ಜಾತ್ರೆಗಳಿಗೆ ಜಾತಿ ಬೇಧಗಳಿಲ್ಲ

28 rbk-bagin
ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಸಮೀಪದಲ್ಲಿ ವೆಂಕಟೇಶ್ವರ ಏತನೀರಾವರಿ ಪಂಪಹೌಸ್ ಬಳಿ ಶಿವಲಿಂಗ ಶಿವಾಚಾರ್ಯರು, ಹಣಮಂತ ಮಗದುಮ್ ಬಾಗಿನ ಅರ್ಪಿಸಿದರು. ದಾನಪ್ಪ ಅಸಂಗಿ, ಮಲ್ಲಪ್ಪ ಮಗದುಮ್, ಈರಪ್ಪ ವಾಲಿ, ಮುತ್ತಪ್ಪ ಆಂಗಡಿ, ಗಿರೀಶ ಪಟ್ಟಣಶೆಟ್ಟಿ ಇತರರಿದ್ದರು.
Published on

ರಬಕವಿ/ಬನಹಟ್ಟಿ: ಜಾತ್ರೆ ಹಾಗೂ ಉತ್ಸವಗಳಿಗೆ ಜಾತಿ ಬೇಧಗಳಿಲ್ಲ. ಎಲ್ಲರೂ ಒಂದಾಗಿ ಭಾಗವಹಿಸಿದರೆ ಸೌಹಾರ್ದ ಹಾಗೂ ಬಾಂಧವ್ಯ ಬಲಗೊಳ್ಳುತ್ತದೆ ಎಂದು ಜಮಖಂಡಿಯ ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು ಸ್ವಾಮಿಗಳು ಹೇಳಿದರು.

ತಾಲೂಕಿನ ನಾವಲಗಿ ಗ್ರಾಮದ ನಾವಲಗಿ-ಕಲಹಳ್ಳಿ ಸೀಮೆಯಲ್ಲಿರುವ ಕರೆವ್ವ ದೇವಿಯ ಜಾತ್ರಾ ಮಹೋತ್ಸವದ ಸಮಾರಂಭ ಪ್ರಯುಕ್ತ ಬುಧವಾರ ವೆಂಕಟೇಶ್ವರ ಏತ ನಿರಾವರಿ ಜಾಗದಲ್ಲಿನ ನದಿ ನೀರಿನ ಬಾಗಿನ ಅರ್ಪಿಸಿ ಅವರು ಮಾತನಾಡಿದರು.

ಈ ಭಾಗದ ರೈತರು ಸೇರಿ ಪ್ರತಿ ವರ್ಷ ದೇವಿಯ ಜಾತ್ರೆ ಆಚರಿಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ ಎಂದರು.

ತೇರದಾಳದ ಗಂಗಾಧರ ಶ್ರೀಗಳು ಮಾತನಾಡಿ, ಈ ಭಾಗದ ರೈತರಿಗೆ ವೆಂಕಟೇಶ್ವರ ಏತ ನೀರಾವರಿಯಿಂದ ಬಹಳಷ್ಟು ಅನುಕೂಲವಾಗಿದೆ. ನೀರು ಅಮೃತಕ್ಕೆ ಸಮಾನ. ಆದ್ದರಿಂದ ನೀರನ್ನು ಅನಾವಶ್ಯಕವಾಗಿ ಪೋಲು ಮಾಡಬಾರದು ಎಂದು ತಿಳಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಹಣಮಂತ ಮಗದುಮ್, ದಾನಪ್ಪ ಅಸಂಗಿ, ಮಲ್ಲಪ್ಪ ಮಗದುಮ್, ಈರಪ್ಪ ವಾಲಿ, ಮುತ್ತಪ್ಪ ಆಂಗಡಿ, ಗಿರೀಶ ಪಟ್ಟಣಶೆಟ್ಟಿ, ಶಿವಪ್ಪ ವಾಲಿ, ಬಸವರಾಜ ಗಣಿ, ಗಿರಮಲ್ಲ ಮಗದುಮ್, ಈರಪ್ಪ ಮಗದುಮ್, ದುಂಡಪ್ಪ ಕಾಂತಿ, ಚನ್ನಬಸು ಕಂಚು, ಹಣಮಂತ ಕಂಚು, ಬುಜಬಲಿ ಶಿರಹಟ್ಟಿ, ಧನಪಾಲ್ ಶಿರಹಟ್ಟಿ, ಶಿವಪ್ಪ ಮಗದುಮ್, ಅಕ್ಷಯ ಮೇತ್ರಿ, ಶಿವಪ್ಪ ಮೇತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net