ವಿಧಾನ ಪರಿಷತ್‌ ಸದಸ್ಯರಿಗೆ ಯಾವ ಕಾಳಜಿಯೂ ಇಲ್ಲ: ಸಭಾಪತಿ ಹೊರಟ್ಟಿ ಬೇಸರ

horatti
Published on

ಬೆಂಗಳೂರು: ಮೇಲ್ಮನೆ, ಚಿಂತಕರ ಚಾವಡಿ ಎಂದು ಕರೆಯಲ್ಪಡುತ್ತಿದ್ದ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಯಾವ ವಿಷಯದ ಕುರಿತೂ ಕಾಳಜಿ ಇಲ್ಲದವರು ಸದಸ್ಯರಾಗುತ್ತಿದ್ದಾರೆ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಏರ್ಪಡಿಸಿದ್ದ ಸರಿಗನ್ನಡ ಅಭಿಯಾನದಲ್ಲಿ ಅವರು ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ಸೋತವರು, ವಿಧಾನಸಭೆ ಚುನಾವಣೆಯಲ್ಲಿ ಸೋತವರು, ರಾಜಕಾರಣಿಗಳ ಹಿಂಬಾಲಕರು, ಹಣವಂತರು, ದುಡ್ಡುಕೊಟ್ಟು ಬಂದವರೇ ತುಂಬಿಕೊಂಡಿದ್ದಾರೆ ಎಂದರು.

ಸದನದಲ್ಲಿ ಮೊಬೈಲ್ ಬಳಸಬಾರದು ಎಂದು ಲಾಕರ್ ಮಾಡಿಸಿದರೂ ಕೆಲವರು ಮೊಬೈಲ್ ತಂದರು. ಬಾವಿಗಿಳಿದು ಘೋಷಣೆ ಕೂಗಬಾರದು ಎಂದರೂ ಕೇಳುವುದಿಲ್ಲ. ಸಭಾಪತಿ ಹೇಳಿದಂತೆ ಕೇಳಬೇಕು ಎಂದರೆ, ಏನು ಮಾಡುತ್ತೀರ ಎಂದು ಪ್ರಶ್ನಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net