ಏಮ್ಸ್ ಹೋರಾಟಕ್ಕಿಲ್ಲ ಪ್ರತಿ-Àಲ! * ಏಮ್ಸ್ ನೀಡುವ ಪ್ರಸ್ತಾವ ಕೇಂದ್ರದ ಮುಂದಿಲ್ಲದ ಹೇಳಿಕೆ ಸಾರ್ವಜನಿಕರಲ್ಲಿ ಗೊಂದಲ * ಸಂಸದೆ ಪ್ರಶ್ನೆಗೆ ಆರೋಗ್ಯ ಸಚಿವರ ಅಚ್ಚರಿಯ ಉತ್ತರ

basavaraj kalas
basavaraja kalasa
Published on

ರಾಯಚೂರು ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ರಾಯಚೂರು ಜಿ¯್ಲೆಯಲ್ಲಿ ಅಖಿಲ ಭಾರತ ವೈದ್ಯಕೀಯ ವಿe್ಞÁನಗಳ ಸಂಸ್ಥೆ ಏಮ್ಸï ಸ್ಥಾಪಿಸುವಂತೆ ಒತ್ತಾಯಿಸಿ ಕಳೆದ ೧೦೬೦ ದಿನಗಳಿಂದ ಏಮ್ಸï ಹೋರಾಟ ಸಮಿತಿಯಿಂದ ಅನಿರ್ದಿಷ್ಟ ಧರಣಿ ನಡೆಯುತ್ತಿದ್ದು, ಆದರೆ ಕೇಂದ್ರ ಆರೋಗ್ಯ ಸಚಿವರು ಮಾತ್ರ ನಮ್ಮದೆರು ರಾಯಚೂರಿಗೆ ಏಮ್ಸ್ ನೀಡಬೇಕು ಎನ್ನುವ ಯಾವುದೇ ಪ್ರಸ್ತಾವಗಳಿಲ್ಲ ವೆಂದು ಹೇಳಿಕೆ ನೀಡಿರುವುದರಿಂದ ಜಿಲ್ಲೆಯಲ್ಲಿನ ಹೋರಾಟಗಾರರಲ್ಲಿ ಆಕ್ರೋಶ ಮನೆ ಮಾಡಿದೆ.

ಜಿಲ್ಲೆಯಲ್ಲಿ ಈ ಹಿಂದೆ ಐಐಟಿ ಸ್ಥಾಪನೆಗೆ ದೊಡ್ಡ ಮಟ್ಟದ ಹೋರಾಟಗಳು ನಡೆಸಿದರು ಅಂದಿನ ಆಡಳಿತ ಮಾಡುವ ಸರ್ಕಾರದ ನಿರ್ಲಕ್ಷ ಮಾಡಿದ್ದು, ನಂತರ ಮತದಾರರನ್ನು ಸಮಾಧಾನ ಪಡಿಸಲು ಐಐಐಟಿಯನ್ನು ನೀಡಲಾಯಿತು.ಆದರೆ ಏಮ್ಸ್ ವಿಚಾರದಲ್ಲಿ ಕೇಂದ್ರ ಆರೋಗ್ಯ ಸಚಿವರು ಯಾವುದೇ ಪ್ರಸ್ತಾವಗಳು ಬಂದಿಲ್ಲ ಎನ್ನುವ ಮಾತಿನಿಂದ ಏಮ್ಸï ಹೋರಾಟದ ಕಿತ್ತು ಗಗನಕ್ಕೆ ಏರಿದೆ.

ದಾವಣಗೆರೆ ಸಂಸದರ ಚುಕ್ಕಿ ಪ್ರಶ್ನೆ

ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅಽವೇಶನದಲ್ಲಿ ಕೇಳಿದ ಚುಕ್ಕಿರಹಿತ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಆರೋಗ್ಯ ಸಚಿವ ಪ್ರತಾಪ ರಾವ್ ಜÁಧವ್, ಕೇಂದ್ರದ ಮುಂದೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ಯಾವುದೇ ಪ್ರಸ್ತಾಪಗಳಿಲ್ಲ ಎಂದು ಉತ್ತರಿಸಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರ ದ್ವಂದ್ವ ನಡೆ ಪ್ರದರ್ಶಿಸಿದ್ದು,

ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಏಮ್ಸ್ ವಿಚಾರದಲ್ಲಿ ಕೇಂದ್ರ ಸರ್ಕಾರ ಹಿಂದೆ ಅನೇಕ ಬಾರಿ ಪ್ರತಿಕ್ರಿಯೆ ನೀಡಿದೆ. ಬಿಜೆಪಿ ರಾಷ್ಟಿçÃಯ ಅಧ್ಯಕ್ಷ ರಾಜ್ಯ ಸರ್ಕಾರಕ್ಕೆ ಬರೆದ ಉತ್ತರದಲ್ಲಿ ಏಮ್ಸ್ ಮಾದರಿಯ ಆರೋಗ್ಯ ಸೇವೆಗಳನ್ನು ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಅಲ್ಲದೇ, ಹೋರಾಟಗಾರರು ಕೂಡ ದೆಹಲಿಯಲ್ಲಿಯೂ ಹೋರಾಟ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು. ಹಿಂದಿನ ಆರೋಗ್ಯ ಸಚಿವ ಮನಸುಖ ಮಾಂಡವಿಯಾರಿಗೂ ಈ ವಿಚಾರ ಗಮನಕ್ಕೆ ತಂದಾಗ ಪೂರಕವಾಗಿ ಸ್ಪಂದಿಸಿದ್ದರು. ಆದರೆ, ಈಗ ಕೇಂದ್ರ ಸರ್ಕಾರ ಈ ರೀತಿಯ ನಿಲುವು ವ್ಯಕ್ತಪಡಿಸಿರುವುದು ವಿಪರ್ಯಾಸವಾಗಿದೆ.

ರಾಜ್ಯದಿಂದ ಕೇವಲ ಪತ್ರ ವ್ಯವಹಾರ

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ರಾಯಚೂರು ಜಿಲ್ಲೆಗೆ ಏಮ್ಸ್ ತರಲಾಗುವುದು ಎಂದು ಪ್ರಚಾರ ಮಾಡಿದ್ದರು, ನಂತರ ಕಾಂಗ್ರೆಸ್ ಪಕ್ಷ ಅಽಕಾರಕ್ಕೆ ಬಂದ ನಂತರ ಮೂರು ಬಾರಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರದ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದರು, ಆದರೆ, ರಾಜ್ಯ ಸರ್ಕಾರ ಬರೀ ಪತ್ರ ವ್ಯವಹಾರ ಮಾಡಿದ್ದು, ಸಚಿವರ ನಿಯೋಗ ತೆರಳಿ ಕೇಂದ್ರ ಆರೋಗ್ಯ ಸಚಿವರಿಗೆ ಮೌಖಿಕವಾಗಿ ಮನವಿ ಮಾಡಿತ್ತು. ಆದರೆ, ಅಽಕೃತವಾಗಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಕೇಂದ್ರಕ್ಕೆ ಶಿ-Áರಸು ಮಾಡದಿರುವುದು ಈಗ ತಾಂತ್ರಿಕ ಅಡಚಣೆಯಾಗಿದೆ ಎನ್ನಲಾಗುತ್ತಿದೆ.

ದೇಹಲಿಯಲ್ಲಿ ಪ್ರತಿಭಟನೆ

ಇತ್ತಿಚ್ಚಿಗೆ ನಡೆದ ಅಽವೇಶನ ಸಂದರ್ಭದಲ್ಲಿ ರಾಯಚೂರು ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಮಂಜೂರು ಮಾಡಲು ಒತ್ತಾಯಿಸಿ ಕಲ್ಯಾಣ ಕರ್ನಾಟಕದ ೫ ಜನ ಹಾಗೂ ದಾವಣಗೆರೆ ಸಂಸದರು ಸೇರಿ ಒಟ್ಟು ೬ ಜನ ಸಂಸದರು ಸೇರಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮಾಡಿ ನಂತರ ಸಭಾಪತಿಗೆ ಮನವಿ ಸಲ್ಲಿಸಿದ್ದರು ಕೂಡ ಯಾವುದೇ ಪ್ರಸ್ತಾವನೆ ಇಲ್ಲವೆಂದು ಉತ್ತರ ನೀಡಿರುವುದರಿಂದ ಆಕ್ರೋಶಕ್ಕೆ ಕಾರಣವಾಗಿದೆ.

ಏಮ್ಸ್ ವಿಚಾರದಲ್ಲಿ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದಿರುವುದು ಅಽಕೃತ ಪ್ರಸ್ತಾವನೆಯಲ್ಲ ಎನ್ನುವ ರೀತಿಯಲ್ಲಿ ಕೇಂದ್ರ ಸಚಿವರು ಮಾತನಾಡಿದ್ದಾರೆ. ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಅಽಕೃತ ಪ್ರಸ್ತಾವನೆ ಸಲ್ಲಿಸದ ಕಾರಣಕ್ಕೆ ಅದು ತಿರಸ್ಕೃತವಾಗಿರಬಹುದು. ಈ ಕುರಿತು ಮತ್ತೊಮ್ಮೆ ಜಿಲ್ಲೆಯ ಸಚಿವ,ಶಾಸಕರ ಜತೆಗೂಡಿ ಪ್ರಸ್ತಾವನೆ ಸಲ್ಲಿಸಲಾಗುವುದು.

ಡಾ.ಬಸವರಾಜ ಕಳಸ, ಸಂಚಾಲಕ, ಏಮ್ಸ್ ಹೋರಾಟ ಸಮಿತಿ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net