ಮೋದಿ ಗ್ಯಾರಂಟಿಗಳಲ್ಲಿ ಸ್ಪಷ್ಟತೆಯೇ ಇಲ್ಲ

Cheluvaraiswamy
ಚಲುವರಾಯಸ್ವಾಮಿ
Published on

ಭದ್ರಾವತಿ: ಚುನಾವಣೆಯಲ್ಲಿ ಮತಕ್ಕಾಗಿ ಹಿಂದುತ್ವವನ್ನು ಬಿಜೆಪಿ ಬಳಸಿಕೊಳ್ಳುತ್ತಿದ್ದು, ದೇಶದಲ್ಲಿ ಎಲ್ಲರೂ ಹಿಂದುತ್ವವಾದಿಗಳೆ. ಇಲ್ಲಿ ಯಾವ ಸಮಾಜವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಬಿಜೆಪಿಯ ಮೋದಿ ಗ್ಯಾರಂಟಿಗಳಲ್ಲಿ ಸ್ಪಷ್ಟತೆಯೇ ಇಲ್ಲ. ಕಪ್ಪುಹಣ ವಾಪಾಸ್ ತರುವುದಾಗಿ ಮೋದಿ ಹೇಳಿದ್ದರು. ಆದರೆ ಈವರೆಗೂ ಸಾಧ್ಯವಾಗಿಲ್ಲ. ಮೋದಿ ಸರ್ಕಾರದ ಬಗ್ಗೆ ಜನರಿಗೆ ವಿಶ್ವಾಸ ಇಲ್ಲದಂತಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಬರಗಾಲ ಇದ್ದು, ಸಂಕಷ್ಟದ ಸಮಯದಲ್ಲಿ ಕೇಂದ್ರದಿಂದ ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ. ಮೂರು ಬಾರಿ ದೆಹಲಿಗೆ ಹೋಗಿ ಬಂದರೂ ಪ್ರಯೋಜನವಾಗಿಲ್ಲ. ಸುಪ್ರೀಂಕೋಟ್‌ಗೆ ಹೋಗಿದ್ದರಿಂದ ಅನುದಾನ ಬಿಡುಗಡೆ ಮಾಡಿದ್ದಾರೆ. ರಾಜ್ಯದ ಪಾಲಿನ ಹಣ ಇನ್ನೂ ಬಂದಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಗೂ ಮುನ್ನ ನಡೆದ ಸಭೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡ ದೊಣಬಘಟ್ಟದ ಮೊಹಮ್ಮದ್ ಖಾಸಿಂ ನೇತೃತ್ವದಲ್ಲಿ ಅನೇಕರು ಕಾಂಗ್ರೆಸ್ ಸೇರ್ಪಡೆಯಾದರು.
ಶಾಸಕ ಬಿ.ಕೆ.ಸಂಗಮೇಶ್ವರ್, ವಿರಾಜಪೇಟೆ ಶಾಸಕ ಪೊನ್ನಪ್ಪ, ಮಂಡ್ಯ ಶಾಸಕ ರವಿ ಗಾಣಿಗ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮನಾಭ, ಮಣಿಶೇಖರ್, ಎಸ್.ಕುಮಾರ್, ಎಚ್.ಎಲ್.ಷಡಾಕ್ಷರಿ, ಚನ್ನಪ್ಪ, ಬಲ್ಕೀಶ್‌ಬಾನು, ಪೀರ್ ಷರೀಫ್, ಬಿ.ಎಸ್.ಗಣೇಶ್, ಬಿ.ಕೆ.ಮೋಹನ್, ಸಿ.ಜಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net