಮಾರಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಮಾಯಿಲಪ್ಪ ಜಿ, ಎಸ್​.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು. ಎಸ್​.ಡಿ.ಎಂ.ಸಿ. ಉಪಾಧ್ಯಕ್ಷ ಶ್ರೀನಾಥ ರೈ ಸ್ವಾಗತಿಸಿದರು. ಶಿಕ್ಷಕಿ ಗಾಯತ್ರಿ, ಲಿಂಗಪ್ಪ ಬೆಳ್ಳಾರೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net