ಕರೊನಾ ವೈರಸ್‌ನಿಂದ ಆತಂಕವಿಲ್ಲ

13vpt2 korona jagrauthi
Published on

ವಿರಾಜಪೇಟೆ: ಕರೊನಾ ವೈರಸ್ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಪ್ರತಿಯೊಬ್ಬರೂ ಈ ಬಗ್ಗೆ ಎಚ್ಚರಿಕೆ ಇರುವುದು ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎ.ಬಿ.ವನೀತಾ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಾಲಕರ ಮತ್ತು ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ವೈರಸ್ ಮೊದಲ ಬಾರಿಗೆ ಚೀನಾದ ವುಹಾನ್‌ನಲ್ಲಿ ಪತ್ತೆಯಾಗಿದ್ದು, ಇದೀಗ ಕೇರಳಕ್ಕೂ ವ್ಯಾಪಿಸಿದೆ. ಈ ವೈರಸ್ ಪ್ರಾಣಿ ಹಾಗೂ ಮನುಷ್ಯರಲ್ಲಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮುಖ್ಯವಾಗಿ ಶ್ವಾಸಕೋಶ ಮತ್ತು ಉಸಿರಾಟಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದರು.

ಸೋಂಕಿತ ವ್ಯಕ್ತಿಯು ಸೀನಿದಾಗ, ಕೆಮ್ಮಿದಾಗ, ನಿಕಟ ಸಂಪರ್ಕದಲ್ಲಿರುವ ಹಾಗೂ ಆತ ಬಳಸಿದ ವಸ್ತುಗಳನ್ನು ಬಳಸಿದಾಗ ರೋಗ ಹರಡುತ್ತದೆ. ಹೀಗಾಗಿ ಸೋಂಕು ಪೀಡಿತರಿಂದ ದೂರವಿರಬೇಕು. ಅಲ್ಲದೆ ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಉಪಯೋಗಿಸಬೇಕು ಎಂದ ಅವರು, ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಫಾಸ್ಟ್ ಪುಡ್‌ಗಳ ಬಗ್ಗೆ ಎಚ್ಚರ ವಹಿಸಬೇಕು. ಅಲ್ಲದೆ ಆಗಾಗ ಸಾಬೂನಿನಿಂದ ಕೈ ತೊಳೆದುಕೊಳ್ಳುವ ಮೂಲಕ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಟಿ.ಕೆ.ಬೋಪಯ್ಯ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕುರಿತು ಹೆಚ್ಚು ಗಮನ ಹರಿಸಬೇಕು ಎಂದರು.

ಉಪನ್ಯಾಸಕ ಎಂ.ಎನ್.ವನೀತ್ ಕುಮಾರ್, ಗುರುಪ್ರಸಾದ್, ಪ್ರಾಧ್ಯಾಪಕರಾದ ವೇಣುಗೋಪಾಲ್, ಮಂಜುನಾಥ್, ರುದ್ರ, ಡಾ.ಡಿ.ಕೆ.ಉಷಾ, ನಾಗರಾಜ್ ಸತೀಶ್, ಪೊನ್ನಪ್ಪ, ಮತ್ತು ದಿವ್ಯಾಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net